ಟ್ರಕ್ಗಳಂಥ ದೊಡ್ಡ ವಾಹನಗಳನ್ನು ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕ್ ಮಾಡುವುದು ಅಷ್ಟು ಸುಲಭವಲ್ಲ. ಸರಿಯಾಗಿ ಜಾಗ ನೋಡಿಕೊಳ್ಳಬೇಕು. ಹಿಮ್ಮುಖವಾಗಿ ವಾಹನ ಚಲಾಯಿಸುವಾಗ ಅಲ್ಲೆಷ್ಟು ಸ್ಥಳಾವಕಾಶವಿದೆ, ಗೋಡೆ, ಮರಗಳೇನಾದರೂ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನೀವು ನೋಡಿರಬಹುದು, ದೊಡ್ಡದೊಡ್ಡ ಲಾರಿ, ಟ್ರಕ್ಗಳನ್ನೆಲ್ಲ ಪಾರ್ಕ್ ಮಾಡುವಾಗ, ಅಥವಾ ತಿರಿಸಿಕೊಂಡು ಹೋಗುವಾಗ ಒಬ್ಬರು ಕೆಳಗೆ ನಿಂತು ಚಾಲಕನಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಆತ ಹೇಳಿದಂತೆ ಚಾಲಕ ವಾಹನವನ್ನು ಹಿಂದಕ್ಕೆ, ಮುಂದಕ್ಕೆ ತೆಗೆದುಕೊಂಡು ಹೋಗಿ, ನಿಲ್ಲಿಸುತ್ತಾನೆ.
ಆದರೆ ಈ ವಿಡಿಯೊ ನೋಡಿ. ಇದು ಭಾರತದ್ದು ಅಲ್ಲ. ಆದರೆ ಈ ಟ್ರಕ್ ಚಾಲಕನ ಕೌಶಲ ಹುಬ್ಬೇರಿಸುತ್ತದೆ. ಆತ ಒಂದು ವಿಶಾಲವಾದ ಪಾರ್ಕಿಂಗ್ ಸ್ಥಳದಲ್ಲಿ 18 ಚಕ್ರದ ಉದ್ದನೆಯ, ಬೃಹತ್ ಆಕಾರದ ಟ್ರಕ್ನ್ನು ಎಷ್ಟು ಸುಲಭವಾಗಿ ನಿಲ್ಲಿಸುತ್ತಾನೆ !, ಅದೂ ಕೂಡ ಟ್ರಕ್ನಲ್ಲಿ ಡ್ರೈವರ್ ಸೀಟ್ನಲ್ಲಿ ಕೂರದೆ…!
ಡ್ರೈವರ್ ಆದವನು ಡ್ರೈವರ್ ಸೀಟ್ನಲ್ಲಿ ಕೂರದೆ ಅದು ಹೇಗೆ ಅಷ್ಟು ದೊಡ್ಡ ವಾಹನವನ್ನು ಸಲೀಸಾಗಿ ಹಿಮ್ಮುಖವಾಗಿ ಚಲಿಸಿ ಪಾರ್ಕ್ ಮಾಡುತ್ತಾನೆ? ಈ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ, ವಿಡಿಯೊ ನೋಡಿಯೇ ಉತ್ತರ ಕಂಡುಕೊಳ್ಳಬೇಕು. ‘ಟ್ರಕ್ನ್ನು ಹಿಮ್ಮುಖವಾಗಿ ಸಾಗಿಸಿ, ಪಾರ್ಕ್ ಮಾಡಬೇಕಾಗಿರುತ್ತದೆ. ಚಾಲಕ ನೆಲದ ಮೇಲೆ ನಿಂತು ಸ್ಟೇರಿಂಗ್ ತಿರಿಸುತ್ತಾನೆ. ಆ ಲಾರಿ ಹಿಮ್ಮುಖವಾಗಿ ಸಾಗುತ್ತದೆ. ಕೆಲ ಕಾಲದ ಬಳಿಕ ಆ ಚಾಲಕ ಟ್ರಕ್ನ್ನು ಹತ್ತುತ್ತಾನೆ. ಆದರೆ ಅವನು ಸೀಟ್ ಮೇಲೆ ಕುಳಿತುಕೊಳ್ಳುವುದಿಲ್ಲ. ಹೀಗೆ ನಿಂತೇ ಸ್ಟೇರಿಂಗ್ ತಿರಿಸಿ ಸರಿಯಾದ ಜಾಗದಲ್ಲಿ ಟ್ರಕ್ ಪಾರ್ಕ್ ಮಾಡುತ್ತಾನೆ’
ಈ ವಿಡಿಯೊಕ್ಕೆ ಸುಮಾರು 5 ಮಿಲಿಯನ್ ವೀವ್ಸ್ ಬಂದಿದೆ. ಆದರೆ ಕಮೆಂಟ್ ಮಾಡಿದವರು ಕೆಲವರು ಹೊಗಳಿದ್ದರೆ, ಇನ್ನೂ ಕೆಲವರು ಇದೊಂದು ಸ್ಟಂಟ್ ಎಂದಿದ್ದಾರೆ. ಚಾಲಕನ ಕೌಶಲವನ್ನು ಒಂದಷ್ಟು ಜನ ಮೆಚ್ಚಿಕೊಂಡಿದ್ದಾರೆ. ಆದರೆ ಮತ್ತೊಂದಷ್ಟು ಜನರು ‘ಆ ಪಾರ್ಕಿಂಗ್ ಏರಿಯಾ ಖಾಲಿ ಇದೆ. ಹಾಗಾಗಿ ಚಾಲಕನಿಗೆ ಅದನ್ನು ಹತ್ತದೆ ಪಾರ್ಕ್ ಮಾಡಲು ಸಾಧ್ಯವಾಯಿತು. ಅದೇ ವಾಹನಗಳು ಜಾಸ್ತಿ ಇರುವ ಜಾಗದಲ್ಲಿ ಹೀಗೆ ಪಾರ್ಕ್ ಮಾಡಲಿ ನೋಡೋಣ’ ಎಂದು ಸವಾಲು ಹಾಕಿದ್ದಾರೆ. ಇದು ಸಾಧ್ಯವಿಲ್ಲ ಎಂದೇ ಬಲವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video | ಸರಸರ ಬಂದು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಪೊದೆಯೊಳಗೆ ಸರಿದು ಹೋದ ಹಾವು!