Site icon Vistara News

Viral Video | ಗರಗಸ ಹಚ್ಚಿದವನ ಮೇಲೆ ಪ್ರತೀಕಾರ ತೀರಿಸಿಕೊಂಡ ಮರ! ಕರ್ಮ ಫಲವೆಂದ ನೆಟ್ಟಿಗರು

Karma Hits Back

ಕರ್ಮ ಯಾರನ್ನೂ ಬಿಡುವುದಿಲ್ಲ. ಅವರವರ ಕಾರ್ಯಕ್ಕೆ ತಕ್ಕ ಫಲ ಪಡೆದೇ ಪಡೆಯುತ್ತಾರೆ. ಒಳಿತು ಮಾಡಿದರೆ ಒಳಿತು, ಕೆಡುಕು ಮಾಡಿದರೆ ಕೆಡುಕು ತಿರುಗಿ ಬರುತ್ತದೆ. ಆ ಕ್ಷಣಕ್ಕಾದರೂ ಸರಿ. ಕಾಲಾಂತರದಲ್ಲಾದರೂ ಬರಬಹುದು ಎಂಬುದು ನಂಬಿಕೆ ಮತ್ತು ಅನೇಕ ಸಂದರ್ಭಗಳಲ್ಲಿ ಸತ್ಯ ಕೂಡ. ನೀವೂ ಈ ವಿಡಿಯೋ ನೋಡಿ, ಕರ್ಮ ಫಲಕ್ಕೊಂದು ಪಕ್ಕಾ ಉದಾಹರಣೆ ಎನಿಸದೆ ಇದ್ದರೆ ಹೇಳಿ!

ಹಸಿ ಮರ ಕಡಿಯಬೇಡಿ ಎಂಬ ಮಾತು, ಮಾತಿಗಷ್ಟೇ ಸೀಮಿತ. ಜಗತ್ತಿನಾದ್ಯಂತ ಎಲ್ಲ ಕಡೆ ಮರ ಕಡಿಯುವ ಪ್ರಕ್ರಿಯೆ ಸದಾ ಚಾಲಿತ. ಅದರಂತೆ ಮೂವರು ವ್ಯಕ್ತಿಗಳು ಕಾಡಿಗೆ ಹೋಗಿ, ಒಂದು ಹಸಿ ಮರಕ್ಕೆ ಗರಗಸ ಹಾಕಿದ್ದಾರೆ. ಬುಡವನ್ನು ಬಹುಪಾಲು ಕತ್ತರಿಸಿ, ನಂತರ ಅದನ್ನು ತಳ್ಳಿದ್ದಾರೆ. ಆಗ ಮರವೂ ಬಿದ್ದಿದೆ..ಅಷ್ಟರಲ್ಲಿ ಒಂದು ಅನಿರೀಕ್ಷಿತ ಸನ್ನಿವೇಶ ಎದುರಾಯಿತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅದನ್ನು ನೋಡಿದವರೆಲ್ಲ ‘ಇದು ನಿಶ್ಚಿತವಾಗಿಯೂ ಕರ್ಮ ಕೊಟ್ಟ ಫಲ’ ಎಂದೇ ಹೇಳಿದ್ದಾರೆ.

ಮತ್ತೇನೂ ಅಲ್ಲ, ಮರ ಬೀಳುವ ರಭಸಕ್ಕೆ ಅದರ ಬುಡದ ಭಾಗ ಅಲ್ಲೇ ನಿಂತಿದ್ದ ಮೂವರಲ್ಲಿ ಒಬ್ಬನಿಗೆ ಬಡಿದಿದೆ. ಅದೂ ಅವನ ಎರಡು ಕಾಲುಗಳ ಮಧ್ಯೆ ಬಡಿದಿದ್ದು, ಆತ ಬೀಳುತ್ತಿದ್ದ ಮರದ ಮೇಲೆ ಕುಳಿತು ಹಾರಿ ಬಿದ್ದಿದ್ದಾನೆ. ಅವನಿಗೆ ಏಟೂ ಆಗಿದೆ. ವೈರಲ್ ಆದ ವಿಡಿಯೋ ನೋಡಿದ, ಬಹುತೇಕರು, ‘ಆ ಮರವನ್ನು ಕಡಿದು ತಪ್ಪು ಮಾಡಿದ್ದಕ್ಕೆ, ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಬಿಡಿ’, ‘ಕರ್ಮ ತಿರುಗಿ ಹೊಡೆಯುತ್ತದೆ’, ‘ಮರದ ಸೇಡು’ ಎಂದೇ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮೂವರಲ್ಲಿ ಒಬ್ಬನಿಗೆ ಕರ್ಮ ಆ ಕ್ಷಣಕ್ಕೇ ಹೊಡೆತ ಕೊಟ್ಟಿದೆ, ಇನ್ನಿಬ್ಬರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ಹೇಳಿದವರು ಇದ್ದಾರೆ. ಇಲ್ಲಿದೆ ನೋಡಿ, ಮರ ಕಡಿದ ಮನುಷ್ಯರಿಗೆ, ಮರವನ್ನು ಕಳೆದುಕೊಂಡ ಪ್ರಕೃತಿ ಮಾತೆ ಕೊಟ್ಟ ಕರ್ಮಫಲದ ವಿಡಿಯೋ..

ಇದನ್ನೂ ಓದಿ: Viral Video | ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಹತ್ತಲು ಯತ್ನಿಸಿದ ಮಹಿಳೆ, ಮುಂದೇನಾಯ್ತು?

Exit mobile version