Site icon Vistara News

Viral Video: ಎದೆಗೊಬ್ಬಳು, ಬೆನ್ನಿಗೆ ಮತ್ತೊಬ್ಬಳು-ಜೋತುಬಿದ್ದ ಹುಡುಗಿಯರೊಂದಿಗೆ ಬೈಕ್​​ನಲ್ಲಿ ಸ್ಟಂಟ್​ ಮಾಡಿದ ಯುವಕ!

Man performs bike with 2 girls in Mumbai

#image_title

ಮುಂಬಯಿ: ತಾವು ಜನರ ಗಮನ ಸೆಳೆಯಬೇಕು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಬೇಕು ಎಂಬ ಕಾರಣಕ್ಕೆ ಅನೇಕರು ವಿವಿಧ ಮಾರ್ಗವನ್ನು ಅನುಸರಿಸುತ್ತಾರೆ. ಅದರಲ್ಲಿ ಈ ಬೈಕ್​ ಸ್ಟಂಟ್​ (Bike Stunt) ಮಾಡುವವರದ್ದೂ ಒಂದು ವರ್ಗ. ವಾಹನ ಸಂಚಾರ ಜಾಸ್ತಿ ಇರುವ ರಸ್ತೆಗಳಲ್ಲೂ ಬೈಕ್​ ವೀಲ್ಹಿಂಗ್, ಅಪಾಯಕಾರಿ ಸಾಹಸಗಳನ್ನು ಮಾಡುವ ಮೂಲಕ ಹುಚ್ಚಾಟ ಆಡುತ್ತಾರೆ. ವೃತ್ತಿಪರರು ಅಲ್ಲದವರು, ಹೀಗೆ ಬ್ಯೂಸಿ ರೋಡ್​​ನಲ್ಲಿ ಬೈಕ್​ ಸ್ಟಂಟ್​ ಮಾಡುವುದು ಅಪರಾಧವಾಗಿದ್ದರೂ ಒಂದಷ್ಟು ಯುವಕರು ಡೋಂಟ್ ಕೇರ್ ಮನಸ್ಥಿತಿಯಲ್ಲಿ ಇರುತ್ತಾರೆ. ಹೀಗೆ ಬೈಕ್​ ಸಾಹಸದ ಹತ್ತು ಹಲವು ವಿಡಿಯೊಗಳನ್ನು ನಾವು ಈಗಾಗಲೇ ನೋಡಿದ್ದೇವೆ.

ಮುಂಬಯಿಯ ಈ ಯುವಕ ಇನ್ನೂ ಅತಿರೇಕ ಅನ್ನಿಸುವಂಥ ಸಾಹಸ ಮಾಡಿದ್ದಾನೆ. ಇಬ್ಬರು ಯುವತಿಯರನ್ನು ಬೈಕ್ ಮೇಲೆ ಕೂರಿಸಿಕೊಂಡು, ವ್ಹೀಲಿಂಗ್ ಮಾಡಿದ್ದಾನೆ. ಅದರಲ್ಲೂ ಆ ಯುವತಿಯರು ಸರಿಯಾಗಿ ಕುಳಿತಿಲ್ಲ. ಹುಡುಗ ಬೈಕ್​ನ ಮಧ್ಯೆ ಕುಳಿತಿದ್ದರೆ, ಒಬ್ಬಳು ಯುವತಿ ಆತನ ಮುಂಭಾಗದಲ್ಲಿ, ಎದೆಗೆ ಆತುಕೊಂಡು ಕುಳಿತಿದ್ದಾಳೆ. ಇನ್ನೊಬ್ಬಳು ಹಿಂಭಾಗದಲ್ಲಿ ಬೆನ್ನಿಗೆ ಆತು ಕುಳಿತಿದ್ದಾಳೆ. ಈ ಯುವಕ ಬೈಕ್​​ನ ಮುಂದಿನ ಚಕ್ರವನ್ನು ಮೇಲಕ್ಕೆತ್ತಿ ರೈಡ್ ಮಾಡಿದ್ದಾನೆ. ಮೂವರೂ ಹೆಲ್ಮೆಟ್ ಧರಿಸಿಲ್ಲ. ಅದೂ ಕೂಡ ನಗರದ ಮಧ್ಯದಲ್ಲಿರುವ ರಸ್ತೆಯಂತೆ ಕಾಣುತ್ತಿದೆ. ಹುಡುಗಿಯರಂತೂ ಫುಲ್ ಎಂಜಾಯ್ ಮಾಡುತ್ತ ಕುಳಿತಿದ್ದನ್ನು ವಿಡಿಯೊದಲ್ಲಿ ನೋಡಬಹುದು. ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಮೂವರ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ.

