Site icon Vistara News

Viral News: ಇದು ಮೂಗಿನಿಂದ ಬಂದ ಕೊಳಲ ನಾದ! ಸರ್ಕಾರಿ ಶಾಲೆಯ ಶಿಕ್ಷಕನ ಕಲೆ ನೋಡಿ ಬೆಕ್ಕಸ ಬೆರಗಾದ ಜನ

flute with nose

#image_title

ಜೈಪುರ: ಭಾರತದವು ಕಲೆಗಳ ನಾಡು. ಇಲ್ಲಿ ಅದ್ಭುತ ಕಲೆಯಿಂದಲೇ ಪ್ರಸಿದ್ಧರಾದವರು ಸಾಕಷ್ಟು ಮಂದಿಯಿದ್ದಾರೆ. ಅದೇ ರೀತಿಯಲ್ಲಿ ರಾಜಸ್ಥಾನದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಇದೀಗ ತಮ್ಮ ಕಲೆಯ ಮೂಲಕವೇ ಸುದ್ದಿಯಲ್ಲಿದ್ದಾರೆ. ಎಲ್ಲರೂ ಬಾಯಿಯಿಂದ ಕೊಳಲನ್ನು ನುಡಿಸಿದರೆ ಇವರು ಮಾತ್ರ ತಮ್ಮ ಮೂಗಿನಿಂದಲೇ ಕೊಳಲನ್ನು ನುಡಿಸಿ ಸೈ (Viral News) ಎನಿಸಿಕೊಂಡಿದ್ದಾರೆ.

ರಾಜಸ್ಥಾನದ ಬಿಕಾನೇರ್‌ ನಗರದ ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ಬಸಂತ್‌ ಕುಮಾರ್‌ ಓಜಾ ಈ ರೀತಿಯ ಪ್ರತಿಭೆ ಇರುವ ವ್ಯಕ್ತಿ. ಅವರು ಕಳೆದ 32 ವರ್ಷಗಳಿಂದ ಕೊಳಲು ವಾದನ ಮಾಡುತ್ತಿದ್ದಾರೆ. ಅದರಲ್ಲಿ ಕಳೆದ 12 ವರ್ಷಗಳಿಂದ ಮೂಗಿನಲ್ಲೇ ಕೊಳಲು ಬಾರಿಸಿ ಕಲಾಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಮೂಗಿನಿಂದಲೂ ಕೊಳಲು ವಾದನ ಮಾಡಬಹುದು ಎನ್ನುವುದು ಬಸಂತ್‌ ಅವರಿಗೇ ತಿಳಿದಿರಲಿಲ್ಲವಂತೆ.

ಇದನ್ನೂ ಓದಿ: Viral News: ಬೆನ್ನತ್ತಿಕೊಂಡು ಬಂದವನಿಗೆ ಚಪ್ಪಲಿ ಏಟು ಕೊಟ್ಟ ವಿದ್ಯಾರ್ಥಿನಿ

ಬಿಕಾನೇರ್‌ನಲ್ಲಿ ಅಂತಾರಾಷ್ಟ್ರೀಯ ಒಂಟೆ ಉತ್ಸವದಲ್ಲಿ ಭಾಗವಹಿಸಲೆಂದು ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ತಮಾಷೆಗೆಂದು ಮೂಗಿನಿಂದ ಕೊಳಲು ವಾದಿಸಿದರಂತೆ. ಆಗ ಅದ್ಭುತವಾಗಿ ನಾದ ಮೂಡಿಬಂದಿದೆ. ಅದನ್ನು ಕಂಡ ಅವರ ಸ್ನೇಹಿತರು ವೇದಿಕೆಯ ಮೇಲೆ ನೀನು ಮೂಗಿನಲ್ಲೇ ಕೊಳಲು ವಾದನ ಮಾಡು ಎಂದು ಒತ್ತಾಯಿಸಿದ್ದಾರೆ. ಅದರಂತೆ ಬಸಂತ್‌ ಮಾಡಿದ್ದು, ಅದು ಅಲ್ಲಿದ್ದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬಸಂತ್ ಕುಮಾರ್ ಅವರು ತಮ್ಮ ಮೂಗಿನ ಮೂಲಕ ಅರೆ-ಶಾಸ್ತ್ರೀಯ, ರಾಜಸ್ಥಾನಿ ಜಾನಪದ ಮತ್ತು ಚಲನಚಿತ್ರ ಮಧುರಗಳಂತಹ ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ನುಡಿಸುತ್ತಾರೆ. ಇದಲ್ಲದೆ, ಅವರು ಹಲವಾರು ಇತರ ಸಂಗೀತ ವಾದ್ಯಗಳನ್ನು ನುಡಿಸುವಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದಾರೆ. ಕೊಳಲು ನುಡಿಸುವಲ್ಲೇ ವಿಶ್ವ ದಾಖಲೆ ಮಾಡಬೇಕು ಎನ್ನುವುದು ಅವರ ಕನಸಾಗಿದೆ. ಸದ್ಯ ಅವರು 15 ವಿದ್ಯಾರ್ಥಿಗಳಿಗೆ ಕೊಳಲು ವಾದನವನ್ನು ಹೇಳಿಕೊಡುತ್ತಿದ್ದಾರೆ.

Exit mobile version