Site icon Vistara News

Physical Abuse : ತನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ತಂದೆಗೆ 702 ವರ್ಷ ಜೈಲು ಶಿಕ್ಷೆ!

man sentenced 702 years jail

ಮಲೇಶಿಯಾ: ಅಪರಾಧಿಗಳಿಗೆ ಎಷ್ಟು ವರ್ಷಗಳವರೆಗೆ ಜೈಲು ಶಿಕ್ಷೆ ಸಿಗಬಹುದು? ಹೆಚ್ಚೆಂದರೆ ಜೀವಾವಧಿ. ಆದರೆ ಮಲೇಶಿಯಾದಲ್ಲಿ ಹಾಗಲ್ಲ. ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆಯೇ ಅತ್ಯಾಚಾರ (Physical Abuse) ಮಾಡಿದ್ದ 53 ವರ್ಷದ ವ್ಯಕ್ತಿಗೆ ಅಲ್ಲಿನ ನ್ಯಾಯಾಲಯ ಬರೋಬ್ಬರಿ 702 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಮಲೇಶಿಯಾದ ಜೊಹೊರ್‌ನ ಮುನಾರ್‌ನಲ್ಲಿ ಎರಡು ಮನೆ ಹೊಂದಿರುವ ವ್ಯಕ್ತಿ 2018ರಿಂದ 2023ರ ಅವಧಿಯಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳ ಮೇಲೆ 30ಕ್ಕೂ ಅಧಿಕ ಬಾರಿ ಅತ್ಯಾಚಾರ ನಡೆಸಿದ್ದ. ಇದೀಗ 12 ಮತ್ತು 15 ವರ್ಷದವರಾಗಿರುವ ಹೆಣ್ಣು ಮಕ್ಕಳಲ್ಲಿ ಒಬ್ಬರು ತಂದೆಯಿಂದಾಗಿಯೇ ಗರ್ಭಿಣಿಯಾಗಿರುವುದಾಗಿ ವರದಿಯಾಗಿದೆ. ಈ ವಿಚಾರದಲ್ಲಿ ಆತ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: Viral video : ಊರಿನವರ ಎದುರೇ ಯುವಕನ ಕೆನ್ನೆಗೆ ಚಪ್ಪಲಿಯಲ್ಲಿ ಬಾರಿಸಿದ ಯುವತಿ! ಮುಂದೇನಾಯ್ತು?
ತಪ್ಪನ್ನು ಒಪ್ಪಿಕೊಂಡ ಆತ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿ ಎಂದು ನ್ಯಾಯಾಲಯ ಮುಂದೆ ಕೋರಿಕೊಂಡಿದ್ದ. ಆದರೆ ನ್ಯಾಯಾಲಯ ಅದಕ್ಕೆ ಒಪ್ಪಿಲ್ಲ. ತನ್ನ ಮಕ್ಕಳನ್ನೇ ಅತ್ಯಾಚಾರ ಮಾಡಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಈ ಪ್ರಮಾಣದ ಶಿಕ್ಷೆ ವಿಧಿಸಲೇಬೇಕೆಂದು ನ್ಯಾಯಾಲಯ ಹೇಳಿದೆ. ಜೈಲು ಶಿಕ್ಷೆ ಮಾತ್ರವಲ್ಲದೆ 234 ಬೆತ್ತದೇಟುಗಳನ್ನು ಆತನಿಗೆ ನೀಡುವುದಕ್ಕೂ ಸೂಚನೆ ನೀಡಲಾಗಿದೆ. “ತಾನು ಮಾಡಿದ ಮಹಾ ಅಪರಾಧಕ್ಕೆ ಇದು ಸರಿಯಾದ ಶಿಕ್ಷೆ” ಎಂದು ಅಪರಾಧಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಇದೇ ರೀತಿಯ ಘಟನೆಯೊಂದು ಮಲೇಶಿಯಾದ ಜೊಹೊರ್‌ ರಾಜ್ಯದಲ್ಲಿ ವರದಿಯಾಗಿತ್ತು. ವ್ಯಕ್ತಿಯೊಬ್ಬ ತನ್ನ 15 ವರ್ಷದ ಮಗಳ ಮೇಲೆ ಮೂರು ವರ್ಷಗಳ ಕಾಲ ಸತತವಾಗಿ ಅತ್ಯಾಚಾರ ಮಾಡಿದ್ದ. ಆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಲಯವು ಅಪರಾಧಿಗೆ 218 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಹಾಗೆಯೇ ಆತನಿಗೆ 75 ಬೆತ್ತದ ಏಟುಗಳನ್ನೂ ಕೊಡುವುದಕ್ಕೆ ಸೂಚನ ನೀಡಲಾಗಿತ್ತು.

ಇದನ್ನೂ ಓದಿ: Viral Video: ಇಲ್ಲಿದೆ ನೋಡಿ ಜಗತ್ತಿನ ಅತಿ ಸಂತೋಷದ ನಾಯಿ! ಅಬ್ಬಬ್ಬಾ, ಎಷ್ಟು ಚೆಂದವಿದೆ ಈ ವಿಡಿಯೊಗಳು
ಈ ವಿಶೇಷ ರೀತಿಯ ಶಿಕ್ಷೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮನುಷ್ಯನ ಆಯಸ್ಸೇ ಅಷ್ಟು ಇಲ್ಲದಿರುವಾಗ ಅವರಿಗೆ ಅಷ್ಟೊಂದು ವರ್ಷಗಳ ಶಿಕ್ಷೆ ನೀಡುವ ಅವಶ್ಯಕತೆ ಏನಿತ್ತು ಎನ್ನುವುದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಹಾಗೆಯೇ ಮಕ್ಕಳ ಮೇಲೇ ಅತ್ಯಾಚಾರ ಮಾಡಿದ ವ್ಯಕ್ತಿಯ ಬಗ್ಗೆಯೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Exit mobile version