ಯೋಗಾಭ್ಯಾಸ ಮಾಡಲು, ಇನ್ನಿತರ ಯಾವುದೇ ವ್ಯಾಯಾಮ (Yoga and Exercise) ಮಾಡಲು ಒಂದು ಆರಾಮದಾಯಕ ಸ್ಥಳ ಇರಬೇಕು. ಕೆಲವರು ಮನೆಯ ಬಾಲ್ಕನಿ, ಹಾಲ್ನಲ್ಲಿ ಮಾಡುತ್ತಾರೆ. ಇನ್ನೊಂದಷ್ಟು ಮಂದಿ ವ್ಯಾಯಾಮ ಮಾಡಲೆಂದೇ ಮನೆಯಲ್ಲಿ ಒಂದು ಕೋಣೆಯನ್ನು ಮೀಸಲಿಡುತ್ತಾರೆ. ಹಾಗೇ ಮತ್ತೊಂದಷ್ಟು ಜನರು ಪ್ರಕೃತಿಯ ಮಡಿಲಿಗೆ ಹೋಗಿ ಯೋಗ, ವ್ಯಾಯಾಮ ಮಾಡುತ್ತಾರೆ. ಆದರೆ ಒಡಿಶಾದ ಈ ಮಹಾನುಭಾವ ನೆಲದ ಮೇಲೆ ಎಲ್ಲೂ ಜಾಗ ಕಾಣದೆ, ಹೆದ್ದಾರಿಯಲ್ಲಿ ಅಳವಡಿಸುವ ಪ್ರವೇಶ ದ್ವಾರದ ಮೇಲ್ಭಾಗಕ್ಕೆ ಹೋಗಿ, ಅಲ್ಲಿ ಪುಶ್ ಅಪ್ಸ್ (Push Ups Video) ಮಾಡಿದ್ದಾನೆ. ಈ ವಿಡಿಯೊ ಇನ್ಸ್ಟಾಗ್ರಾಂನಲ್ಲಿ ಸಿಕ್ಕಾಪಟೆ ವೈರಲ್ (Viral Video) ಆಗುತ್ತಿದೆ.
ಸಾಮಾನ್ಯವಾಗಿ ದೇಶದ ಬಹುತೇಕ ಹೆದ್ದಾರಿಗಳಲ್ಲಿ ಈ ಸ್ವಾಗತ ಕಮಾನು/ನಿರ್ಗಮನ ಇರುತ್ತದೆ. ಒಂದು ಊರಿನ ಗಡಿ ಮುಗಿದು, ಮತ್ತೊಂದು ಗಡಿ ಶುರುವಾಗುವ ಜಾಗದಲ್ಲಿ ರಸ್ತೆ ಅಕ್ಕಪಕ್ಕ ಎರಡು ದೊಡ್ಡ ಕಂಬಗಳನ್ನು ನಿಲ್ಲಿಸಿ, ಸ್ವಾಗತ/ನಿರ್ಗಮನ ಕಮಾನು ಹಾಕಿಡಲಾಗುತ್ತದೆ. ಈಗ ಅದೇ ಕಮಾನು ಕಂಬಗಳ ಮೇಲೆ ಹಾಕಲಾಗಿರುವ ಸೂಚನಾ ಫಲಕದ ಮೇಲ್ಭಾಗಕ್ಕೆ ಏರಿದ ಯುವಕನೊಬ್ಬ ಅಲ್ಲೇ ವ್ಯಾಯಾಮ ಮಾಡಿದ್ದಾನೆ. ಆ ಕಮಾನಿನ ಕೆಳಗೆ ವಾಹನಗಳು ಓಡಾಡುತ್ತಿರುವುದನ್ನು ನೋಡಬಹುದು. ಪುಶ್ ಅಪ್ಸ್ ಮಾಡುತ್ತಿರುವವ ಏನಾದರೂ ಆಯತಪ್ಪಿ ಬಿದ್ದರೆ ದೊಡ್ಡಮಟ್ಟದ ಅಪಾಯ ಗ್ಯಾರಂಟಿ!
ಇದನ್ನೂ ಓದಿ: Viral Video: ಮಾಡಬಾರದ್ದು ಮಾಡ್ತಿದಾರೆ ಎಂದು ದಂಪತಿಯನ್ನು ಮರಕ್ಕೆ ನೇತು ಹಾಕಿದ ಹಳ್ಳಿ ಜನ!
ಈ ವಿಡಿಯೊವನ್ನು sambalpuri_mahani ಎಂಬ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಶೇರ್ ಮಾಡಲಾಗಿದ್ದು, ‘ಅತಿಯಾಗಿ ಕುಡಿದರೆ, ಅದರಲ್ಲೂ ಲೋಕಲ್ ಸಾರಾಯಿ ಕುಡಿದರೆ ಹೀಗೆಲ್ಲ ಆಗುತ್ತದೆ’ ಎಂದು ಫನ್ನಿ ಕ್ಯಾಪ್ಷನ್ ಬರೆಯಲಾಗಿದೆ. ಹಾಗೇ, ಯಾರೂ ಇಂಥ ಸಾಹಸಕ್ಕೆ ಕೈಹಾಕಬೇಡಿ. ಅಪಾಯ ಇದು. ನಾವಿಲ್ಲಿ ಇಂಥ ವ್ಯಾಯಾಮವನ್ನು ಪ್ರಚಾರ ಮಾಡಲು ವಿಡಿಯೊ ಶೇರ್ ಮಾಡಿಕೊಂಡಿಲ್ಲ. ಸುಮ್ಮನೆ ತಮಾಷೆಗಾಗಿ ಪೋಸ್ಟ್ ಮಾಡಿದ್ದೇವೆ. ಹೀಗೆಲ್ಲ ಯಾರೂ ಮಾಡಬೇಡಿ ಎಂದು ಸಲಹೆ ಕೊಡುತ್ತಿದ್ದೇವೆ’ ಎಂದೂ ಹೇಳಲಾಗಿದೆ. ಅಂದಹಾಗೇ, ಇದು ಒಡಿಶಾದ ಬೋಲಾಂಗಿರ್ ಜಿಲ್ಲೆಯಲ್ಲಿ ಕಂಡುಬಂದ ದೃಶ್ಯ ಎನ್ನಲಾಗಿದೆ. ನೆಟ್ಟಿಗರು ವಿಡಿಯೊ ನೋಡಿ ಹುಬ್ಬೇರಿಸಿದ್ದಾರೆ. ಈ ಹುಚ್ಚುಸಾಹಸವೆಲ್ಲ ಬೇಕಾ? ಎಂದು ಪ್ರಶ್ನಿಸುತ್ತಿದ್ದಾರೆ.