ಮಾರುದ್ದದ ಕಾಳಿಂಗ ಸರ್ಪ (King Cobra)ವನ್ನು ನೋಡಿದರೆ ಎಂಥವರಿದಾಗದರೂ ಭಯ ಆಗುತ್ತದೆ. ಅದೇನಾದರೂ ಹೆಡೆ ಬಿಚ್ಚಿದರೆ, ಒಂದು ಸಲ ಮೈ ನಡುಗಿ ಹೋಗುತ್ತದೆ. ಅಂಥದ್ದರಲ್ಲಿ ಕಾಳಿಂಗ ಸರ್ಪ ಸಂಪೂರ್ಣವಾಗಿ ಎದ್ದು ನಿಂತರೆ ಎದುರಿಗಿದ್ದವರ ಸ್ಥಿತಿ ಏನಾಗಬೇಡ? ಕಾಳಿಂಗ ಸರ್ಪ ಎದ್ದು ನಿಲ್ಲೋದಾ? ಅದಕ್ಕೆಲ್ಲಿ ಕಾಲಿದೆ ಎಂದು ನಿಮ್ಮ ಮನಸಲ್ಲಿ ಪ್ರಶ್ನೆ ಮೂಡಿದ್ದರೆ, ಈ ವಿಡಿಯೊ ನೋಡಿ..
ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಾಂತಾ ನಂದಾ ಅವರು ಕಾಳಿಂಗ ಸರ್ಪದ ವಿಡಿಯೊವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಮಾರುದ್ದದ ಕಾಳಿಂಗ ಸರ್ಪವೊಂದು ತನ್ನ ಅರ್ಧ ಮೈಯನ್ನು ಎತ್ತಿ ನಿಂತಿರುವುದನ್ನು ನೋಡಬಹುದು. ಹಾವಿನ ಹಿಂಭಾಗದಿಂದ ವಿಡಿಯೊ ಚಿತ್ರೀಕರಿಸಲಾಗಿದೆ. ‘ಕಾಳಿಂಗ ಸರ್ಪ ಎದ್ದು ನಿಂತಿದ್ದನ್ನು ನೋಡಿ. ಈ ಹಾವುಗಳಿಗೆ ತಮ್ಮ ಇಡೀ ದೇಹದ ಮೂರನೇ ಒಂದು ಭಾಗವನ್ನು ನೆಲದಿಂದ ಮೇಲಕ್ಕೆತ್ತುವ ಸಾಮರ್ಥ್ಯ ಇರುತ್ತದೆ’ ಎಂದು ಸುಸಾಂತಾ ನಂದಾ ಬರೆದುಕೊಂಡಿದ್ದಾರೆ.
ವಿಡಿಯೊಕ್ಕೆ ಸಿಕ್ಕಾಪಟೆ ವೀವ್ಸ್ ಬರುತ್ತಿದೆ. 1, 50,000ಕ್ಕೂ ಹೆಚ್ಚು ಮಂದಿ ವಿಡಿಯೊವನ್ನು ವೀಕ್ಷಿಸಿದ್ದಾರೆ. ‘ಮನುಷ್ಯನಂತೆ ಎದ್ದಿರುವ ಕಾಳಿಂಗ ಸರ್ಪವನ್ನು ನೋಡಿದರೇ ಗೊತ್ತಾಗುತ್ತದೆ, ಆ ಹಾವನ್ನು ಎದುರಿಸುವುದು ಎಷ್ಟು ಅಪಾಯಕಾರಿ ಎಂಬುದು’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ‘ಹಾವನ್ನು ನೋಡಿದರೆ ಬೆನ್ನು ಮೂಳೆಯಿಂದ ಚಳಿಯಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.