Site icon Vistara News

Double Marriage | ಈ ದೇಶದಲ್ಲಿ ಡಬಲ್ ಮದುವೆ ಆಗದಿದ್ದರೆ ಜೈಲು ಗ್ಯಾರಂಟಿನಾ?

Double Marriage

ನವ ದೆಹಲಿ: ಕೆಲವೊಬ್ಬರಿಗೆ ಒಂದು ಮದುವೆ ಆಗುವುದೇ ಕಷ್ಟ. ವಯಸ್ಸು ಮೀರಿದರೂ ಹೆಣ್ಣು ಸಿಗುವುದಿಲ್ಲ. ಅದೇ ಕೊರಗಿನಲ್ಲಿ ಕೆಲವರು ಮಾನಸಿಕ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಮದುವೆ ಆಗದೇ ಇದ್ದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ, ಈ ದೇಶದಲ್ಲಿ ಒಬ್ಬ ವ್ಯಕ್ತಿ ಇಬ್ಬರು ಮಹಿಳೆಯರನ್ನು (Double Marriage) ಮದವೆ ಆಗಲೇಬೇಕು! ಹೌದು, ಕೇಳಲು ಆಶ್ಚರ್ಯವಾದರೂ ಇದು ನಿಜ. ಎರಿಟ್ರಿಯಾ ಎಂಬ ಆಫ್ರಿಕಾದ ರಾಷ್ಟ್ರದಲ್ಲಿ ಇಂಥದೊಂದು ರೂಲ್ಸ್ ಮಾಡಲಾಗಿದೆ. ಒಂದು ವೇಳೆ ಡಬಲ್ ಮ್ಯಾರೇಜ್ ಆಗಿದ್ದರೆ ಜೈಲಿನಲ್ಲಿ ಮುದ್ದೆ ಮುರಿಯೋದು ತಪ್ಪುವುದಿಲ್ಲ! ಎರಿಟ್ರಿಯಾ ದೇಶದ ಈ ವಿಚಿತ್ರ ರೂಲ್ಸ್ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಸುದ್ದಿ ನಿಜವೇ?

ಆಫ್ರಿಕಾದ ಕೆಂಪು ಸಮುದ್ರದ ತಟದಲ್ಲಿರುವ ಚಿಕ್ಕ ರಾಷ್ಟ್ರವೇ ಎರಿಟ್ರಿಯಾ (Eritrea). ಈ ದೇಶ ಯಾವಾಗಲೂ ಯುದ್ಧದ ಮೋಡ್‌ನಲ್ಲೇ ಇರುತ್ತದೆ. ತನ್ನ ನೆರೆ ಹೊರೆಯ ರಾಷ್ಟ್ರಗಳೊಂದಿಗೆ ಮೇಲಿಂದ ಮೇಲೆ ಯುದ್ಧ ಮಾಡುತ್ತಲೇ ಇರುತ್ತದೆ. ಇದರಿಂದಾಗಿ ದೇಶದಲ್ಲಿ ಗಂಡಸರ ಸಂಖ್ಯೆ ಕಡಿಮೆಯಾಗಿ ಮಹಿಳೆಯರ ಸಂಖ್ಯೆಯೇ ಜಾಸ್ತಿಯಾಗುತ್ತಿದೆ. ಯುದ್ಧದ ಸೈಡ್ ಎಫೆಕ್ಟ್ ಈ ಡಬಲ್ ಮ್ಯಾರೇಜ್!

ಸದಾ ಯುದ್ಧದಲ್ಲಿ ತೊಡಗಿರುವುದರಿಂದ ದೇಶದ ಯುವಕರು ಯುದ್ಧದಲ್ಲಿ ಅನಿವಾರ್ಯವಾಗಿ ಪಾಲ್ಗೊಳ್ಳಲೇಬೇಕಾಗುತ್ತದೆ. ಯುದ್ಧ ಅಂದ ಮೇಲೆ ಸಾವು ನೋವು ಸಹಜ. ಹಾಗಾಗಿ, ಸಾಕಷ್ಟು ಯುವಕರು ಯುದ್ಧದಲ್ಲಿ ಸಾವಿಗೀಡಾಗುತ್ತಿರುವುದರಿಂದ ದೇಶದಲ್ಲಿ ವಧುಗಳಿಗೆ ವರಗಳೇ ಸಿಗುತ್ತಿಲ್ಲ. ಯುದ್ಧದಲ್ಲಿ ಬದುಕುಳಿದು ಬರುವ ಯುವಕರು, ಗಂಡಸರೇ ಕಡ್ಡಾಯವಾಗಿ ಎರಡರೆಡು ಮದುವೆ ಆಗಲೇಬೇಕು ಎಂಬ ನಿಯಮವನ್ನು ಅಲ್ಲಿನ ಸರ್ಕಾರ ಜಾರಿಗೆ ತಂದಿದೆ. ಒಂದೊಮ್ಮೆ ಎರಡನೇ ಮದುವೆಯಾಗಲು ಒಪ್ಪದಿದ್ದರೆ ಅಂಥವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಒಂದು ವೇಳೆ, ಎರಡಕ್ಕಿಂತ ಹೆಚ್ಚು ಮದುವೆಯಾಗಿದ್ದರೆ ಅದು ಅಪರಾಧ ಕೂಡ ಅಲ್ಲ!

ಆದರೆ, ಈ ಸುದ್ದಿ ನಿಜವಲ್ಲ!
ಎರಿಟ್ರಿಯಾ ದೇಶದಲ್ಲಿ ಎರಡು ಮದುವೆ ಕಡ್ಡಾಯ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಆದರೆ ನಿಜವಾಗಿಯೂ ಆ ರೀತಿಯ ವ್ಯವಸ್ಥೆ ಎರಿಟ್ರಿಯಾ ದೇಶದಲ್ಲಿ ಇದೆಯೇ? ಬಿಬಿಸಿ ವರದಿಯ ಪ್ರಕಾರ, ಅಂಥ ಯಾವುದೇ ನಿಯಮಗಳಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿದೆ.

ಡಬಲ್ ಮ್ಯಾರೇಜ್ ಸುದ್ದಿಯನ್ನು ಮೊದಲಿಗೆ ಕೆನ್ಯಾದ ಪತ್ರಿಕೆಯೊಂದರ ಇತ್ತೀಚೆಗೆ ವ್ಯಂಗ್ಯ ಕಾಲಂನಲ್ಲಿ ಪ್ರಕಟವಾಯಿತು. ಇದೇ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಲಾರಂಭಿಸಿತು. ಎರಿಟ್ರಿಯಾ ದೇಶದಲ್ಲಿ ಬಹುಪತ್ನಿ ಪದ್ಧತಿಯನ್ನು ನಿಷೇಧ ಮಾಡಲಾಗಿದೆ ಎಂದು 2016ರಲ್ಲೇ ಎರಿಟ್ರಿಯಾದ ಸಂವಹನ ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ Marriage Invitation | ಫಾರ್ಮಾಸಿಸ್ಟ್- ನರ್ಸ್ ಜೋಡಿಯ ವೆಡ್ಡಿಂಗ್ ಇನ್ವಿಟೇಷನ್‌ ಕಾರ್ಡ್ ವೈರಲ್‌

Exit mobile version