Site icon Vistara News

Viral Video | ಬೈಕ್​ ಸವಾರನೊಟ್ಟಿಗೆ ಜಗಳ ಮಾಡಿ, ಕ್ರೋಧದಿಂದ ಜನರ ಗುಂಪಿನ ಮೇಲೆ ಕಾರು ಹರಿಸಿದ ಚಾಲಕ

Car Hits

ನವ ದೆಹಲಿ: ವಾಹನ ಚಲಾಯಿಸಿಕೊಂಡು ಹೋಗುವಾಗ ಆಕಸ್ಮಿಕವಾಗಿ ಅಪಘಾತ ಆಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಎಸ್​ಯುವಿ ಕಾರು ಚಾಲಕ ಉದ್ದೇಶಪೂರ್ವಕವಾಗಿಯೇ ಒಂದಷ್ಟು ಜನರಿಗೆ ಡಿಕ್ಕಿ ಹೊಡೆಸಿದ್ದಾನೆ. ದೆಹಲಿಯ ಅಲಿಪುರ್​ ಏರಿಯಾದಲ್ಲಿ ಎಸ್​​ಯುವಿ ಕಾರು ಚಾಲಕನೊಬ್ಬ ಬೈಕ್​ ಸವಾರನೊಂದಿಗೆ ಜಗಳ ಮಾಡಿಕೊಂಡು, ನಂತರ ಕ್ರೋಧದಲ್ಲಿ ಅಲ್ಲಿದ್ದವರ ಮೇಲೆಲ್ಲ ಕಾರು ಹರಿಸಿದ್ದಾನೆ. ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗೆ ಅಪಘಾತ ಮಾಡಿದ ಕಾರು ಚಾಲಕವ ನಿತಿನ್​ ಮಾನ್​ ಎಂಬಾತ. ಅವನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ನಡೆದದ್ದು ಅಕ್ಟೋಬರ್​ 26ರಂದು. ಅಲಿಪುರ್​ ಏರಿಯಾದ ಕಿರಿದಾದ ರಸ್ತೆಯಲ್ಲಿ ಬೈಕ್​ ಮತ್ತು ಈ ಎಸ್​ಯುವಿ ಕಾರು ಹೋಗುತ್ತಿತ್ತು. ಆಗ ಅದ್ಯಾವುದೋ ಕಾರಣಕ್ಕೆ ಬೈಕ್​ ಸವಾರ ಮತ್ತು ಕಾರು ಚಾಲಕನ ಮಧ್ಯೆ ಜಗಳ ಏರ್ಪಟ್ಟಿತ್ತು. ಇವರಿಬ್ಬರ ಜಗಳ ನೋಡುತ್ತ ಅಲ್ಲಿ ಒಂದು ಗುಂಪು ಸೇರಿತ್ತು. ಅವರಿಬ್ಬರನ್ನೂ ಅಲ್ಲಿಂದ ಕಳಿಸಲು ಸ್ಥಳೀಯರು ಪ್ರಯತ್ನ ಮಾಡುತ್ತಿದ್ದರು. ಆದರೆ ಅಷ್ಟರಲ್ಲಿ ಏನಾಯಿತೋ? ಕಾರು ಚಾಲಕ ಕ್ರೂರತನ ಮೆರೆದಿದ್ದ. ಒಮ್ಮೆಲೇ ಎಕ್ಸಲೇಟರ್​​ ತುಳಿದ. ಅಲ್ಲಿ ಸೇರಿದ್ದ ಜನರ ಮೇಲೆ ನುಗ್ಗಿಸಿದ. ಮೂವರಿಗೆ ಕಾರು ಡಿಕ್ಕಿಯಾಗಿ, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟು ಮಾಡಿ ಅಲ್ಲಿಂದ ಪರಾರಿಯಾಗಿದ್ದ ಕಾರು ಚಾಲಕನನ್ನು ಹಿಡಿಯಲು ಐವರು ಪೊಲೀಸ್​ ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯ ನೋಡಿದ ನಂತರ ಆತನನ್ನು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: Viral Video | ಸೂಕ್ಷ್ಮತೆ ಅರ್ಥ ಮಾಡಿಕೊಳ್ಳದ ಹರ್ಯಾಣ ಗೃಹ ಸಚಿವರನ್ನು ಮುಜುಗರಕ್ಕೀಡು ಮಾಡಿದ ಗೃಹ ಸಚಿವ ಅಮಿತ್​ ಶಾ

Exit mobile version