ವಿಶವದ ಅತೀ ಎತ್ತರದ ಮನುಷ್ಯನ ಎತ್ತರ ನೋಡಿ ಇತ್ತೀಚೆಗಷ್ಟೇ ಹೌಹಾರಿದ್ದರೆ, ಈಗ ವಿಶ್ವದ ಅತ್ಯಂತ ಕುಳ್ಳ ಮನುಷ್ಯನನ್ನು ನೋಡಿ ಆಶ್ಚರ್ಯಚಕಿತರಾಗುವ ಕಾಲ ಬಂದಿದೆ. ಯಾಕೆಂದರೆ, ಈವರೆಗಿನ ಪ್ರಕಾರ ವಿಶ್ವದಲ್ಲೇ ಅತ್ಯಂತ ಕುಬ್ಜ ಮನುಷ್ಯ ಎಂಬ ಗಿನ್ನಿಸ್ ದಾಖಲೆಯನ್ನು ಈಗಷ್ಟೇ ಬರೆದಿರುವ ಇರಾನ್‌ನ ಅಫ್ಶೀನ್‌ನ ಉದ್ದ ಕೇವಲ ೬೫.೨೪ ಸೆಂಟಿ ಮೀಟರು!
ಹೌದು. ಮೊನ್ನೆ ಮೊನ್ನೆ ಡಿಸೆಂಬರ್ ೧೩ರಂದು ದುಬೈನ ಗಿನ್ನಿಸ್ ದಾಖಲೆಯ ಕಚೇರಿಗೆ ಓಡೋಡಿ ಬಂದ ಅಫ್ಶೀನ್ ಇಸ್ಮಾಯಿಲ್ ಗದರ್ಝಾದೆ ಅವರನ್ನು ಅಳೆಯಲು ಹೊರಟ ತಂಡಕ್ಕೆ ಈತನ ಉದ್ದ್ ನೋಡಿಯೇ ಶಾಕ್ ಆಯಿತಂತೆ. ಯಾಕೆಂದರೆ ಟೇಪ್ ಹಿಡಿದು ಆತನ ಪಕ್ಕ ನಿಂತರೆ ಆತ ಕೇವಲ ೬೫. ೨೪ ಸೆಂಟಿಮೀಟರಷ್ಟೇ ಉದ್ದವಿದ್ದ ಎನ್ನಲಾಗಿದೆ. ಅಂದರೆ ಕೇವಲ ಎರಡು ಅಡಿ ೧.೬ ಇಂಚುಗಳಂತೆ!
ಈವರೆಗೆ ಗಿನ್ನಿಸ್ ಬುಕ್‌ನಲ್ಲಿ ದಾಖಲಾದಂತೆ ವಿಶ್ವದ ಅತೀ ಕುಳ್ಳ ಮನುಷ್ಯನೆಂಬ ಹೆಗ್ಗಳಿಕೆ ಬೇರೆ ಹೆಸರಿನಲ್ಲಿತ್ತು. ಆತನಿಗಿಂತ ಇನ್ನೂ ಏಳು ಸೆಂಟಿಮೀಟರುಗಳಷ್ಟು ಕಡಿಮೆ ಇದ್ದ ಇಪ್ಪತ್ತರ ಹರೆಯದ ಅಫ್ಶೀನ್ ಈಗ, ವಿಶ್ವದ ಅತ್ಯಂತ ಕುಳ್ಳ ಮನುಷ್ಯ ಎಂಬ ಹೆಸರನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ! ಈ ಮೊದಲು ಕೊಲಂಬಿಯಾದ ೩೬ರ ಹರೆಯದ ನೈನೋ ಖ್ಯಾತಿಯ ಎಡ್ವರ್ಡ್ ಹರ್ನಾಂಡೆಸ್ ಹೆಸರಿನಲ್ಲಿ ಈ ದಾಖಲೆಯಿತ್ತು ಎನ್ನಲಾಗಿದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ಅಫ್ಶೀನ್ ಹುಟ್ಟುವಾಗ ಕೇವಲ ೭೦೦ ಗ್ರಾಂ ತೂಕ ಹೊಂದಿದ್ದನಂತೆ. ನಂತರ ೬.೫ ಕೆಜಿವರೆಗೂ ಬೆಳೆದಿದ್ದಾನೆ. ಅಫ್ಶೀನ್ ಎಲ್ಲರಂತೆ ಸಾಮಾನ್ಯವಾಗಿ ಜೀವಿಸುತ್ತಿದ್ದು, ಬದುಕು ಬಹಳ ಕಷ್ಟವಾಗಿತ್ತು. ತನ್ನ ಗಾತ್ರದ ಕಾರಣದಿಂದ ಶಾಲೆಗೆ ಹೋಗುವುದು ಬಹಳ ಕಷ್ಟವಾಗಿತ್ತು. ಇದರಿಂದ ಆತನ ಶಿಕ್ಷಣದ ಮೇಲೆ ಒಟ್ಟಾರೆಯಾಗಿ ಕೆಟ್ಟ ಪರಿಣಾಮವೂ ಬೀರಿತ್ತು ಎನ್ನಲಾಗಿದೆ.
