Site icon Vistara News

Rishi Sunak | ಪ್ಲೀಸ್‌, ಕೊಹಿನೂರು ವಜ್ರ ವಾಪಸ್‌ ಕಳುಹಿಸಿ… ರಿಷಿ ಬ್ರಿಟನ್‌ ಪ್ರಧಾನಿ ಆಗುತ್ತಲೇ ಭಾರತೀಯರ ಒತ್ತಾಯ!

Rishi Sunak PM

ನವದೆಹಲಿ: ಕೆಲ ತಿಂಗಳ ಹಿಂದೆ ಬ್ರಿಟನ್‌ ರಾಣಿ ಎಲಿಜಬೆತ್-2 ಅವರು ನಿಧನರಾದಾಗಲೇ ಕೊಹಿನೂರು ವಜ್ರವನ್ನು ಭಾರತಕ್ಕೆ ಮರಳಿ ತರಬೇಕು ಎಂಬ ಹಕ್ಕೊತ್ತಾಯ ಕೇಳಿಬಂದಿತ್ತು. ಭಾರತದಿಂದ ಹೊತ್ತೊಯ್ದ ಕೊಹಿನೂರು ವಜ್ರವನ್ನು ವಾಪಸ್‌ ತರಬೇಕು, ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಪ್ರಯತ್ನಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಕೇಳಿಬಂದಿದ್ದವು. ಈಗ ಭಾರತ ಮೂಲದ ರಿಷಿ ಸುನಕ್‌ (Rishi Sunak) ಅವರು ಬ್ರಿಟನ್‌ ಪ್ರಧಾನಿಯಾಗಿದ್ದು, ಸುನಕ್‌ ಅವರೇ ಕೊಹಿನೂರು ವಜ್ರವನ್ನು ಭಾರತಕ್ಕೆ ಕಳುಹಿಸಿ ಎಂದು ಟ್ವಿಟರ್‌ನಲ್ಲಿ ಒತ್ತಾಯಿಸಲಾಗುತ್ತಿದೆ. #Kohinoor ಎಂಬುದೀಗ ಟ್ರೆಂಡ್‌ ಆಗಿದೆ.

“ರಿಷಿ ಸುನಕ್‌ ಅವರೇ, ನೀವು ಬ್ರಿಟನ್‌ ಪ್ರಧಾನಿಯಾಗಿದ್ದು ಖುಷಿ ಆಗಿದೆ. ದಯಮಾಡಿ ಕೊಹಿನೂರು ವಜ್ರವನ್ನು ಭಾರತಕ್ಕೆ ಕಳುಹಿಸಿ ಕೊಡಿ”, “ಪ್ಲೀಸ್‌, ಕೊಹಿನೂರು ವಜ್ರ ವಾಪಸ್‌ ಕೊಡಿ”, “ಈಗಲಾದರೂ ಕೊಹಿನೂರು ಭಾರತಕ್ಕೆ ಬರುವಂತಾಗಲಿ” ಎಂಬುದು ಸೇರಿ ಹಲವು ರೀತಿಯಲ್ಲಿ ಜನ ಮನವಿ ಮಾಡುತ್ತಿದ್ದಾರೆ. ಮತ್ತೊಬ್ಬ ಕಿಡಿಗೇಡಿಯು, “ನಮಗೆ ಕೊಹಿನೂರು ವಜ್ರ ಬೇಡ, 45 ಲಕ್ಷ ಡಾಲರ್‌ ಕೊಡಿ” ಎಂದು ಹೇಳಿದ್ದಾನೆ. ಇನ್ನೂ ಕೆಲವರು ನರೇಂದ್ರ ಮೋದಿ ಅವರು ಮಾಡಿದ ಅಭಿನಂದನೆಯ ಟ್ವೀಟ್‌ಗೂ ಪ್ರತಿಕ್ರಿಯಿಸಿ, “ಕೊಹಿನೂರು ವಾಪಸ್‌ ತರಿಸಿ” ಎಂದಿದ್ದಾರೆ.

ಇದನ್ನೂ ಓದಿ | Rishi Sunak | ರಿಷಿ ಸುನಕ್‌ ಎದುರು ಬೆಟ್ಟದಷ್ಟು ಸವಾಲು, ಇವುಗಳನ್ನು ಬಗೆಹರಿಸಬೇಕು ಮೊದಲು

Exit mobile version