Site icon Vistara News

Viral Video | ಜತೆಯಾಗಿ, ಅತ್ಯಂತ ಅಪಾಯಕಾರಿಯಾಗಿ ಬುಲೆಟ್​​ ಬೈಕ್​​ನಲ್ಲಿ ಹೊರಟ ಸತಿ-ಪತಿ!

Man Performs Stunts With Wife Viral Video

ಬೈಕ್​ನಲ್ಲಿ ಸಾಹಸ ಮಾಡುವವರ ವಿಡಿಯೊಗಳನ್ನು ನಾವು ಆಗಾಗ ನೋಡುತ್ತಿರುತ್ತೇವೆ. ವೀಲ್ಹಿಂಗ್​ ಮಾಡುವವರು, ಬೈಕ್​​ನಲ್ಲಿ ಹೋಗುತ್ತಿದ್ದಾಗಲೇ, ಸೀಟ್​ ಮೇಲೆ ಎದ್ದುನಿಲ್ಲುವವರು, ಅರ್ಧಂಬರ್ಧ ಎದ್ದು ನಿಂತು, ಒಂದೇ ಕೈಯಲ್ಲಿ ಬೈಕ್​ ಓಡಿಸುವವರು ಹೀಗೆ ನಾನಾ ವಿಧದ ಸ್ಟಂಟ್​​ಗಳನ್ನು ಮಾಡುವ ಹುಡುಗರನ್ನು ನೋಡಿದ್ದೇವೆ. ಇಲ್ಲೊಬ್ಬ ಯುವಕ ಹಿಂಬದಿಯಲ್ಲಿ ಪತ್ನಿಯನ್ನು ಕೂರಿಸಿಕೊಂಡು ಸ್ಟಂಟ್ ಮಾಡಿದ್ದಾನೆ. ಈ ವಿಡಿಯೊ ವೈರಲ್​ ಆಗಿದೆ. ಹಾಗಂತ ಈ ಯುವಕನ ಸ್ಟಂಟ್​​ಗೆ ನೆಟ್ಟಿಗರು ಅಷ್ಟೇನೂ ಅನುಮೋದನೆ-ಮೆಚ್ಚುಗೆ ಕೊಡಲಿಲ್ಲ

ರಾಯಲ್​ ಎನ್​ಫೀಲ್ಡ್​ ಬೈಕ್​​ನಲ್ಲಿ ಪತ್ನಿಯೊಂದಿಗೆ ತೆರಳುತ್ತಿದ್ದ ಯುವಕ, ಹೀಗೆ ಹೋಗುತ್ತಲೇ ಬೈಕ್​ ಸೀಟ್​ ಮೇಲೆ ಎದ್ದುನಿಲ್ಲುತ್ತಾನೆ. ಹಿಂಬದಿಯಲ್ಲಿ, ಒಂದೇ ಕಡೆಯಲ್ಲಿ ಕಾಲು ಹಾಕಿ ಕುಳಿತ ಯುವತಿ (ಆತನ ಪತ್ನಿ) ತಲೆಗೆ ಸೆರಗು ಮುಚ್ಚಿಕೊಂಡಿದ್ದಾಳೆ. ಪತಿ ಬೈಕ್​​ ಮೇಲೆ ಎದ್ದುನಿಂತರೂ ಆಕೆ ಹಾಗೇ ಕುಳಿತೇ ಇದ್ದಳು. ಆಕೆಯ ಮುಖದಲ್ಲೂ ಏನೂ ಭಯ ಕಾಣುತ್ತಿರಲಿಲ್ಲ. Ghanta ಎಂಬ ಇನ್​ಸ್ಟಾಗ್ರಾಂ ಅಕೌಂಟ್​​ನಲ್ಲಿ ಈ ವಿಡಿಯೊ ಶೇರ್​ ಮಾಡಲಾಗಿದ್ದು ‘ನಿಜವಾದ ಬಾದ್​ ಶಾ ಇಲ್ಲಿದ್ದಾನೆ’ ಎಂದು ಕ್ಯಾಪ್ಷನ್​ ಬರೆಯಲಾಗಿದೆ.

ಆದರೆ ನೆಟ್ಟಿಗರು ಈ ವಿಡಿಯೊವನ್ನು ಅಷ್ಟೊಂದು ಇಷ್ಟಪಡಲಿಲ್ಲ. ಬೈಕ್​ ಸಾಹಸ ಸುರಕ್ಷಿತವೇ ಅಲ್ಲ, ಅಂಥದ್ದರಲ್ಲಿ ಹೀಗೆ ಹೆಂಡತಿಯನ್ನೂ ಕೂಡ್ರಿಸಿಕೊಂಡು ಸಾಹಸ ಮಾಡುವುದು ಬೇಕಾ? ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಅದರಾಚೆ ಕೆಲವರು ಮಾತ್ರ ಯುವಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video | ಭೂಲ್ ಭುಲಯ್ಯಾ ಸಿನಿಮಾದ ‘ಮಂಜುಲಿಕಾ’ ಡ್ರೆಸ್‌ನಲ್ಲಿ ಜನರನ್ನು ಹೆದರಿಸಿದ ಯುವತಿ! ನೆಟ್ಟಿಗರು ಏನಂದ್ರು?

Exit mobile version