Site icon Vistara News

Viral Video: ಕಾವಾಲಯ್ಯ ಹಾಡಿಗೆ ಮೈ ಚಳಿ ಬಿಟ್ಟು ಕುಣಿದ ಯುವತಿ; ತಮನ್ನಾ ತಂಗಿಯೋ ಎಂದ ನೆಟ್ಟಿಗರು

kavalayya dance

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಜೈಲರ್‌ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಅವರು ಕಾವಾಲಯ್ಯ ಎನ್ನುತ್ತಾ ಕುಣಿದಿರುವ ವಿಡಿಯೊವನ್ನು ನೀವೆಲ್ಲರೂ ನೋಡಿದ್ದೀರಿ. ಅದರಲ್ಲಿನ ಅವರ ನೃತ್ಯ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಸಾಕಷ್ಟು ವೈರಲ್‌ ಅಗಿದ್ದು, ಅದನ್ನು ಹಲವರು ಮಾಡಿದ್ದು, ಆ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಇದೀಗ ಮತ್ತೋರ್ವ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ ಕೂಡ ಆ ಹಾಡಿಗೆ ಹೆಜ್ಜೆ ಹಾಕಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ (Viral Video) ಸುದ್ದಿಯಲ್ಲಿದೆ.

ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ ಆಗಿರುವ ಸಮೀಕ್ಷಾ ರಸ್ತೋಗಿ ಹೆಸರಿನ ಯುವತಿ ಇದೀಗ ಕಾವಾಲಯ್ಯ ಹಾಡಿಗೆ ನೃತ್ಯ ಮಾಡಿದ್ದಾರೆ. ಹಾಡಿನಲ್ಲಿ ತಮನ್ನಾ ಅವರು ತೊಟ್ಟಿರುವಂತದ್ದೇ ಬಟ್ಟೆಯನ್ನು ತೊಟ್ಟ ಸಮೀಕ್ಷಾ ತಮನ್ನಾ ಅವರಂತೆಯೇ ಹೆಜ್ಜೆ ಹಾಕಿದ್ದಾರೆ. ಎನರ್ಜಿಟಿಕ್‌ ಆಗಿ ಅವರು ಮಾಡಿರುವ ನೃತ್ಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಕಾವಾಲಯ್ಯ ಎನ್ನುವ ಕ್ಯಾಪ್ಶನ್‌ ಅನ್ನೇ ಸಮೀಕ್ಷಾ ಅವರು ಕೊಟ್ಟಿದ್ದಾರೆ.

ಇದನ್ನೂ ಓದಿ: Viral Video: ಕುಂದಾಪುರದಲ್ಲಿ ಕೆಸರಿನಲ್ಲಿ ಸಿಕ್ಕಿಬಿದ್ದಿದ್ದ ಹಸುವನ್ನು ರಕ್ಷಿಸಿದ ಬೈಕರ್‌; ಜನರಿಂದ ಭಾರಿ ಮೆಚ್ಚುಗೆ

ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಜುಲೈ 24ರಂದೇ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 14 ಸಾವಿರಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ ಕಂಡಿದೆ. 1,400ಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ನೂರಾರು ಮಂದಿ ಈ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ. ಹಾಗೆಯೇ ನೂರಾರು ಮಂದಿ ವಿಡಿಯೊ ಬಗ್ಗೆ ಹಲವಾರು ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದು, ವಿಡಿಯೊಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.


“ಅಬ್ಬಾ, ಎಷ್ಟೊಂದು ಚೆನ್ನಾಗಿ ನೃತ್ಯ ಮಾಡಿದ್ದೀರಿ”, “ಎಷ್ಟು ಕ್ಯೂಟ್‌ ಆಗಿದ್ದೀರಿ ಹಾಗೆಯೇ ಎಷ್ಟೊಂದು ಅದ್ಭುತವಾಗಿ ನೃತ್ಯ ಮಾಡಿದ್ದೀರಿ”, “ತುಂಬಾ ಎನರ್ಜಿಟಿಕ್‌ ಆಗಿ ನೃತ್ಯ ಮಾಡಿದ್ದೀರಿ. ಹಾಗೆಯೇ ಮುಖ ಭಾವನೆಯನ್ನು ಕೂಡ ಅಷ್ಟೇ ಚೆನ್ನಾಗಿ ಕೊಟ್ಟಿದ್ದೀರಿ”, “ವಾವ್‌, ಫೆಂಟಾಸ್ಟಿಕ್‌”, “ನಿಮ್ಮ ನೃತ್ಯಕ್ಕಿಂತ ನಿಮ್ಮ ಮುಖ ಭಾವವನ್ನು ಹೆಚ್ಚು ಇಷ್ಟಪಟ್ಟೆ. ನಿಮ್ಮ ಕಣ್ಣುಗಳು ತುಂಬಾ ಮಾತುಗಳನ್ನು ಹೇಳುವಂತಿವೆ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ ಹಲವಾರು ಮಂದಿ, “ವಾವ್‌”, “ಸೂಪರ್‌” ಎನ್ನುವಂತಹ ಕಾಮೆಂಟ್‌ಗಳನ್ನೂ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ರೀತಿಯ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಆಗಾಗ ವೈರಲ್‌ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಇತ್ತೀಚೆಗೆ ಬೈಕರ್‌ ಒಬ್ಬರು ಕೆಸರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಹಸುವನ್ನು ರಕ್ಷಿಸಿದ್ದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅ ವಿಡಿಯೊ ಕೂಡ ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡು ವೈರಲ್‌ ಆಗಿತ್ತು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದ್ದ ಆ ಘಟನೆಯ ವಿಡಿಯೊವನ್ನು ಲಕ್ಷಾಂತರ ಮಂದಿ ಮೆಚ್ಚಿಕೊಂಡಿದ್ದರು. ಆ ಬೈಕರ್‌ ಕೆಲಸಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದರು.

Exit mobile version