@PotholeWarriors Foundation ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಮೊದಲು ಈ ವಿಡಿಯೊ ಶೇರ್ ಮಾಡಿಕೊಂಡು, ‘ಇದು ನಿಜಕ್ಕೂ ಅಪಾಯಕಾರಿ ಸಾಹಸ’ ಎಂದು ಕ್ಯಾಪ್ಷನ್​ ಬರೆಯಲಾಗಿತ್ತು. ಹಾಗೇ, ಬೈಕ್​ ನಂಬರ್​ (Mh01DH5987)ನ್ನೂ ಕೊಟ್ಟು, ಈತನನ್ನು ಹಿಡಿಯಿರಿ ಎಂದು ಹೇಳಿ ‘ಮುಂಬಯಿ ಟ್ರಾಫಿಕ್ ಪೊಲೀಸ್’ ಟ್ಟಿಟರ್​ ಅಕೌಂಟ್​ನ್ನು ಟ್ಯಾಗ್ ಮಾಡಲಾಗಿತ್ತು. ಬಳಿಕ ವಿಡಿಯೊವನ್ನು ಮುಂಬಯಿ ಸಂಚಾರಿ ಪೊಲೀಸರು ರೀಶೇರ್ ಮಾಡಿಕೊಂಡಿದ್ದಾರೆ. ‘ಈ ಮೂವರ ವಿರುದ್ಧವೂ ಬಿಕೆಎಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರನ್ನು ಪತ್ತೆ ಹಚ್ಚುವ ಸಂಬಂಧ ತನಿಖೆ ನಡೆಯುತ್ತಿದೆ. ಯಾರಿಗಾದರೂ ಈ ಮೂವರ ಬಗ್ಗೆ ಮಾಹಿತಿ ಇದ್ದಲ್ಲಿ, ನಮಗೆ ತಿಳಿಸಿ’ ಎಂದು ಹೇಳಿದ್ದಾರೆ. ‘ಈ ಮೂವರಿಗೆ ಬರೀ ದಂಡ ವಿಧಿಸಿ ಬಿಡುವುದಿಲ್ಲ. ಇವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದಿದ್ದಾರೆ.

ಜನವರಿಯಲ್ಲಿ ಲಖನೌದಿಂದ ಇಂಥದ್ದೇ ಒಂದು ವಿಡಿಯೊ ವೈರಲ್ ಆಗಿತ್ತು. ಅಲ್ಲಿನ ಹಜ್ರತ್​ಗಂಜ್ ಏರಿಯಾದಲ್ಲಿ ಜೋಡಿಯೊಂದು ಚಲಿಸುವ ಸ್ಕೂಟಿ ಮೇಲೆ ರೊಮ್ಯಾನ್ಸ್ ಮಾಡಿತ್ತು. ಆ ಹುಡುಗಿ ಅಪ್ರಾಪ್ತೆ ಆಗಿದ್ದಳು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದರು. ಬೈಕ್ ಅಸಂಬದ್ಧ ಚಾಲನೆ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಟ್ಟ ಆರೋಪದಡಿ ಹುಡುಗನನ್ನು ಅರೆಸ್ಟ್ ಮಾಡಿ, ಹುಡುಗಿಗೆ ಎಚ್ಚರಿಕೆ ಕೊಟ್ಟು ಕಳಿಸಲಾಗಿತ್ತು.

Exit mobile version