ಆಪ್ಟಿಕಲ್ ಇಲ್ಯೂಷನ್, ಮೈಂಡ್ ಗೇಮ್‌ನಂತಹ (Mind Game) ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಅಂಥದ್ದೇ ಮತ್ತೊಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊಲೆಗಾರ ಯಾರೆಂದು ಪತ್ತೆ ಹಚ್ಚುವುದಕ್ಕೆ ಜನರು ತಲೆ ಕೆಡಿಸಿಕೊಳ್ಳುತ್ತಿದ್ದು, ಆ ಪೋಸ್ಟ್ ವೈರಲ್ ಪಟ್ಟಿಗೆ ಸೇರಿಕೊಂಡಿದೆ.
ಸೂರ್ಯನಂದನ್ ಡಾಟ್ ನೆಟ್ ಸಂಸ್ಥೆಯ ಸಿಇಒ ಆಗಿರುವ ಪ್ರಶಾಂತ್ ಸಾಹು ಅವರು ಇಂಥದ್ದೊಂದು ಪೋಸ್ಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಕಣ್ಣಿನ ಜೊತೆ ಮೆದುಳಿಗೂ ಕೆಲಸ ಕೊಡುವ ಆಟವಾಗಿದೆ. ಹೋಟೆಲ್ ಒಂದರ ರೆಸ್ಟ್‌ರೂಂನಲ್ಲಿ ಯುವತಿಯೊಬ್ಬಳ ಕೊಲೆಯಾಗಿದೆ. ಹೋಟೆಲ್‌ನಲ್ಲಿ ನಾಲ್ಕು ಟೇಬಲ್‌ನಲ್ಲಿ ನಾಲ್ಕು ಮಂದಿ ಕುಳಿತಿದ್ದಾರೆ. ಹಾಗೆಯೇ ಒಬ್ಬ ವೇಟರ್ ಆರ್ಡರ್ ಹಿಡಿದು ನಿಂತಿದ್ದಾನೆ. ಈ ಐವರಲ್ಲಿ ಕೊಲೆಗಾರ ಯಾರು ಎನ್ನುವುದನ್ನು ನೀವು ಪತ್ತೆಹಚ್ಚಬೇಕು.
ಇದನ್ನೂ ಓದಿ: Viral Video: ಅಬ್ಬಾ ಮಳೆಯೇ; ಮನಾಲಿಯಲ್ಲಿ 4 ಅಂತಸ್ತಿನ ಹೋಟೆಲನ್ನು ಅರೆಕ್ಷಣದಲ್ಲಿ ನುಂಗಿದ ಪ್ರವಾಹ!
ಈ ಫೋಟೋವನ್ನು ಹಂಚಿಕೊಂಡ ಪ್ರಶಾಂತ್ ಅವರು ಕೊಲೆಗಾರ ಯಾರು ಮತ್ತೆ ಅವರೇ ಕೊಲೆಗಾರ ಎನ್ನುವುದಕ್ಕೆ ಕಾರಣವೇನು ಎನ್ನುವುದನ್ನು ತಿಳಿಸಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಪೋಸ್ಟ್ ಅನ್ನು ಜುಲೈ 10ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ಪೋಸ್ಟ್ 40 ಸಾವಿರಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಸಾವಿರಾರು ಮಂದಿ ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ.
Qatil Kaun ?
— Prashant Sahu 🇮🇳 (@suryanandannet) July 10, 2023
Answer with Justification . pic.twitter.com/1oQEBNntgE
ಕೆಲವರು ಈ ಫೋಟೋದಲ್ಲಿ ಮೂರನೆಯವಳಾಗಿರುವ ಯುವತಿಯೇ ಕೊಲೆಗಾತಿ ಎಂದು ಹೇಳಿದ್ದಾರೆ. ಅದು ಮಹಿಳೆಯರ ರೆಸ್ಟ್ ರೂಂ ಆಗಿರುವುದರಿಂದ ಅಲ್ಲಿಗೆ ಆಕೆ ಮಾತ್ರ ಹೋಗಲು ಸಾಧ್ಯ. ಹಾಗಾಗಿ ಆಕೆಯೇ ಕೊಲೆ ಮಾಡಿರುವುದು ಎಂದು ವಿವರಣೆ ಕೊಟ್ಟಿದ್ದಾರೆ. ಇನ್ನು ಕೆಲವರು ನಾಲ್ಕನೇ ಟೇಬಲ್‌ನಲ್ಲಿ ಕುಳಿತಿರುವ ವ್ಯಕ್ತಿಯೇ ಕೊಲೆಗಾರ ಎಂದು ಉತ್ತರಿಸಿದ್ದಾರೆ. ಆತನ ಶರ್ಟ್ ಹರಿದಿದ್ದು, ಅದರ ತುಂಡೊಂದು ಕೊಲೆಯಾಗಿ ಬಿದ್ದಿರುವ ಯುವತಿಯ ಕೈಯಲ್ಲಿ ಇದೆ. ಹಾಗೆಯೇ ಆತನ ಕುತ್ತಿಗೆಯ ಮೇಲೆ ರಕ್ತವಿದೆ ಎಂದು ವಿವರಣೆ ನೀಡಿದ್ದಾರೆ. ಇನ್ನು ಕೆಲವರು ಮೂರು ಮತ್ತು ನಾಲ್ಕನೇ ಟೇಬಲ್‌ನಲ್ಲಿರುವ ಇಬ್ಬರೂ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಮೂರನೇ ಟೇಬಲ್‌ನಲ್ಲಿ ಮತ್ತೊಂದು ಖುರ್ಚಿಯಿದೆ. ಮೊದಲಿಗೆ ನಾಲ್ಕನೇ ಟೇಬಲ್‌ನಲ್ಲಿರುವವನು ಕೂಡ ಮೂರನೇ ಟೇಬಲ್‌ನಲ್ಲೇ ಕುಳಿತಿರುತ್ತಾನೆ. ಇಬ್ಬರೂ ಸೇರಿ ಕೊಲೆ ಮಾಡಿದ ಮೇಲೆ ಬೇರೆ ಬೇರೆ ಟೇಬಲ್‌ನಲ್ಲಿ ಕುಳಿತುಕೊಳ್ಳುತ್ತಾರೆ. ಅದಕ್ಕಾಗಿಯೇ ವೇಟರ್ ಕೂಡ ಗಾಬರಿಯಿಂದ ನೋಡುತ್ತಿದ್ದಾನೆ. ಆತನ ಕೈನಲ್ಲಿ ಕೂಡ ಒಂದೇ ಟೇಬಲ್‌ಗೆ ಕೊಡಬೇಕಿದ್ದ ಎರಡು ಡ್ರಿಂಕ್ಸ್ ಇದೆ ಎಂದು ವಿವರಿಸಿದ್ದಾರೆ. ಹಾಗಾದರೆ ಇದಕ್ಕೆ ನಿಮ್ಮ ಉತ್ತರವೇನು?