Site icon Vistara News

Viral Video : ಉಲಾಲಾ ಉಲಾಲಾ ಎನ್ನುತ್ತಿರುವ ಈ ಜೋಡಿಯ ನೃತ್ಯ ನೋಡದೇ ಇರಲು ಸಾಧ್ಯವೇ?

instagram viral dance

#image_title

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನೃತ್ಯಗಳ ವಿಡಿಯೊಗಳು ಆಗಾಗ ವೈರಲ್‌ ಆಗುತ್ತಿರುತ್ತವೆ. ಅದರಲ್ಲೂ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಂತೂ ಡ್ಯಾನ್ಸ್‌ಗಳ ವಿಡಿಯೋಗಳದ್ದೇ ಹಬ್ಬ. ಹೀಗಿರುವಾಗ ಇಬ್ಬರು ನೃತ್ಯ ಕಲಾವಿದರು ಮಾಡಿರುವ ನೃತ್ಯ ಇನ್‌ಸ್ಟಾಗ್ರಾಂನಲ್ಲಿ ಭಾರೀ ವೈರಲ್‌ (Viral Video) ಆಗಿದೆ.

2011ರಲ್ಲಿ ವಿದ್ಯಾಬಾಲನ್‌ ಮತ್ತು ನಾಸೀರುದ್ದೀನ್‌ ಶಾ ನಟನೆಯ ʼದಿ ಡರ್ಟಿ ಪಿಚ್ಚರ್‌ʼ ಸಿನಿಮಾ ಬಿಡುಗಡೆಯಾದಾಗ ಅದರ ಹಾಡುಗಳ ಎಲ್ಲರ ಗಮನ ಸೆಳೆದಿದ್ದವು. ಅದರಲ್ಲೂ ಬಪ್ಪಿ ಲಹಿರಿ ಮತ್ತು ಶ್ರೇಯಾ ಘೋಶಾಲ್‌ ಕಂಠದಲ್ಲಿ ಮೂಡಿಬಂದ ʼಉಲಾಲಾ ಉಲಾಲಾʼ ಹಾಡಂತೂ ಎಲ್ಲರ ಕಾಲನ್ನೂ ಕುಣಿಸಿಬಿಟ್ಟಿತ್ತು. ಇದೀಗ ಅದೇ ಹಾಡಿಗೆ ಜೋಡಿಯೊಂದು ನೃತ್ಯ ಮಾಡಿದೆ.

ಇದನ್ನೂ ಓದಿ: Viral News : ಸಾಕು ನಾಯಿಗಳನ್ನು ಕೂಡಿ ಹಾಕಿ 6 ತಿಂಗಳು ಟ್ರಿಪ್‌ ಹೋದ ಮಾಲೀಕ!
ಇನ್‌ಸ್ಟಾಗ್ರಾಂನಲ್ಲಿ ನೃತ್ಯ ಕಲಾವಿದ ಮೋಹಿತ್‌ ಜೈನ್‌ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ನೃತ್ಯ ಕಲಾವಿದೆ ಕೇಶಾ ಜೈನ್‌ ಅವರೊಂದಿಗೆ ಉಲಾಲಾ ಉಲಾಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಬ್ಬರೂ ಜತೆಯಲ್ಲಿ ಕುಣಿಯುತ್ತಿದ್ದರೆ ನೋಡಿದವರಿಗೂ ಕುಣಿಯಬೇಕು ಎನಿಸುವಷ್ಟು ಚೆನ್ನಾಗಿದೆ ಅವರ ನೃತ್ಯ.

ಈ ವಿಡಿಯೊವನ್ನು ಜೂನ್‌ 7ರಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊವನ್ನು 1.8 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 1.32 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ಈ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ.

ಇದನ್ನೂ ಓದಿ: Viral News : ನಾಯಿ ನೋಡಿಕೊಂಡು ಇರೋದಕ್ಕೆ 1 ಕೋಟಿ ರೂ. ಸಂಬಳ!
ಈ ವಿಡಿಯೊಗೆ ಮೆಚ್ಚುಗೆಯ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ. ಅನೇಕರು ಈ ಜೋಡಿಯ ನೃತ್ಯವನ್ನು ಹಾಡಿ ಹೊಗಳಿದ್ದಾರೆ. “ಈ ಹಾಡಿಗೆ ಈವರೆಗೆ ನೋಡಿರುವ ನೃತ್ಯಗಳಲ್ಲಿ ಇದೇ ದಿ ಬೆಸ್ಟ್‌”, “ಇಬ್ಬರೂ ನೃತ್ಯದಲ್ಲಿ ಎಕ್ಸ್‌ಪರ್ಟ್‌ ಇದ್ದೀರ”, “ಕಣ್ಣು ಮಿಣುಕಿಸದೆ ಈ ವಿಡಿಯೊ ನೋಡಿದೆ”, “ಹತ್ತಾರು ಬಾರಿ ಈ ವಿಡಿಯೊವನ್ನು ನೋಡಿದರೂ ಬೇಸರ ಬಂದಿಲ್ಲ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಸಾವಿರಾರು ಮಂದಿ, “ವಾವ್‌”, “ಸೂಪರ್‌” ಎನ್ನುವಂತಹ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.

Exit mobile version