Site icon Vistara News

Viral news | ಹಾದಿ ಮಧ್ಯೆ ಹೆರಿಗೆ, ಉಪಯೋಗವಾಗಿದ್ದು ಫೋನ್‌ ಚಾರ್ಜರ್!

charger

ಚಾರ್ಜ್‌ ಮಾಡುವುದನ್ನು ಹೊರತುಪಡಿಸಿದರೆ ಫೋನ್‌ ಚಾರ್ಜರ್‌ ಬೇರೆ ಯಾವ ಕೆಲಸಕ್ಕಾದರೂ ಉಪಾಯಕ್ಕೆ ಬರಲು ಸಾಧ್ಯವೇ ಎಂದು ನಾವು ಯೋಚಿಸಿದರೆ, ಇದನ್ನು ಈ ಯುಎಸ್‌ ದಂಪತಿಗಳಿಬ್ಬರು ಸುಳ್ಳು ಮಾಡಿದ್ದಾರೆ. ಅವರಿಗೆ ಹಾದಿ ಮಧ್ಯೆ ಹೆರಿಗೆಗೆ ಉಪಯೋಗಕ್ಕೆ ಬಂದಿದ್ದು ಎರಡು ಚಾರ್ಜರ್‌ಗಳು. ಕೇಳಿ ಶಾಕ್‌ ಆದರೂ ಇದು ಸತ್ಯ!

ಯುಎಸ್‌ನ ಎಮಿಲಿ ವಾಡೆಲ್‌ ಎಂಬಾಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ, ʻಅತ್ಯಂತ ಅರ್ಜೆಂಟಲ್ಲಿ ನಮ್ಮ ಮನೆಯೊಳಗೆ ಕಾಲಿಟ್ಟ ಹುಡುಗಿʼ ಎಂದು ಬರೆದುಕೊಂಡು ಆಕೆಯ ಫೋಟೋ ಶೇರ್‌ ಮಾಡಿದ್ದಾಳೆ. ಆಕೆ ಹೇಳಿಕೊಂಡಂತೆ, ಇತ್ತೀಚೆಗೆ ಇದ್ದಕ್ಕಿದ್ದಂತೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯ ಗಂಡ ಸ್ಟೀಫನ್‌ ವಾಡೆಲ್‌ ಆಕೆಯನ್ನು ಕಾರಿನಲ್ಲಿ ಕೂರಿಸಿ ಆಸ್ಪತ್ರೆಯ ದಾರಿ ಹಿಡಿದಿದ್ದಾನೆ. ಆದರೆ ಆಸ್ಪತ್ರೆ ಸೇರುವ ಮೊದಲೇ ಹೈವೇಯಲ್ಲಿ ಈಕೆಯ ಹೆರಿಗೆ ನೋವು ತೀವ್ರವಾಗಿದೆ. ಸ್ಟೀಫನ್‌ಗೆ ಏನು ಮಾಡುವುದೆಂದು ತಿಳಿಯದೆ, ಕಾರನ್ನು ರಸ್ತೆ ಬದಿಯಲ್ಲೇ ಪಾರ್ಕ್‌ ಮಾಡಿಸಿ ತನ್ನ ಹೆಂಡತಿಗೆ ಹೆರಿಗೆ ಮಾಡಿಸಲು ಹೊರಟಿದ್ದಾನೆ. ಅವರದೇ ಕಾರಿನೊಳಗೆ ಎಮಿಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಮಗು ಹಾಗೂ ಅಮ್ಮ ಇಬ್ಬರೂ ಆರೋಗ್ಯವಾಗಿದ್ದಾರೆ.‌‌

ಇದನ್ನೂ ಓದಿ | Bharat Jodo Yatra | ಬಾಲಕಿಯೊಬ್ಬಳು ಚಪ್ಪಲಿ ಹಾಕಿಕೊಳ್ಳಲು ನೆರವಾದ ರಾಹುಲ್‌ ಗಾಂಧಿ, ವಿಡಿಯೊ ವೈರಲ್

