Site icon Vistara News

Maleesha Kharwa : ಧಾರಾವಿ ಸ್ಲಂನ ಈ ಬಾಲಕಿ ಇದೀಗ ಪ್ರಸಿದ್ಧ ಮಾಡೆಲ್‌!

#image_title

ಮುಂಬೈ: ಮಹಾರಾಷ್ಟ್ರದ ಮುಂಬೈನ ಧಾರಾವಿ ವಿಶ್ವದಲ್ಲೇ ಅತ್ಯಂತ ದೊಡ್ಡ ಕೊಳೆಗೇರಿ. ಆ ಕೊಳೆಗೇರಿಯಲ್ಲೇ ಹುಟ್ಟಿ, ಬೆಳೆದ ಅದೆಷ್ಟೋ ಮಂದಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅದೇ ರೀತಿಯಲ್ಲಿ ಇದೀಗ ಅಲ್ಲಿನ ಬಾಲಕಿಯೊಬ್ಬಳು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಪಡೆದುಕೊಳ್ಳುತ್ತಿದ್ದಾಳೆ. ಅಲ್ಲಿನ ಮಲೀಶಾ ಖರ್ವಾ (Maleesha Kharwa) ಇದೀಗ ಮಾಡೆಲ್‌ ಆಗುವ ಕನಸನ್ನು ನನಸು ಮಾಡಿಕೊಳ್ಳುವತ್ತ ಸಾಗುತ್ತಿದ್ದಾಳೆ.

ಮಲೀಶಾ ಖರ್ವಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸುದ್ದಿಯಲ್ಲಿರುವ ಬಾಲಕಿ. ಈಗಿನ್ನೂ 15 ವರ್ಷದವರಾಗಿರುವ ಅವರು ಐಷಾರಾಮಿ ಬ್ರ್ಯಾಂಡ್‌ ಆಗಿರುವ ಫಾರೆಸ್ಟ್‌ ಎಸೆನ್ಶಿಯಲ್ಸ್‌ನ ಫೇಸ್‌ ಆಗಿ ಹೊರಹೊಮ್ಮಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಮಲೀಶಾ ಅವರನ್ನು ತಮ್ಮ ಹೊಸ ʼಯುವತಿʼಯನ್ನಾಗಿ ಫಾರೆಸ್ಟ್‌ ಎಸೆನ್ಶಿಯಲ್ಸ್‌ ಪರಿಚಯಿಸಿದೆ.

ಇದನ್ನೂ ಓದಿ: Viral Video: 2000 ರೂ. ನೋಟು ಕೊಟ್ಟ ಗ್ರಾಹಕ; ಸ್ಕೂಟರ್​​ನಿಂದ ಪೆಟ್ರೋಲ್​ ವಾಪಸ್ ತೆಗೆದ ಬಂಕ್​ ಸಿಬ್ಬಂದಿ
ಮಲೀಶಾ ಅವರು ಫಾರೆಸ್ಟ್‌ ಎಸೆನ್ಶಿಯಲ್ಸ್‌ ಅಂಗಡಿಗೆ ತೆರಳುವ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಶಾಲೆ ಮುಗಿಸಿದ ಮಲೀಶಾ ಅಲ್ಲಿಂದ ನೇರವಾಗಿ ಫಾರೆಸ್ಟ್‌ ಎಸೆನ್ಶಿಯಲ್ಸ್‌ ಶೋರೂಂಗೆ ತೆರಳುತ್ತಾರೆ. ಅಲ್ಲಿ ಎಲ್ಲೆಡೆ ಅವರದ್ದೇ ಬ್ಯಾನರ್‌ಗಳು. ಅವರನ್ನು ಮಾಡೆಲ್‌ ರೂಪದಲ್ಲಿ ಅವರೇ ನೋಡಿದಾಗ ಸಾಕಷ್ಟು ಆಶ್ಚರ್ಯದಿಂದ ಬಾಯಿ ಮೇಲೆ ಕೈಯಿಟ್ಟುಕೊಳ್ಳುತ್ತಾರೆ. ಈ ಸುಂದರವಾದ ವಿಡಿಯೊ ಹಂಚಿಕೊಂಡಿರುವ ಫಾರೆಸ್ಟ್‌ ಎಸೆನ್ಶಿಯಲ್ಸ್‌, ಕನಸುಗಳು ನಿಜವಾಗಿಯೂ ನನಸಾಗುತ್ತವೆ ಎನ್ನುವುದಕ್ಕೆ ಮಲೀಷಾ ಕಥೆ ಒಂದು ಉದಾಹರಣೆ ಎಂದಿದೆ.

ಅಂದ ಹಾಗೆ ಮಲೀಶಾ ಅವರು ಈ ರೀತಿಯಲ್ಲಿ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಹಲವು ಮ್ಯಾಗ್ಜಿನ್‌ಗಳು ಕೂಡ ಮಲೀಶಾ ಅವರ ಅಂದವನ್ನು ಗುರುತಿಸಿವೆ. ಬಾಲಿವುಡ್‌ನ ಸೆಲೆಬ್ರಿಟಿಗಳೊಂದಿಗೆ ಮಲೀಶಾ ಅವರನ್ನೂ ಕೂಡ ತಮ್ಮ ಕವರ್‌ ಪೇಜ್‌ನಲ್ಲಿ ಬಳಸಿಕೊಂಡಿವೆ.

Exit mobile version