Site icon Vistara News

Video: ಈ ಬಾಲಕಿಯರು ಕೂಡಿಟ್ಟಿದ್ದು ಕಂತೆ ಕಂತೆ ಹಣ; ಐಟಿ ಅಧಿಕಾರಿಗಳಿಗೆ ಕರೆ ಮಾಡಿ ಎನ್ನುತ್ತಿದ್ದಾರೆ ಜನ!

Girls Break Piggy Bank Viral Video

#image_title

ಮಕ್ಕಳು ಪಾಕೆಟ್​ ಮನಿ ಬಗ್ಗೆ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಬಹುತೇಕ ಮನೆಗಳಲ್ಲಿ ಪಾಲಕರು ತಮ್ಮ ಮಕ್ಕಳಿಗೆ ತಿಂಗಳಿಗೆ ಇಷ್ಟೋ, ಅಷ್ಟೋ ಎಂದು ಹಣ ನೀಡುವ ಮತ್ತು ಆ ಮಕ್ಕಳು ಅದನ್ನು ತಮ್ಮ ಪಿಗ್ಗಿ ಬ್ಯಾಂಕ್​​ (Piggy Bank)ನಲ್ಲಿ ಕೂಡಿಡುವ ಪರಿಪಾಠ ಬೆಳೆದುಕೊಂಡು ಬಂದಿರುತ್ತದೆ. ಯಾವುದಾದರೂ ಒಂದು ಮಹತ್ವದ ಕಾರಣ ಇದ್ದ ಹೊರತು ಆ ಪಿಗ್ಗಿ ಬ್ಯಾಂಕ್ ಒಡೆಯುವುದಿಲ್ಲ. ಈಗ ಅದೇ ಪಿಗ್ಗಿ ಬ್ಯಾಂಕ್​ ಮತ್ತು ಕೂಡಿಟ್ಟ ಹಣಕ್ಕೆ ಸಂಬಂಧಪಟ್ಟ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದ್ದು (Viral Video), ಇಬ್ಬರು ಬಾಲಕಿಯರ ಪಿಗ್ಗಿ ಬ್ಯಾಂಕ್​​ನಲ್ಲಿದ್ದ ಕಂತೆಕಂತೆ ಹಣ ನೋಡಿ, ನೆಟ್ಟಿಗರಿಗೇ ಶಾಕ್​ ಆಗಿದೆ. ‘ಐಟಿ ಅಧಿಕಾರಿಗಳನ್ನು ಕರೆಯಿರಿ’ ಎಂದು ಕಾಲೆಳೆಯುತ್ತಿದ್ದಾರೆ.

ಇಬ್ಬರು ಬಾಲಕಿಯರ ಪಿಗ್ಗಿ ಬ್ಯಾಂಕ್​ ನೋಡೋಕೇನೋ ಸಖತ್​ ಕ್ಯೂಟ್ ಆಗಿದೆ. 2000 ರೂಪಾಯಿ ನೋಟುಗಳ ಚಲಾವಣೆಯನ್ನು ಆರ್​ಬಿಐ ಹಿಂತೆಗೆದುಕೊಂಡ ಬೆನ್ನಲ್ಲೇ ಅವರು ಅದನ್ನು ಒಡೆದಿದ್ದಾರೆ. ಅಂದರೆ ಪಿಗ್ಗಿ ಬ್ಯಾಂಕ್​​ನಲ್ಲಿ 2000 ರೂ.ನೋಟುಗಳೂ ಇರುವುದು ಗೊತ್ತಿದ್ದ ಕಾರಣ ಅದನ್ನು ತೆಗೆದು, ಬ್ಯಾಂಕ್​​ನಲ್ಲಿ ಡಿಪೋಸಿಟ್ ಇಡಬೇಕಿತ್ತು. ಆ ನೋಟುಗಳನ್ನು ತೆಗೆಯಬೇಕು ಎಂದರೆ ಪಿಗ್ಗಿ ಬ್ಯಾಂಕ್​ ಒಡೆಯಲೇಬೇಕಿತ್ತು. ಹೀಗಾಗಿ ಬಾಲಕಿಯರ ಅಮ್ಮನೇ ಆ ಪಿಗ್ಗಿ ಬ್ಯಾಂಕ್​ ಒಡೆದಿದ್ದಾರೆ. ಅದನ್ನು ಒಡೆದಾಗ ಕಂತೆಕಂತೆ ನೋಟುಗಳು ಬಿದ್ದಿವೆ. ಬರೀ ಐದುನೂರು, 2 ಸಾವಿರ ನೋಟುಗಳೇ ಅದರಲ್ಲಿದ್ದವು. ಪುಟ್ಟ ಹುಡುಗಿಯರಂತೂ ಅದನ್ನು ಆಟವಾಡಲೇ ಶುರು ಮಾಡಿದ್ದರು.

ಮೊದಲು ಈ ವಿಡಿಯೊ ಶೇರ್​ ಆಗಿದ್ದು ವಾಸಿಮ್ ಮನ್ಸುರಿ ಎಂಬುವರು ಇನ್​ಸ್ಟಾಗ್ರಾಂ ಅಕೌಂಟ್​​ನಲ್ಲಿ. ಇದೀಗ ಭರ್ಜರಿ ವೈರಲ್ ಆಗುತ್ತಿದೆ. ವಿಡಿಯೊಕ್ಕೆ 3.6 ಕೋಟಿ ವೀಕ್ಷಣೆ ಬಂದಿದೆ. ಆದರೆ ಯಾವ ಊರಲ್ಲಿ ನಡೆದಿದ್ದು ಎಂಬುದು ಗೊತ್ತಾಗಿಲ್ಲ. ವಿಡಿಯೊ ನೋಡಿದ ಜನ ಶಾಕ್​​ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ. ‘ಈ ಹುಡುಗಿಯರ ಪಿಗ್ಗಿ ಬ್ಯಾಂಕ್​​ನಲ್ಲಿ ಇದ್ದಷ್ಟು ಹಣ, ನನ್ನ ಬ್ಯಾಂಕ್ ಅಕೌಂಟ್​ನಲ್ಲೂ ಇಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಅಯ್ಯೋ, ಪಿಗ್ಗಿ ಬ್ಯಾಂಕ್​​ನಲ್ಲಿ ಇಷ್ಟು ಹಣವಾ?’ ‘ಮೊದಲು ಆದಾಯ ತೆರಿಗೆ ಇಲಾಖೆಗೆ ಕರೆ ಮಾಡಿ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

Exit mobile version