ಬೆಂಗಳೂರು: ʻಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು ಹಾಗೂ ʻರಾವುಲ್ಲʼ ಜತೆಗೂಡಿ ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್ ಶೇರ್ ಮಾಡಿದ ಬಳಿಕ ಇನ್ನಷ್ಟು ಪ್ರತಿಭೆಗಳು ಈ ರೀಲ್ಸ್‌ಗೆ ಲಿಪ್ ಸಿಂಕ್ ಮಾಡಿವೆ. ಇದುವರೆಗೆ ಈ ರೀಲ್ಸ್‌ಗೆ ಕ್ರೇಜ್ ಕಡಿಮೆಯಾಗಿಲ್ಲ. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್ (vickypedia) ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದರು. ಇದೀಗ ನಡೆದಾಡುವ ವಯೋಲಿನ್ ವಾದಕ ಎಂದೇ ಖ್ಯಾತರಾಗಿರುವ ʻಅನೀಶ್ ವಿದ್ಯಾಶಂಕರ್ʼ (violinist Aneesh Vidyashankar) ಈ ಹಾಡನ್ನು ನುಡಿಸಿದ್ದಾರೆ. ವಿಕ್ಕಿಪೀಡಿಯಾ, ಚಂದ್ರು, ಹಾಗೂ ರಾವುಲ್ಲಾ ಶಾಸ್ತ್ರೀಯ ಸಂಗೀತ ತರಗತಿಗೆ ಹೋದರೆ ಎಷ್ಟು ಸೊಗಸಾಗಿರಬಹುದಲ್ಲವೇ ಎಂದು ವಿಡಿಯೊ ಹಂಚಿಕೊಂಡು ಕ್ಯಾಪ್ಷನ್ ಕೊಡಲಾಗಿದೆ.
ಅನೀಶ್ ವಿದ್ಯಾಶಂಕರ್ ಅವರಿಗೆ 33 ವರ್ಷ ಇರಬಹುದು. ಆದರೆ ಅವರು ಸುಮಾರು 25 ವರ್ಷಗಳಿಂದ ವೃತ್ತಿಪರ ಸಂಗೀತಗಾರರಾಗಿದ್ದಾರೆ. 2,000ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅವರು ವಯೋಲಿನ್ ನುಡಿಸಿದ್ದಾರೆ. ಇನ್ನು ಅನೀಶ್ ವಿದ್ಯಾಶಂಕರ್ ಈ ವಿಡಿಯೊ ಪೋಸ್ಟ್ ಮಾಡಿದ ಬಳಿಕ ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್ ಹಾರ್ಟ್ ಇಮೋಜಿ ಕಮೆಂಟ್ ಮಾಡಿದ್ದಾರೆ.
ಉಪೇಂದ್ರ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ. ಅವರು ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್ ಮಾಡಿದ್ದರು. ಇದು ಸಖತ್ ವೈರಲ್ ಆಗಿತ್ತು. ಅಲ್ಲಿಂದ ಹಲವಾರು ಪ್ರತಿಭೆಗಳು ರೀಲ್ಸ್ ಹಂಚಿಕೊಂಡಿದೆ. ಅದರ ಜತೆಗೆ ಇನ್ನು ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಮಾಡಿದ ತಮ್ಮ ವಿಡಿಯೋಗಳಲ್ಲಿ “ರಾವುಲ್ಲಾ… ರಾವುಲ್ಲಾ” ಎಂದು ಹೇಳಿರುವುದು ವೈರಲ್ ಆಗಿಬಿಟ್ಟಿದೆ. 1999ರ ಅಕ್ಟೋಬರ್ 22ರಂದು ʻಉಪೇಂದ್ರʼ ಸಿನಿಮಾ ಬಿಡುಗಡೆಯಾಗಿತ್ತು. ಆಗ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ನಟಿ ಪ್ರೇಮಾ, ರವೀನಾ ಟಂಡನ್ ಮತ್ತು ದಾಮಿನಿ ಮೂವರು ನಾಯಕಿಯರಾಗಿದ್ದರು. ಈ ಹಾಡು ಮಾತ್ರವಲ್ಲ ಸಿನಿಮಾದ ಇತರೆ ಹಾಡುಗಳು ಕೂಡ ಭಾರೀ ಸದ್ದು ಮಾಡಿದ್ದವು.
ಇದನ್ನೂ ಓದಿ: Karimani Malika Ninalla: ಗೋಕರ್ಣದ ವಿದೇಶಿಯರ ಬಾಯಲ್ಲೂ ʻಕರಿಮಣಿ ಮಾಲಿಕ ರಾವುಲ್ಲಾʼ ಸಾಂಗ್!
ಅನೀಶ್ ವಿದ್ಯಾಶಂಕರ್ ಶೇರ್ ಮಾಡಿರುವ ವಿಡಿಯೊ
ಏನಿಲ್ಲ..ಏನಿಲ್ಲ ಪದ ಹುಟ್ಟಿದ್ದು ಹೇಗೆ?
ಆಗ ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ಇದೆ ಎನ್ನುವ ಗಾಸಿಪ್‌ಗಳು ಹುಟ್ಟಿಕೊಂಡಿದ್ದವು. ಹಾಗೇನೂ ಇಲ್ಲ ಎಂದು ಹೇಳಲು ʻಉಪೇಂದ್ರʼ ಸಿನಿಮಾದಲ್ಲಿ ಗುರು ಕಿರಣ್ ಈ ಹಾಡು ಮಾಡಲು ಪ್ಲಾನ್ ಮಾಡಿದ್ದರು. ಏನಿಲ್ಲ ಏನಿಲ್ಲ ಅಂತಲೇ ಶುರು ಮಾಡಿದ್ದರು. ಹಾಗೆ ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ… ಹೀಗೆ ಹಲವು ಪದಗಳು ಸೇರಿ ಒಂದು ಪಲ್ಲವಿಯಾಗಿತ್ತು. ಮುಂದೆ ಉಪ್ಪಿ ಹೆಸರಿನ ಸಿನಿಮಾಕ್ಕೂ ಗುರುಕಿರಣ್ ಸಂಗೀತ ಕೊಟ್ಟಿದ್ದರು.