ನವದೆಹಲಿ: ಮೆಟ್ರೋ ಮಾಮೂಲಿ ಸಾರಿಗೆಯಂತಲ್ಲ. ಅಲ್ಲೊಂದು ಶಿಸ್ತು ಇರುತ್ತದೆ. ಶಿಸ್ತು ಪಾಲನೆಗೆಂದೇ ಪ್ರತಿ ಮೆಟ್ರೋ ಸ್ಟೇಷನ್‌ನಲ್ಲೂ ಭದ್ರತಾ ಸಿಬ್ಬಂದಿಯನ್ನೂ ನೇಮಿಸಲಾಗಿರುತ್ತದೆ. ಆದರೆ ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಮೆಟ್ರೋ ರೈಲಿನಲ್ಲಿ ಮನಸೋಇಚ್ಛೆ ವರ್ತಿಸಿ(Metro Dance), ಜೋಕಾಲಿಯನ್ನೂ ಆಡಿದ್ದಾರೆ. ಆ ವಿಡಿಯೊ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದು, ಯೂಟ್ಯೂಬರ್ ವರ್ತನೆಗೆ ಅಸಮಾಧಾನ ವ್ಯಕ್ತವಾಗಿದೆ.
ಇದನ್ನೂ ಓದಿ: Niveditha Gowda | ಮತ್ತೊಬ್ಬರ ಭಾವನೆ ಜತೆ ಆಟ ಆಡಬೇಡಿ ನಿವೇದಿತಾ ಎಂದ ನೆಟ್ಟಿಗರು!
ನವದೆಹಲಿಯವರಾಗಿರುವ ಅಪರ್ಣಾ ದೇವ್ಯಲ್ ಈ ವಿಡಿಯೋ ಹಂಚಿಕೊಂಡವರು. ಮೆಟ್ರೋ ರೈಲೊಳಗೆ ಕುಳಿತ ಅವರು ಅದರಲ್ಲಿ ನಿಂತವರಿಗೆ ಹಿಡಿದುಕೊಳ್ಳಲೆಂದು ಕೊಡಲಾಗಿರುವ ಹಿಡಿಕೆಗಳನ್ನು ಹಿಡಿದು ಜೋಕಾಲಿಯಾಡುತ್ತಾರೆ. ಸೀಟಿನ ಮೇಲೆ ನಿಂತು ಡ್ಯಾನ್ಸ್ ಮಾಡುತ್ತಾರೆ. ಸೀಟಿನ ಮೇಲೆ ಕುಳಿತು ಚೇಷ್ಟೆಗಳನ್ನು ಮಾಡುತ್ತಾರೆ. ಈ ವಿಡಿಯೊವನ್ನು ಅವರು ಕ್ರಿಸ್ಮಸ್ ದಿನವಾದ ಡಿಸೆಂಬರ್ 25ರಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video | ಹುಡುಗಿಯರ ಮಸ್ತ್ ಡ್ಯಾನ್ಸ್, ಬೆಸ್ಟ್‌ನಲ್ಲಿ ಬೆಸ್ಟ್ ಅಂತಿದ್ದಾರೆ ನೆಟ್ಟಿಗರು
ಈ ವಿಡಿಯೊ ನೋಡಿರುವ ನೆಟ್ಟಿಗರು ಅಪರ್ಣಾ ಅವರಿಗೆ ಬುದ್ಧಿಮಾತುಗಳನ್ನು ಹೇಳಲಾರಂಭಿಸಿದ್ದಾರೆ. “ಒಬ್ಬ ಕಂಟೆಂಟ್ ಕ್ರಿಯೇಟರ್ ಆಗಿ ನೀವು ಸಮಾಜಕ್ಕೆ ಮಾದರಿಯಾಗಿರಬೇಕು. ಅದರ ಬದಲು ಈ ರೀತಿ ಚೇಷ್ಟೆಗಳನ್ನು ನೀವೇ ಮಾಡಿದರೆ ನಿಮ್ಮ ಅಭಿಮಾನಿಗಳು ಕೂಡ ಇದೇ ಕೆಲಸವನ್ನು ಮಾಡುತ್ತಾರೆ. ಇದು ತಪ್ಪು” ಎಂದು ಕೆಲವರು ಹೇಳಿದರೆ, “ಮೆಟ್ರೋ ರೈಲು ಅಥವಾ ಯಾವುದೇ ಸಾಮಾಜಿಕ ಸ್ಥಳಗಳಲ್ಲಿ ಈ ರೀತಿಯ ಅಸಭ್ಯ ವರ್ತನೆ ತರವಲ್ಲ. ಇವರ ವಿರುದ್ಧ ಮೆಟ್ರೋದವರು ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.