ಸಿಂಹವೆಂದರೆ ಯಾರಿಗೆ ಭಯವಿಲ್ಲ ಹೇಳಿ? ಕಾಡಿನ ರಾಜ ಎಂದೇ ಕರೆಸಿಕೊಳ್ಳುವ ಸಿಂಹವನ್ನು ಕಂಡೊಡನೆ ಪ್ರಾಣವೇ ಹೋಯಿತು ಎನ್ನುವಂತೆ ಓಡಿಬಿಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಸಿಂಹವನ್ನು ಕಂಡು ಹೆದರುವುದನ್ನು ಬಿಟ್ಟು, ಅದರ ಸಮೀಪಕ್ಕೆ ಬರುತ್ತಿದ್ದಾನೆ. ತನ್ನ ಹಸುವನ್ನು ಕಾಪಾಡಿಕೊಳ್ಳಲು ಆತ ತೋರಿದ ಧೈರ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.
ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಸಿಂಹವೊಂದು ಹಸುವಿನ ಮೇಲೆ ದಾಳಿ ಮಾಡಿರುತ್ತದೆ. ಅದನ್ನು ಎಳೆದೊಯ್ಯಲೆಂದು ಅದರ ಕುತ್ತಿಗೆಯನ್ನು ಬಾಯಿಯಿಂದ ಗಟ್ಟಿಯಾಗಿ ಕಚ್ಚಿಕೊಂಡಿರುತ್ತದೆ. ಈ ದೃಶ್ಯವನ್ನು ಹಸುವಿನ ಮಾಲೀಕ ನೋಡಿ, ತನ್ನ ಹಸುವನ್ನು ರಕ್ಷಿಸಿಕೊಳ್ಳುವುದಕ್ಕೆ ಮುಂದಾಗುತ್ತಾನೆ. ರಸ್ತೆ ಮೇಲೆ ಸಿಂಹ ಮತ್ತು ದನವಿದ್ದರೆ, ದನದ ಮಾಲೀಕ ಧೈರ್ಯ ಮಾಡಿ ಸಿಂಹದ ಬಳಿಯೇ ಬರಲಾರಂಭಿಸುತ್ತಾನೆ.
ಇದನ್ನೂ ಓದಿ: Viral News : ಸಾಲ ತೀರಿಸಲು ತನ್ನ ರಕ್ತ ಮಾರಾಟ ಮಾಡಲು ಮುಂದಾದ ಮಹಿಳೆ!
ಈ ವೇಳೆ ಹಸು ಸಿಂಹದ ಬಾಯಿಯಿಂದ ತಪ್ಪಿಸಿಕೊಳ್ಳಲೆಂದು ಶತಾಯ ಗತಾಯ ಪ್ರಯತ್ನ ಮಾಡುತ್ತಿರುತ್ತದೆ. ಅದೇ ವೇಳೆ ಹಸುವಿನ ಮಾಲೀಕ ರಸ್ತೆ ಬದಿಯಿದ್ದ ಕಲ್ಲನ್ನು ತೆಗೆದುಕೊಂಡು ಸಿಂಹದತ್ತ ಎಸೆಯುವಂತೆ ಮಾಡುತ್ತಾನೆ. ಅದನ್ನು ಕಂಡೊಡನೆ ಸಿಂಹ ಭಯದಿಂದ ಹಸುವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗುತ್ತದೆ.
ગીર સોમનાથ જિલ્લાના આલીદર ગામે સિંહણ દ્વારા ગાય ઉપર હુમલો કરેલ ત્યારે ખેડૂતે #Credit કિરીટસિંહ ચૌહાણ પોતાની ગાયને એક ખમીરવંતો પ્રયાસ કરેલ અને સફળતા મળેલ.
— Vivek Kotadiya🇮🇳 BJP (@VivekKotdiya) June 29, 2023
ખુબ ખુબ સલામ#lion #animalattack #cow #lioness #kingofthejungle #hunt #wildlife #india #nationalgeographic #discovery pic.twitter.com/lDYGub9bfZ
ಈ ದೃಶ್ಯವನ್ನು ಅದೇ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಕಾರೊಂದರಲ್ಲಿದ್ದ ಜನರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆ ವಿಡಿಯೊವನ್ನು ಗುಜರಾತ್‌ನ ಜುನಗಢ್‌ನ ಬಿಜೆಪಿ ಕಾರ್ಪೋರೇಟರ್ ಆಗಿರುವ ವಿವೇಕ್ ಕೋಟದಿಯಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೂನ್ 29ರಂದು ಹಂಚಿಕೊಳ್ಳಲಾದ ಈ ವಿಡಿಯೊ ಸಾವಿರಾರು ಮಂದಿಯಿಂದ ವೀಕ್ಷಣೆಗೊಂಡಿದೆ. ನೂರಾರು ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದಾರೆ. ಹತ್ತಾರು ಮಂದಿ ವಿಡಿಯೊವನ್ನು ರಿಟ್ವೀಟ್ ಮಾಡಿದ್ದಾರೆ. ಹಾಗೆಯೇ ಹಲವಾರು ರೀತಿಯ ಕಾಮೆಂಟ್‌ಗಳು ಈ ವಿಡಿಯೊಗೆ ಬಂದಿವೆ. ಹಸುವಿನ ರಕ್ಷಣೆಗಾಗಿ ತನ್ನ ಪ್ರಾಣವನ್ನೂ ಒತ್ತೆಯಿಡುವುದಕ್ಕೆ ಸಿದ್ಧನಾದ ಹಸುವಿನ ಮಾಲೀಕನ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಕೇಳಿಬಂದಿದೆ.