Site icon Vistara News

Viral News : ಈ ದೇಶಕ್ಕೆ ಹೋಗಿ ವಾಸಿಸೋದಾದರೆ ಅಲ್ಲಿನ ಸರ್ಕಾರವೇ ನಿಮಗೆ ಕೊಡುತ್ತೆ 71 ಲಕ್ಷ ರೂ!

ireland gives money to stay

#image_title

ಬೆಂಗಳೂರು: ವಿದೇಶಗಳಿಗೆ ಹೋಗಿ ಅಲ್ಲಿಯೇ ಸೆಟಲ್‌ ಆಗಬೇಕು ಎನ್ನುವುದು ಅನೇಕರ ಕನಸು. ಆದರೆ ವಿದೇಶಕ್ಕೆ ಹೋಗುವುದೇ ದೊಡ್ಡ ಖರ್ಚಿನ ಹಾದಿ. ಇನ್ನು ಅಲ್ಲಿಯೇ ಸೆಟಲ್‌ ಆಗಬೇಕು ಎಂದರೆ ಅದಕ್ಕೆ ಕೋಟಿ ಕೋಟಿ ಹಣವೇ ತೆರಬೇಕಾಗುತ್ತದೆ. ಆದರೆ ಈ ದೇಶ ಹಾಗಲ್ಲ. ನೀವು ಈ ದೇಶಕ್ಕೆ ಹೋಗಿ ಸೆಟಲ್‌ ಆಗೋದಾದರೆ ಅಲ್ಲಿನ ಸರ್ಕಾರವೇ ನಿಮಗೆ 71 ಲಕ್ಷ ರೂ. (Viral News) ಕೊಡುತ್ತದೆಯಂತೆ!

ಹೌದು. ಈ ರೀತಿಯ ಹೊಸದೊಂದು ಯೋಜನೆಯನ್ನು ಐರ್ಲೆಂಡ್‌ ಹಾಕಿಕೊಂಡಿದೆ. ಯುರೋಪ್‌ನ ಐರ್ಲೆಂಡ್‌ನಲ್ಲಿ ಹಲವಾರು ದ್ವೀಪಗಳಿವೆ. ಆ ದ್ವೀಪಗಳಿಗೆ ನೀವು ಹೋಗಿ ವಾಸಿಸಬೇಕು. ಅಲ್ಲಿ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿರುವುದರಿಂದಾಗಿ ಸರ್ಕಾರ ಅಲ್ಲಿ ಬಂದು ನೆಲೆಸುವವರಿಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ. ಅದಕ್ಕೆಂದೇ ಅವರ್‌ ಲಿವಿಂಗ್‌ ಐಲ್ಯಾಂಡ್ಸ್‌ ನೀತಿಯನ್ನೂ ಜಾರಿಗೊಳಿಸಿದೆ.

ಇದನ್ನೂ ಓದಿ: Viral Video: ಪಾಕ್​ ಪತ್ರಕರ್ತನ ಧೈರ್ಯ ನೋಡಿ!; ಹವಾಮಾನ ವರದಿಯಲ್ಲಿ ಭಯಂಕರ ಕ್ರಿಯಾಶೀಲತೆ
ಐರ್ಲೆಂಡ್‌ನ ಅಧಿಕೃತ ಸರ್ಕಾರಿ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ, “ದ್ವೀಪಗಳಲ್ಲಿ ಸುಸ್ಥಿರ ಸಮುದಾಯಗಳನ್ನು ಮುಂದಿನ ಹಲವು ವರ್ಷಗಳವರೆಗೆ ಮುಂದುವರಿಸುವುದು ಮತ್ತು ದ್ವೀಪಗಳನ್ನು ಅಭಿವೃದ್ಧಿ ಪಡಿಸುವುದು ಈ ನೀತಯ ಗುರಿಯಾಗಿದೆ.

ಈ ಐರ್ಲೆಂಡ್‌ನ ದ್ವೀಪಗಳಲ್ಲಿ ಬದುಕು ಕಟ್ಟಿಕೊಳ್ಳಲು ಇಚ್ಛಿಸುವವರು ಐರ್ಲೆಂಡ್‌ ಸರ್ಕಾರದ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದೇ ಜುಲೈ 1ರಿಂದ ಅರ್ಜಿ ಹಾಕುವುದಕ್ಕೆ ಅವಕಾಶ ನೀಡಲಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ವೈರಲ್‌ ಆಗುತ್ತಿದೆ.

Exit mobile version