Site icon Vistara News

Viral News : ಸಾಕು ನಾಯಿಗಳನ್ನು ಕೂಡಿ ಹಾಕಿ 6 ತಿಂಗಳು ಟ್ರಿಪ್‌ ಹೋದ ಮಾಲೀಕ!

dogs rescued

#image_title

ಅಮೃತಸರ: ಪ್ರಾಣಿಗಳನ್ನು ಸಾಕುವ ಮನಸ್ಸು ಅನೇಕರಿಗೆ ಇರುತ್ತದೆ. ಆದರೆ ಒಮ್ಮೆ ಆ ನಿರ್ಧಾರ ತೆಗೆದುಕೊಂಡರೆ ಅವುಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಪಂಜಾಬ್‌ನಲ್ಲಿ ವೈದ್ಯನೊಬ್ಬ ತಾನು ಸಾಕಿದ್ದ ಎರಡು ನಾಯಿಗಳನ್ನು ಮನೆಯ ಪಾರ್ಕಿಂಗ್‌ ಜಾಗದಲ್ಲೇ ಕೂಡಿ ಹಾಕಿ ಬರೋಬ್ಬರು ಆರು ತಿಂಗಳ ಕಾಲ ಪ್ರವಾಸಕ್ಕೆ ಹೋದ ಘಟನೆ (Viral News) ನಡೆದಿದೆ.

ಹೌದು. ಪಂಜಾಬ್‌ನ ಅಮೃತಸರದ ಪಿಎಸ್‌ ಬೇಡಿ ಹೆಸರಿನ ವೈದ್ಯ ಈ ರೀತಿ ಮಾಡಿದ್ದಾನೆ. ಅಪಾರ್ಟ್‌ಮೆಂಟ್‌ ಒಂದರಲ್ಲಿ ಇರುವ ಆತ ಎರಡು ಟಿಬೆಟಿಯನ್‌ ಮಸ್ತಿಫ್ಸ್‌ ನಾಯಿಗಳನ್ನು ಸಾಕಿದ್ದಾನೆ. ಆದರೆ ಆರು ತಿಂಗಳ ಹಿಂದೆ ಅವುಗಳೆರಡನ್ನೂ ಮನೆಯ ಪಾರ್ಕಿಂಗ್‌ ಜಾಗದಲ್ಲಿ ಕಟ್ಟಿ ಹಾಕಿ ಕೆನಡಾಕ್ಕೆ ಪ್ರವಾಸ ಹೋಗಿದ್ದಾನೆ. ಹೀಗೆ ಹೋಗುವಾಗ ಆತನ ಸಹೋದರನಿಗೆ ನಾಯಿಗಳನ್ನು ನೋಡಿಕೋ ಎಂದು ಹೇಳಿ ಹೋಗಿದ್ದನಂತೆ.

ಇದನ್ನೂ ಓದಿ: Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ
ಬೇಡಿಯ ಸಹೋದರ ನಾಯಿಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಂಡಿಲ್ಲ. ಇದರಿಂದಾಗಿ ಒಂದು ನಾಯಿ ಆಹಾರ ಸರಿಯಿಲ್ಲದೆ ಬಳಲುತ್ತಿದ್ದರೆ, ಇನ್ನೊಂದು ನಾಯಿಗೆ ದೇಹದ ತುಂಬ ಹುಳಗಳು ಕಚ್ಚಿ ಅಲರ್ಜಿಯುಂಟಾಗಿದೆ. ಇದನ್ನು ಪ್ರಾಣಿ ದಯಾ ಸಂಘದವರು ಕಂಡಿದ್ದು, ಪೊಲೀಸರ ಸಹಾಯದಿಂದ ಎರಡೂ ನಾಯಿಗಳನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಎಲ್ಲೆಡೆ ಭಾರೀ ಸುದ್ದಿಯಾಗುತ್ತಿದೆ.

ನಾಯಿಗಳನ್ನು ಪ್ರಾಣಿ ದಯಾ ಸಂಘದವರು ರಕ್ಷಿಸಲು ಮುಂದಾದಾಗ ಬೇಡಿ ಅವರ ಸಹೋದರ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲವಂತೆ. ಆ ಹಿನ್ನೆಲೆಯಲ್ಲಿ ಪೊಲೀಸರ ಸಹಾಯವನ್ನು ತೆಗೆದುಕೊಳ್ಳಲಾಗಿದೆ. ಈ ವಿಚಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಫ್‌ಐಆರ್‌ ಅನ್ನೂ ದಾಖಲಿಸಿದ್ದಾರೆ.

Exit mobile version