ಇದನ್ನೂ ಓದಿ | Viral post | ದೇವಸ್ಥಾನದೆದುರು ಹೊಸ ಹೆಲಿಕಾಪ್ಟರ್ ತಂದು ವಾಹನ ಪೂಜೆ ಮಾಡಿಸಿದ ಉದ್ಯಮಿ!
ಈತನ ಈ ಕುಬ್ಜತೆಗಾಗಿ ಸಾಕಷ್ಟು ಚಿಕಿತ್ಸೆಗಳನ್ನೂ ಈತನ ಹೆತ್ತವರು ಮಾಡಿದ್ದು, ಇದರಿಂದ ಯಾವ ಪ್ರಯೋಜನವೂ ಆಗಿಲ್ಲ. ಈತನ ಚಿಕಿತ್ಸೆಗಳಿಂದಾಗಿ ಈತ ಶಿಕ್ಷಣಕ್ಕೆ ಸಾಕಷ್ಟು ತೊಂದರೆಯಾಗಿದೆ. ಈ ಕಾರಣದಿಂದಾಗಿ ಆತ ಕಲಿಕೆಯಲ್ಲಿ ಹಿಂದುಳಿಯಬೇಕಾಯಿತು. ಆದರೆ, ಮಾನಸಿಕವಾಗಿ ಈತ ಮೊದಲಿನಿಂದಲೂ ಆರೋಗ್ಯವಾಗಿದ್ದು ಯಾವ ತೊಂದರೆಯೂ ಇಲ್ಲ ಎಂದು ಆತನ ಹೆತ್ತವರು ತಿಳಿಸಿದ್ದಾರೆ.
ಈತನ ತಂದೆ ಕಟ್ಟಡ ಕಾರ್ಮಿಕರಾಗಿದ್ದು, ಈತನಿಗೆ ತನ್ನ ತಂದೆಯ ಕೆಲಸವನ್ನೇ ಮಾಡಲೂ ತನ್ನ ಗಾತ್ರದ ಕಾರಣದಿಂದ ಸಾಧ್ಯವಾಗುತ್ತಿಲ್ಲ. ಆತನಿಗೆ ಆತನ ಹಳ್ಳಿಯಲ್ಲಿ ಯಾವ ಕೆಲಸವೂ ಸಿಗುತ್ತಿಲ್ಲ ಅಥವಾ ಹೊಂದಿಕೆಯಾಗುತ್ತಿಲ್ಲ. ಅಫ್ಶೀನ್ ಈ ಹಿನ್ನೆಲೆಯಲ್ಲಿ ದುಬೈನ ಗಿನ್ನಿಸ್ ದಾಖಲೆಯ ಕಚೇರಿಗೆ ಭೇಟಿ ನೀಡಿ ಬುರ್ಜ್ ಖಲೀಪಾ ಸೇರಿದಂತೆ ದುಬೈನ ತಾಣಗಳಲ್ಲಿ ಪ್ರವಾಸದ ಖುಷಿ ಅನುಭವಿಸಿ ಮರಳಿದ್ದಾನೆ.
ಇದನ್ನೂ ಓದಿ | Viral video | ಹಿಮ ಸುರಿಯುವುದನ್ನು ಮೊದಲ ಬಾರಿ ನೋಡಿ ಹುಚ್ಚೆದ್ದು ಕುಣಿದ ಒಂಟೆ!