ಈ ಇಡೀ ಘಟನೆಯನ್ನು ಆಕೆ ವಿವರಿಸುವುದು ಹೀಗೆ. “ಕಾರಿನಲ್ಲಿ ನನ್ನನ್ನು ನನ್ನ ಗಂಡ ಆಸ್ಪತ್ರೆಯ ದಾರಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ನನ್ನ ನೋವು ತೀವ್ರವಾಯಿತು. ಮಗು ಇನ್ನೇನು ಹೊರಗೆ ಬಂದೇಬಿಡುತ್ತದೆ ಎಂದು ಅನಿಸಿತು. ನನ್ನ ನೀರಿನ ಚೀಲ ಒಡೆದಿರಲಿಲ್ಲವಾದರೂ, ನನಗೆ ಆಕೆಯ ತಲೆ ಇನ್ನೇನು ಹೊರಗೆ ಬಂದೇ ಬಿಟ್ಟಿತು ಅನಿಸಲು ಶುರುವಾಯಿತು. ಅದಕ್ಕಾಗಿ, ʻಮಗು ಹೊರಗೆ ಬರುತ್ತಿದೆ, ದಯವಿಟ್ಟು ಹೆಲ್ಪ್‌ ಮಾಡುʼ ಎಂದು ನನ್ನ ಸ್ಟೀಫನ್‌ನನ್ನು ಕೂಗಿದೆ. ಆತ ಕೂಡಲೇ ಅಲ್ಲೇ ಬದಿಯಲ್ಲಿ ಕಾರ್‌ ಪಾರ್ಕ್‌ ಮಾಡಿ, ಹೆರಿಗೆಗೆ ಸಹಾಯ ಮಾಡಿದ. ಆದರೆ ಮಗುವಿನ ಬಾಯಿ ಹಾಗೂ ಮೂಗಿನಲ್ಲಿ ಸೇರಿಕೊಂಡಿದ್ದ ದ್ರವವನ್ನು ನಾನು ಕೂಡಲೇ ಹೊರತೆಗೆಯಬೇಕಾಗಿತ್ತು. ನನ್ನ ಬಾಯಿಯಿಂದಷ್ಟೇ ಇದನ್ನು ಮಾಡಬೇಕಿತ್ತು. ಆಗ ಏನು ಮಾಡಬೇಕೆಂದೇ ತಿಳಿಯದೆ, ಕೈಕಾಲೇ ಆಡಲಿಲ್ಲ. ಸ್ಟೀಫನ್‌ ಆಗ ಕಾರಿನಲ್ಲಿದ್ದ ಎರಡು ಫೋನ್‌ ಚಾರ್ಚರ್‌ಗಳ ಮೂಲಕ ಮಗುವಿನ ಹೊಕ್ಕಳ ಬಳ್ಳಿಯನ್ನು ಕಟ್ಟಿದ. ಆ ಮೂಲಕ ನನಗೆ ಆಕೆಯ ಬಾಯಿ ಹಾಗೂ ಮೂಗಿಗೆ ಹೊಕ್ಕಿದ್ದ ನೀರನ್ನು ಹೊರತೆಗೆಯಲು ಸಹಾಯವಾಯಿತು. ಕಾರಿನೊಳಗೆ ಇದನ್ನೆಲ್ಲ ಮಾಡಲು ಕಷ್ಟವಾಗಿತ್ತು. ಆದರೆ, ಇದ್ದುದರಲ್ಲೇ ಹೇಗೋ ಮಾಡಿದೆವು” ಎಂದು ಬರೆದುಕೊಂಡಿದ್ದಾಳೆ.

ಹೆರಿಗೆಯಾದ ತಕ್ಷಣ ಮಗುವನ್ನು ಹಾಗೆಯೇ ಎದೆಗವಚಿಕೊಂಡು ಹಾಲು ಕುಡಿಸಿದ್ದಾಳೆ. ಸುಮಾರು ಅರ್ಧ ಗಂಟೆ ನಾನು ಹೀಗೆ ಮಾಡಿದೆ ಎಂದು ಆಕೆ ವಿವರಿಸಿದ್ದಾಳೆ. ಮಗುವಿಗೆ ಹುಟ್ಟಿದ ತಕ್ಷಣ ಅಮ್ಮನ ಚರ್ಮದ ಸ್ಪರ್ಷ ಕೂಡಾ ಬಹಳ ಮುಖ್ಯ. ಹಾಗಾಗಿ ಕೂಡಲೇ ಈ ರೀತಿ ಮಾಡಿದ್ದು, ಮಗು ಯಾವುದೇ ತೊಂದರೆಯಿಲ್ಲದೆ ಹಾಲು ಕುಡಿದಿದ್ದಾಳೆ. ಜೊತೆಗೆ ಮೊದಲ ಹಾಲು ಕುಡಿಸುವುದು ಬಹಳ ಅಗತ್ಯ ಕೂಡಾ ಎಂದು ವಿವರಿಸಿದ್ದಾಳೆ.

ಈ ಇಡೀ ಘಟನೆಯ ಸಂದರ್ಭ ಫೋನ್‌ ಮುಖಾಂತರ ತನ್ನ ಸಹೋದರಿಯ ಜೊತೆ ಸಂಪರ್ಕದಲ್ಲಿದ್ದು, ಆಕೆ ಫೋನ್‌ನಲ್ಲಿ ವಿವರಿಸಿದಂತೆಯೇ ಆಕೆಯ ಗಂಡ ಸ್ಟೀಫನ್‌ ಮಾಡಿದ್ದಾನೆ. ಜೊತೆಗೆ ಆಂಬ್ಯುಲೆನ್ಸ್‌ಗೂ ಫೋನ್‌ ಮಾಡಿದ್ದಾರೆ. ಆಂಬ್ಯುಲೆನ್ಸ್‌ ಬರುವಷ್ಟರಲ್ಲಿ ಹೆರಿಗೆಯಾಗಿದ್ದು ಈ ಎಲ್ಲ ಕೆಲಸಗಳೂ ಮುಗಿದಿದ್ದವು. ಹೈವೇ ಮಧ್ಯೆ ಹೀಗಾಗಿದ್ದರಿಂದ ನಮಗೆ ಬೇರೆ ದಾರಿಯೇ ಇರಲಿಲ್ಲ. ಇದೊಂದು ಮರೆಯಲಾಗದ ಅದ್ಭುತ ಅನುಭವ ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ | Punjab MMS Scandal | ಹಾಸ್ಟೆಲ್​ ಹುಡುಗಿಯ ವಿಡಿಯೋ ವೈರಲ್ ಮಾಡಿದ ಶಿಮ್ಲಾ ಹುಡುಗ ಅರೆಸ್ಟ್​​

Exit mobile version