ಬೆಂಗಳೂರು: ನಿಜವಾದ ʻಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು ಹಾಗೂ ʻರಾವುಲ್ಲʼ ಜತೆಗೂಡಿ ʻಕರಿಮಣಿ ಮಾಲಿಕʼ ನೀನಲ್ಲ ರೀಲ್ಸ್ ಶೇರ್ ಮಾಡಿದ ಬಳಿಕ ಇನ್ನಷ್ಟು ಪ್ರತಿಭೆಗಳು ಈ ರೀಲ್ಸ್‌ಗೆ ಲಿಪ್ ಸಿಂಕ್ ಮಾಡಿವೆ. ಇದುವರೆಗೆ ಈ ರೀಲ್ಸ್‌ಗೆ ಕ್ರೇಜ್ ಕಡಿಮೆಯಾಗಿಲ್ಲ. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್ (vickypedia) ʻಕರಿಮಣಿ ಮಾಲಿಕʼ ನೀನಲ್ಲ ರೀಲ್ಸ್‌ಗೆ ಇನ್ನಷ್ಟು ಮೆರಗು ನೀಡಿದರು. ಇದೀಗ ಗೋಕರ್ಣದ ವಿದೇಶಿಯರ ಬಾಯಲ್ಲೂ ʻಕರಿಮಣಿ ಮಾಲಿಕ ರಾವುಲ್ಲಾʼ ಸಾಂಗ್ ಸೌಂಡ್ ಮಾಡುತ್ತಿದೆ.
ಗೋಕರ್ಣದ (Gokarna) ಸಮುದ್ರ ದಂಡೆಯಲ್ಲಿ ಮತ್ತೆ ‘ಕರಿಮಣಿ ‘ ಸಾಂಗ್ ಕೇಳಿ ಬಂದಿದೆ. ವಿದೇಶಿಗರು ಈ ಹಾಡನ್ನು ಹಾಡುತ್ತ ಇರುವ ವೀಡಿಯೋ ಸಖತ್ ವೈರಲ್ ಆಗಿದೆ. ವಿದೇಶಿಗರು ಗಿಟಾರ್ ಬಾರಿಸುತ್ತಾ, ‘ಕರಿಮಣಿ ಮಾಲಿಕ ರಾವುಲ್ಲಾ..’ ಹಾಡನ್ನು ಹಾಡಿದ್ದಾರೆ. ಗೋಕರ್ಣದ ಬೀಚ್‌ನಲ್ಲಿ ವಿದೇಶಿಗರ ಬಾಯಲ್ಲಿ ಕನ್ನಡ ಹಾಡನ್ನು ಅಷ್ಟು ಮೆಲೋಡಿಯಸ್ ಆಗಿ ಕೇಳಿ ಕನ್ನಡಿಗರೇ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ: Karimani Malika Ninalla: ʻಕರಿಮಣಿ ಮಾಲೀಕ ನೀನಲ್ಲ’ ಮೂಲ ಹಾಡನ್ನು ಹಾಡಿದ ಗಾಯಕಿ ಸಿಕ್ಕೇ ಬಿಟ್ರು ನೋಡಿ!
ವಿದೇಶಿಯರ ಬಾಯಲ್ಲೂ ʻಕರಿಮಣಿʼ!
ಉಪೇಂದ್ರ’ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ ಅವರು. ಕನಕ ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್ ಮಾಡಿದ್ದರು. ಇದು ಸಖತ್ ವೈರಲ್ ಆಗಿತ್ತು. ಅಲ್ಲಿಂದ ಹಲವಾರು ಪ್ರತಿಭೆಗಳು ರೀಲ್ಸ್ ಹಂಚಿಕೊಂಡಿದೆ. ಅದರ ಜತೆಗೆ ಇನ್ನು ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಮಾಡಿದ ತಮ್ಮ ವಿಡಿಯೋಗಳಲ್ಲಿ “ರಾವುಲ್ಲಾ.. ರಾವುಲ್ಲಾ” ಎಂದು ಹೇಳಿರುವುದು ವೈರಲ್ ಆಗಿಬಿಟ್ಟಿದೆ.
ಇದನ್ನೂ ಓದಿ; Karimani Malika Ninalla: ʻಕರಿಮಣಿ ಮಾಲೀಕ ನೀನಲ್ಲ’ ಮೂಲ ಹಾಡನ್ನು ಹಾಡಿದ ಗಾಯಕಿ ಸಿಕ್ಕೇ ಬಿಟ್ರು ನೋಡಿ!
1999ರಲ್ಲಿ ʻಉಪೇಂದ್ರʼ ಸಿನಿಮಾ ಬಿಡುಗಡೆಯಾಗಿತ್ತು. 1999ರ ಅಕ್ಟೋಬರ್ 22ಕ್ಕೆ ಬಿಡುಗಡೆಯಾದ ಈ ಸಿನಿಮಾ ಹಿಟ್ ಆಗಿತ್ತು. ನಟಿ ಪ್ರೇಮಾ, ರವೀನಾ ಟಂಡನ್, ದಾಮಿನಿ ಮೂವರು ನಾಯಕಿಯರಾಗಿದ್ದರು. ಈ ಹಾಡು ಮಾತ್ರವಲ್ಲ ಸಿನಿಮಾದ ಇತರೆ ಹಾಡುಗಳು ಕೂಡ ಭಾರಿ ಸದ್ದು ಮಾಡಿದ್ದವು.
ಏನಿಲ್ಲ..ಏನಿಲ್ಲ ಪದ ಹುಟ್ಟಿದ್ದು ಹೇಗೆ?
ಆಗ ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ಇದೆ ಎನ್ನುವ ಗಾಸಿಪ್‌ಗಳು ಹುಟ್ಟಿಕೊಂಡಿದ್ದವು. ಹಾಗೇನೂ ಇಲ್ಲ ಎಂದು ಹೇಳಲು ʻಉಪೇಂದ್ರʼ ಸಿನಿಮಾದಲ್ಲಿ ಗುರು ಕಿರಣ್ ಈ ಹಾಡು ಮಾಡಲು ಪ್ಲಾನ್ ಮಾಡಿದ್ದರು. ಏನಿಲ್ಲ ಏನಿಲ್ಲ ಅಂತಲೇ ಶುರು ಮಾಡಿದ್ದರು. ಹಾಗೆ ಏನೀಲ್ಲ ಏನೀಲ್ಲ ನನ್ನ ನಿನ್ನ ನಡುವೆ ಏನಿಲ್ಲ… ಹೀಗೆ ಹಲವು ಪದಗಳು ಸೇರಿ ಒಂದು ಪಲ್ಲವಿ ಕೂಡ ಆಗಿತ್ತು. ಉಪ್ಪಿ ಹೆಸರಿನ ಸಿನಿಮಾಕ್ಕೂ ಗುರುಕಿರಣ್ ಸಂಗೀತ ಕೊಟ್ಟಿದ್ದರು.