Site icon Vistara News

Viral Video : ಬೈಗುಳವೇ ಹಾಡಾದಾಗ… ವೈರಲ್‌ ಆಗ್ತಿದೆ ಲಪ್ಪು ಸ ಸಚಿನ್‌ ಹಾಡು

lappu sa sachin song

ಬೆಂಗಳೂರು: ಇತ್ತೀಚೆಗೆ ಮಂಡ್ಯದಲ್ಲಿ ನಾಲೆಗೆ ಕಾರು ಬಿದ್ದು, ಕೆಲವರ ದುರ್ಮರಣವಾದ ಘಟನೆ ನಡೆದಿತ್ತು. ಆ ವೇಳೆ ಸಂಬಂಧಿ ಮಹಿಳೆಯೊಬ್ಬಳು ತನ್ನ ನೋವನ್ನು ಮಾಧ್ಯಮದವರೆದುರು ತೋಡಿಕೊಂಡ ಶೈಲಿ ಬಹಳ ವೈರಲ್‌ ಆಗಿತ್ತು. ರಾಗವಾಗಿದ್ದ ಆ ಮಾತುಗಳನ್ನು ಕೇಳಿ ನಗಬೇಕೋ ಅಥವಾ ಅಳಬೇಕೋ ಎನ್ನುವುದೇ ತಿಳಿಯುತ್ತಿಲ್ಲ ಎಂದು ಜನರು ಹೇಳಲಾರಂಭಿಸಿದ್ದರು. ಅದೇ ರೀತಿಯಲ್ಲಿ ಇದೀಗ ಮತ್ತೊಂದು ಘಟನೆಯ ಸಂಭಾಷಣೆಯನ್ನೇ ಇಟ್ಟುಕೊಂಡು ಸಂಗೀತ ಕಲಾವಿದರಾದ ಯಶ್ರಾಜ್‌ ಮುಖತೆ ಅವರು ಹಾಡೊಂದನ್ನು ಮಾಡಿದ್ದಾರೆ. ಲಪ್ಪು ಸ ಸಚಿನ್‌ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ವೈರಲ್‌ (Viral Video) ಆಗುತ್ತಿದೆ.


ಪಾಕಿಸ್ತಾನದ ಸೀಮಾ ಹೈದರ್‌ ಹೆಸರಿನ ಮಹಿಳೆ ಮತ್ತು ನೊಯ್ಡಾದ ಸಚಿನ್‌ರ ಪಬ್‌ಜಿ ಲವ್‌ ಸ್ಟೋರಿಯ ಸುದ್ದಿಯನ್ನು ನೀವು ಓದಿರಬಹುದು. ಪಬ್‌ಜಿ ಆಡುತ್ತಲೇ ಈ ಜೋಡಿ ಪ್ರೀತಿಗೆ ಬಿದ್ದಿತ್ತು. ಪಾಕಿಸ್ತಾನದಲ್ಲಿ ನಾಲ್ಕು ಮಕ್ಕಳ ಕುಟುಂಬ ಹೊಂದಿದ್ದ ಸೀಮಾ ಅವರೆಲ್ಲರನ್ನು ಬಿಟ್ಟು, ಭಾರತದಲ್ಲಿರುವ ತನ್ನ ಪ್ರಿಯತಮನಿಗಾಗಿ ಅಕ್ರಮವಾಗಿ ದೇಶಕ್ಕೆ ನುಗ್ಗಿದ್ದಳು. ಈ ಬಗ್ಗೆ ಭಾರೀ ದೊಡ್ಡ ಸುದ್ದಿಯೇ ಆಗಿತ್ತು. ಈ ವಿಚಾರದಲ್ಲಿ ಮಾಧ್ಯಮದವರು ಸಚಿನ್‌ನ ನೆರೆಹೊರೆಯವರ ಹೇಳಿಕೆಗಳನ್ನು ಪಡೆದುಕೊಂಡಿದ್ದರು.

ಇದನ್ನೂ ಓದಿ: Viral Video: ಮೂರು ಹಾವುಗಳನ್ನು ಸ್ನೇಹಿತರೆನ್ನುವಂತೆ ಕೈಯಲ್ಲೇ ಹಿಡಿದುಕೊಂಡ ಯುವತಿ!
ಈ ರೀತಿ ಹೇಳಿಕೆ ಕೊಡುವಾಗ ಮಹಿಳೆಯೊಬ್ಬರು “ಸಚಿನ್‌ ಬಳಿ ಅಂತದ್ದೇನಿದೆ ಎಂದು ಆ ಮಹಿಳೆ ದೇಶ, ಕುಟುಂಬವನ್ನು ಬಿಟ್ಟು ಬಂದಿದ್ದಾಳೆ?” ಎಂದು ಕೀಳಾಗಿ ಮಾತನಾಡಿದ್ದರು. ಆಗ ಆಕೆ “ಲಪ್ಪು ಸ ಸಚಿನ್‌” ಎಂದು ಹೇಳಿದ್ದು ಭಾರೀ ವೈರಲ್‌ ಆಗಿತ್ತು. ಇದೀಗ ಅದೇ ಸಾಲುಗಳನ್ನಿಟ್ಟುಕೊಂಡು ಯಶ್ರಾಜ್‌ ಅವರು ಹಾಡೊಂದನ್ನು ಮಾಡಿದ್ದಾರೆ.


