Site icon Vistara News

Viral Video: ಕಣ್ಣು ಮಿಟುಕಿಸದೆ ನೋಡುವ ಡ್ಯಾನ್ಸ್‌ ಇದು! ಅಬ್ಬಬ್ಬಾ ಏನ್‌ ಸ್ಟೆಪ್ಸ್‌ ಗುರೂ…

gori gori dance

ಬೆಂಗಳೂರು: ಡ್ಯಾನ್ಸ್‌ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವುದು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಅದೇ ರೀತಿಯಲ್ಲಿ ಮತ್ತೊಂದು ಡ್ಯಾನ್ಸ್‌ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಭಾರೀ ಸದ್ದು ಮಾಡುತ್ತಿದೆ. ಗೋರಿ ಗೋರಿ ಎನ್ನುತ್ತಾ ಕುಣಿಯುತ್ತಿರುವ ಯುವಕ ಯುವತಿಯನ್ನು ಜನರು ಕಣ್ಣು ಮಿಟುಕಿಸದೆ (Viral Video) ನೋಡಲಾರಂಭಿಸಿದ್ದಾರೆ.

2004ರಲ್ಲಿ ಬಿಡುಗಡೆಯಾದ ಶಾರುಖ್‌ ಖಾನ್‌ ಅವರ ಮೈ ಹೂಂ ನ ಸಿನಿಮಾ ನಿಮಗೆ ನೆನಪಿರಬಹುದು. ಅದರಲ್ಲಿನ ಗೋರಿ ಗೋರಿ ಹಾಡು ಆಗ ಅನೇಕರ ಕಾಲು ಕುಣಿಯುವಂತೆ ಮಾಡಿತ್ತು. ಇದೀಗ ಅದೇ ಹಳೆ ಹಾಡಿಗೆ ಹೊಸ ರೀತಿಯಲ್ಲಿ ಜೋಡಿಯೊಂದು ನೃತ್ಯ ಮಾಡಿದೆ. ಸಾಕ್ಷಿ ಹೆಸರಿನ ನೃತ್ಯ ಕಲಾವಿದೆ ಆಶಿಶ್‌ ಖಂಡಲ್‌ ಹೆಸರಿನ ನೃತ್ಯ ಕಲಾವಿದನೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದು ಇನ್‌ಸ್ಟಾಗ್ರಾಂ ವೈರಲ್‌ ವಿಡಿಯೊ ಪಟ್ಟಿಗೆ ಸೇರಿಕೊಂಡಿದೆ.

ಇದನ್ನೂ ಓದಿ: Video Viral : ಕೈಯಲ್ಲಿ ಗರುಡ ರೇಖೆ ಇದೆ, ನಂಗೇನೂ ಆಗಲ್ಲ ಎಂದು ಹಾವು‌ ಹಿಡಿದು ಕಚ್ಚಿಸಿಕೊಂಡ! ಸತ್ತೇ ಹೋದ್ನಾ?

ಆಫ್‌ ಶೋಲ್ಡರ್‌ ಡ್ರೆಸ್‌ ತೊಟ್ಟಿರುವ ಸಾಕ್ಷಿ ಫ್ರೀ ಹೇರ್‌ ಬಿಟ್ಟುಕೊಂಡು ಕುಣಿದಿದ್ದಾರೆ. ಅವರಿಗೆ ಜತೆಯಾದ ಆಶಿಶ್‌ ಕಪ್ಪು ಬಣ್ಣದ ಪ್ಯಾಂಟ್‌ ಮತ್ತು ಟೀ ಶರ್ಟ್‌ ಮೇಲೆ ಕಡು ಬೂದು ಬಣ್ಣದ ಶರ್ಟ್‌ ಧರಿಸಿದ್ದಾರೆ. ಇವರಿಬ್ಬರು ಒಬ್ಬರಿಗೊಬ್ಬರು ಜತೆಯಾಗಿಕೊಂಡು ಹೆಜ್ಜೆ ಹಾಕುತ್ತಿದ್ದಾರೆ. ನೋಡುಗರು ಬಿಟ್ಟ ಕಣ್ಣು ಬಿಟ್ಟಂತೆ ನೋಡಿದ್ದಾರೆ. ಎಲ್ಲಿಯೂ ಒಂಚೂರೂ ತಪ್ಪದೆ ಈ ಜೋಡಿ ನೃತ್ಯ ಮಾಡಿದೆ.


ಈ ವಿಡಿಯೊವನ್ನು ಸಾಕ್ಷಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಆಶಿಶ್‌ನೊಂದಿಗೆ ನೃತ್ಯ ಮಾಡುವುದು ಯಾವಾಗಲೂ ಮಜಾ ಆಗಿರುತ್ತದೆ” ಎಂದು ಕ್ಯಾಪ್ಶನ್‌ನಲ್ಲಿ ತಿಳಿಸಿದ್ದಾರೆ. ಈ ವಿಡಿಯೊವನ್ನು ಜೂನ್‌ 5ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 6.3 ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆಗೊಂಡಿದೆ. 35 ಸಾವಿರದಷ್ಟು ಜನರು ವಿಡಿಯೊಗೆ ಲೈಕ್‌ ಮಾಡಿದ್ದಾರೆ. ನೂರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral News: 30 ವರ್ಷದ ಹಳೆಯ ಏರ್‌ ಪಾಸ್‌ ಮೂಲಕ ಒಂದೇ ವರ್ಷದಲ್ಲಿ 373 ವಿಮಾನ ಪ್ರಯಾಣ ಮಾಡಿದ!

ವಿಡಿಯೊಗೆ ಹಲವಾರು ರೀತಿಯ ಕಾಮೆಂಟ್‌ಗಳ ಸುರಿಮಳೆ ಬಂದಿದೆ. “ಅಬ್ಬಾ, ಎಂತಹ ಅದ್ಭುತ ನೃತ್ಯ”, “ಹಳೆಯ ಹಾಡಿಗೆ ನೃತ್ಯ ಮಾಡಿ ಆ ಹಾಡು ಟ್ರೆಂಡ್‌ ಆಗುವಂತೆ ಮಾಡಿದ್ದಕ್ಕೆ ಧನ್ಯವಾದಗಳು”, “ನಿಮ್ಮಿಬ್ಬರ ಡ್ಯಾನ್ಸ್‌ ಜೋಡಿ ತುಂಬಾನೆ ಚೆನ್ನಾಗಿದೆ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ “ಸೂಪರ್‌”, “ವಾವ್‌” ಎನ್ನುವಂತಹ ನೂರಾರು ಕಾಮೆಂಟ್‌ಗಳನ್ನು ಇಲ್ಲಿ ಕಾಣಬಹುದಾಗಿದೆ.

Exit mobile version