Site icon Vistara News

Viral Video : ಫ್ಲೈಓವರ್‌ ಮೇಲೆ ರಾಜಾರೋಷವಾಗಿ ಓಡಾಡಿದ ಸಿಂಹ!

lion in gujarat

ಗಾಂಧಿನಗರ: ವನ್ಯ ಜೀವಿಗಳು ಎಂದು ಕರೆಸಿಕೊಳ್ಳುವ ಹಾವು ಆಗಾಗ ನಾಡಿಗೆ ಬಂದು ಮನೆಗಳಿಗೆ ನುಗ್ಗುವ ವಿಡಿಯೊಗಳನ್ನು ನೋಡಿರುತ್ತೀರಿ. ಅಷ್ಟೇ ಏಕೆ ಕೆಲವೊಮ್ಮೆ ರಾತ್ರಿ ಹೊತ್ತಲ್ಲಿ ಚಿರತೆಗಳು ಬಂದು ಮಲಗಿದ್ದ ನಾಯಿಯನ್ನೇ ಎಳೆದುಕೊಂಡು ಹೋಗುವಂತಹ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಅದೆಲ್ಲಕ್ಕಿಂತ ಭಿನ್ನವಾಗಿ ಸಿಂಹವೊಂದು ಸಂಜೆ ಸಮಯದಲ್ಲಿ ಫ್ಲೈಓವರ್‌ ಮೇಲೆ ರಾಜಾರೋಷವಾಗಿ ಓಡಾಡಿದ ವಿಡಿಯೊ (Viral Video) ಹರಿದಾಡುತ್ತಿದೆ.

ಹೌದು. ಗುಜರಾತ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಗುಜರಾತ್‌ನ ನಗರವೊಂದರಲ್ಲಿನ ಫ್ಲೈಓವರ್‌ ಮೇಲೆ ಸಂಜೆ ಹೊತ್ತಲ್ಲಿ ಸಿಂಹ ಕಾಣಿಸಿಕೊಂಡಿದೆ. ಫ್ಲೈಓವರ್‌ನ ರಸ್ತೆ ಮೇಲೆ ನಡೆದಾಡುತ್ತಿದ್ದ ಸಿಂಹ ಕಾರೊಂದು ತನ್ನ ಹತ್ತಿರಕ್ಕೆ ಬಂದಾಗ ನಡೆಯುವುದನ್ನು ನಿಲ್ಲಿಸುತ್ತದೆ. ನಂತರ ಕಾರು ಮುಂದೆ ಹೋದ ಮೇಲೆ ತಾನು ಮಾಮೂಲಿಯೆನ್ನುವಂತೆ ನಡೆದುಕೊಂಡು ಸಾಗುತ್ತದೆ. ಜೋರು ಮಳೆಯನ್ನು ಲೆಕ್ಕಿಸದೆ ಅದು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತದೆ.

ಇದನ್ನೂ ಓದಿ: Viral Video : ಕಣ್ಣು ಕಾಣದ ನಾಯಿಗೆ ಪ್ರೀತಿಯಿಂದ ಮಸಾಜ್‌ ಮಾಡುತ್ತದೆ ಈ ಬೆಕ್ಕು!
ಈ ವಿಡಿಯೊವನ್ನು ದೂರದಿಂದ ಯಾರೋ ಸೆರೆ ಹಿಡಿದಿದ್ದಾರೆ. ಆ ವಿಡಿಯೊವನ್ನು ಐಎಫ್‌ಎಸ್‌ ಅಧಿಕಾರಿಯಾಗಿರುವ ಸುಶಾಂತ್‌ ನಂದ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಜತೆಯಲ್ಲಿ “ಭೀಗಿ ಭೀಗಿ ರಾತೋ ಮೆ… ಸಿಂಹ ಮಳೆಯನ್ನು ಎಂಜಾಯ್‌ ಮಾಡುತ್ತಾ ಗುಜರಾತ್‌ನ ಫ್ಲೈಓವರ್‌ ಮೇಲೆ ನಡೆದುಕೊಂಡು ಹೋಗುತ್ತಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೊವನ್ನು ಜುಲೈ 24ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಎರಡು ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಎರಡು ಸಾವಿರದಷ್ಟು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ನೂರಾರು ಮಂದಿ ವಿಡಿಯೊವನ್ನು ರಿಟ್ವೀಟ್‌ ಮಾಡಿದ್ದಾರೆ. ಹಾಗೆಯೇ ನೂರಾರು ಮಂದಿ ಈ ವಿಡಿಯೊಗೆ ಬಗ್ಗೆ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.

ಇದನ್ನೂ ಓದಿ: Viral Video: 6-7 ವರ್ಷದ ವಿದ್ಯಾರ್ಥಿನಿ ಜತೆ ಶಿಕ್ಷಕನ ಅಸಭ್ಯ ವರ್ತನೆ; ಅಕ್ಷರ ಕಲಿಸುವವನ ಅನಾಚಾರಕ್ಕೆ ಶಿಕ್ಷೆ ಏನು?
“ಮನುಷ್ಯರು ಕಾಡನ್ನೆಲ್ಲ ನಾಶ ಮಾಡುತ್ತಾ ಬಂದಿದ್ದಾರೆ. ಈಗ ಕಾಡಿನ ಪ್ರಾಣಿಗಳೆಲ್ಲವೂ ನಾಡಿಗೆ ಬರಲಾರಂಭಿಸಿವೆ”, “ಗುಜರಾತ್‌ನಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಲಾರಂಭಿಸಿವೆ”, “ಇದು ಸಿಂಹಕ್ಕೂ ಹೆದರಿಕೆ ಮತ್ತು ಮನುಷ್ಯರಿಗೂ ಹೆದರಿಕೆ ತರುವಂತಹ ದೃಶ್ಯ”, “ಸಿಂಹಗಳು ಕಾಡಿನಲ್ಲೇ ನೋಡಲು ಚಂದ ಹಾಗೆಯೇ ಮನುಷ್ಯರನ್ನು ನಾಡಿನಲ್ಲೇ ನೋಡಲು ಚಂದ. ಅವರವರು ಅವರವರ ಸ್ಥಾನದಲ್ಲೇ ಇದ್ದರೆ ಎಲ್ಲವೂ ಸರಿಯಾಗಿರುತ್ತದೆ” ಎನ್ನುವಂತಹ ಕಮೆಂಟ್‌ಗಳು ವಿಡಿಯೊಗೆ ಬಂದಿವೆ.

Exit mobile version