ಬೆಂಗಳೂರು: ಕಾಡು ಪ್ರಾಣಿಗಳು ಬೇಟೆಯಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅಂಥದ್ದೇ ಒಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ. ಆದರೆ ಈ ವಿಡಿಯೊ ನೋಡಿದ ಜನರಿಗೆ ಅತಿಯಾಸೆ ಗತಿಗೇಡು ಎನ್ನುವ ಗಾದೆಗೆ ಸಾಕ್ಷಿ ಸಿಕ್ಕಂತೂ ಆಗಿದೆ.
ಚಿರತೆಯೊಂದು ಕಾಡು ಹಂದಿಯ ಮರಿಯನ್ನು ಬಾಯಲ್ಲಿ ಹಿಡಿದುಕೊಂಡು ರಸ್ತೆ ದಾಟಲು ಹೊರಟಿಡುತ್ತದೆ. ಅಷ್ಟರಲ್ಲಿ ಅದರ ಕಣ್ಣಿಗೆ ಮತ್ತೊಂದು ಕಾಡು ಹಂದಿ ಹತ್ತಿರದಲ್ಲೇ ಇರುವುದು ಕಾಣುತ್ತದೆ. ತಕ್ಷಣ ಆ ಚಿರತೆ ಬಾಯಲ್ಲಿದ್ದ ಚಿರತೆಯನ್ನು ಬಿಟ್ಟು ಕಣ್ಣಿಗೆ ಕಾಣಿಸಿದ ಮತ್ತೊಂದು ಹಂದಿ ಮರಿಯನ್ನು ಹಿಡಿಯಲು ಓಡುತ್ತದೆ. ಆದರೆ ಆ ಹಂದಿ ಜೋರಾಗಿ ಓಡಿ ಚಿರತೆಯಿಂದ ತಪ್ಪಿಸಿಕೊಂಡುಬಿಡುತ್ತದೆ. ಇತ್ತ ಮೊದಲು ಹಿಡಿದಿದ್ದ ಹಂದಿ ಮರಿ ಕೂಡ ಚಿರತೆಯಿಂದ ಬಚಾವಾಗಲು ಓಡಿಹೋಗಿರುತ್ತದೆ.
ಇದನ್ನೂ ಓದಿ: Viral News : ಇದರಲ್ಲಿ ಮೊದಲು ತುಂಬುವ ಬಕೆಟ್ ಯಾವುದು? ಐದೇ ಸೆಕೆಂಡ್‌ಗಳಲ್ಲಿ ಉತ್ತರಿಸಿ ನೋಡೋಣ
ಈ ದೃಶ್ಯ ನಡೆವಾದ ಅದರ ಸನಿಹದಲ್ಲೇ ಕೆಲವು ಕಾರುಗಳಿದ್ದು, ಆ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಈ ವಿಡಿಯೊವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಕೈಯಲ್ಲಿರೋ ಹಕ್ಕಿ ಗೂಡಿನಲ್ಲಿರುವ ಎರಡು ಹಕ್ಕಿಗಳಿಗಿಂತ ಮೇಲು ಎನ್ನುವ ಗಾದೆಯನ್ನೇ ಚಿರತೆ ಮರೆತುಬಿಟ್ಟಿದೆ” ಎಂದು ಅವರು ಕ್ಯಾಪ್ಶನ್‌ನಲ್ಲಿ ಹೇಳಿದ್ದಾರೆ.
This leopard forgot the golden principle-a bird in the hand is worth two in the bush😊😊 pic.twitter.com/KwQUKlRzia
— Susanta Nanda (@susantananda3) July 3, 2023
ಈ ವಿಡಿಯೊವನ್ನು ಜುಲೈ 3ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 1.8 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಸಾವಿರಾರು ಮಂದಿ ವಿಡಿಯೊಗೆ ಲೈಕ್ ಮಾಡಿದ್ದು, ಹಲವರು ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. “ಅತಿ ಆಸೆ ಗತಿ ಗೇಡು ಎನ್ನುವುದು ಇದಕ್ಕೇ ನೋಡಿ”, “ಚಿರತೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ”, “ಚಿರತೆಗೆ ಹೀಗಾಗಬಾರದಿತ್ತು”, “ಅಬ್ಬಾ ಭಯಾನಕ ವಿಡಿಯೊ” ಎನ್ನುವಂತಹ ಹಲವಾರು ಕಮೆಂಟ್‌ಗಳು ವಿಡಿಯೊಗೆ ಬಂದಿವೆ.