ಯಶ್ರಾಜ್‌ ಅವರು ಈ ವಿಶೇಷ ಹಾಡನ್ನು ಶುಕ್ರವಾರದಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೆ ವಿಡಿಯೊ 30 ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆ ಪಡೆದುಕೊಂಡಿದೆ. 2.8 ಲಕ್ಷ ಜನರು ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಾರು ಜನರು ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಶೇರ್‌ ಮಾಡಿಕೊಂಡಿದ್ದಾರೆ. ಸಾವಿರಾರು ಮಂದಿ ವಿಡಿಯೊಗೆ ಮೆಚ್ಚುಗೆಯ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.

ಇದನ್ನೂ ಓದಿ: Viral Video: ಏರ್‌ಪೋರ್ಟ್‌ಗೆ ನುಗ್ಗಿದ ಮಂಗಣ್ಣ! ಯಾವ ಊರಿಗೆ ಪ್ರಯಾಣಿಸಬೇಕೆಂದು ಕಾಲೆಳೆದ ನೆಟ್ಟಿಗರು
“ಈ ರೀತಿಯಲ್ಲೂ ಒಂದು ವಿಡಿಯೊವನ್ನು ಮಾಡುಬಹುದು ಎಂದುಕೊಂಡಿರಲಿಲ್ಲ”, “ಈ ವಿಡಿಯೊವನ್ನೇ ಸುಮಾರು 15 ನಿಮಿಷಗಳ ಕಾಲ ನೋಡಿದ್ದೇನೆ. ಆದರೂ ನೋಡುವುದನ್ನು ನಿಲ್ಲಿಸಲಾಗುತ್ತಿಲ್ಲ”, “ಈಗ ಇನ್‌ಸ್ಟಾಗ್ರಾಂನಲ್ಲಿರುವ ಎಲ್ಲ ಸಚಿನ್‌ಗಳಿಗೆ ಈ ವಿಡಿಯೊನೇ ಡಿಎಂ ಆಗಿರುತ್ತದೆ”, “ಸಚಿನ್‌: ಅಣ್ಣಾ ನಾನು ನಿನಗೇನು ಮಾಡಿದ್ನಣ್ಣಾ?” ಎನ್ನುವಂತಹ ಹಾಸ್ಯಮಯ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಅದರೊಂದಿಗೆ ಹಲವರು ಯಶ್ರಾಜ್‌ ಅವರ ಕ್ರಿಯೇಟಿವಿಟಿ ಮತ್ತು ಪ್ರತಿಭೆಯನ್ನು ಹೊಗಳಿ ಕಾಮೆಂಟ್‌ಗಳನ್ನು ಮಾಡಿದ್ದಾರೆ ಕೂಡ.


ಈ ಹಿಂದೆ ಯಶ್ರಾಜ್‌ ಅವರು ಹಿಂದಿಯ ಧಾರಾವಾಹಿಯೊಂದರಲ್ಲಿ ಕೋಕಿಲಬೆನ್‌, ಸೊಸೆ ಗೋಪಿ ನಡುವೆ ನಡೆಯುವ ಸಂಭಾಷಣೆಯ ದೃಶ್ಯವನ್ನೂ ಇದೇ ರೀತಿಯಲ್ಲಿ ಹಾಡಾಗಿ ಮಾಡಿದ್ದರು. ಅದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿತ್ತು. 1.6 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ ಆ ವಿಡಿಯೊ ಲಕ್ಷಾಂತರ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದರು ಹಾಗೆಯೇ ಸಾವಿರಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ರೀತಿಯ ವಿಶೇಷ ಪ್ರತಿಭೆಯಿಂದಾಗಿ ಯಶ್ರಾಜ್‌ ಅವರು ಇನ್‌ಸ್ಟಾಗ್ರಾಂನಲ್ಲಿ 24 ಲಕ್ಷ ಮಂದಿ ಹಿಂಬಾಲಕರನ್ನು ಪಡೆದಿದ್ದಾರೆ.

Exit mobile version