Site icon Vistara News

Viral Video: ಇಲ್ಲಿದೆ ನೋಡಿ ಜಗತ್ತಿನ ಅತಿ ಸಂತೋಷದ ನಾಯಿ! ಅಬ್ಬಬ್ಬಾ, ಎಷ್ಟು ಚೆಂದವಿದೆ ಈ ವಿಡಿಯೊಗಳು

most happy dogs

ಬೆಂಗಳೂರು: ನಾಯಿಗಳೆಂದರೆ ಮುದ್ದು. ಅದರಲ್ಲೂ ಸದಾ ನಗುವಿನ ಮುಖ ಇರುವ ನಾಯಿಯಾದರೆ? ಅಬ್ಬಾ ಅದೆಷ್ಟು ಚೆಂದಾಗಿರುತ್ತದೆ ಎಂದು ನೀವು ಯೋಚಿಸುತ್ತೀದಿರಲ್ಲವೇ? ಅದಕ್ಕೆಂದೇ ನಾವಿಲ್ಲಿ ಜಗತ್ತಿನ ಅತಿ ಸಂತೋಷದ ನಾಯಿಗಳ ಕೆಲವು ವಿಡಿಯೊಗಳನ್ನು (Viral Video) ನಿಮಗಾಗಿ ಹೊತ್ತಿ ತಂದಿದ್ದೇವೆ ನೋಡಿ.

ಚೀನಾದ ಅಬ್ಬೀ ಕು ಹೆಸರಿನ ಬ್ಲಾಗರ್‌ ಇಂತಹ ವಿಶೇಷ ನಾಯಿಗಳನ್ನು ಸಾಕಿದ್ದಾರೆ. ಅವರ ಇನ್‌ಸ್ಟಾಗ್ರಾಂ ತುಂಬ ಅವರು ಸಾಕಿರುವ ನಾಯಿಗಳದ್ದೇ ವಿಡಿಯೊಗಳಿವೆ. ಅಬ್ಬೀ ಕು ಅವರು ಒಟ್ಟು ಐದು ನಾಯಿಗಳನ್ನು ಸಾಕಿದ್ದಾರೆ. ಅವುಗಳಿಗೆ ಏಂಜೆಲ್‌, ಕೊಂಗ್‌ಕೊಂಗ್‌, ಕಾಕಾ, ಫೆಂಗ್‌ಫೆಂಗ್‌ ಮತ್ತು ಬೊಬೊ ಎನ್ನುವ ಹೆಸರನ್ನಿಟ್ಟಿದ್ದಾರೆ. ಈ ಐದೂ ನಾಯಿಗಳು ನೋಡುವುದಕ್ಕೆ ಸರಿ ಸುಮಾರು ಒಂದೇ ರೀತಿಯಲ್ಲಿ ಕಾಣುವುದರಿಂದ ಯಾವುದರ ಹೆಸರು ಯಾವುದು ಎನ್ನುವುದು ಗೊಂದಲವಾಗುವುದು ಗ್ಯಾರಂಟಿ.

ಇದನ್ನೂ ಓದಿ: Viral News: ಬುರ್ಖಾ ಧರಿಸಿ ಲುಲು ಮಾಲ್‌ನ ಸ್ತ್ರೀಯರ ಶೌಚಾಲಯದಲ್ಲಿ ವಿಡಿಯೊ ಮಾಡಿದ ಟೆಕ್ಕಿ; ಹೆಣ್ಣುಮಕ್ಕಳು ಕಕ್ಕಾಬಿಕ್ಕಿ!


ಒಂದು ಪೋಸ್ಟ್‌ನಲ್ಲಿ ಅಬ್ಬೀ ಕು ಅವರು ತಮ್ಮ ಸಾಕು ನಾಯಿಗಳಿಗೆ ಹೇರ್‌ ಕಟಿಂಗ್‌ ಮಾಡಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನಾಯಿ ಮೈ ಮೇಲೆ ಕೂದಲು ಬೀಳದಂತೆ ಕವರ್‌ ಅನ್ನು ಹಾಕಲಾಗಿರುತ್ತದೆ. ಅದರ ಕೂದಲನ್ನು ಬಾಚಿ ಕತ್ತರಿಯಿಂದ ಕತ್ತರಿಸುತ್ತಾ ಹೋಗಲಾಗುತ್ತದೆ. ಆ ನಾಯಿ ಏನೂ ಅರಿಯದ ಮುಗ್ದ ಕಂದಮ್ಮನಂತೆ ಸುಮ್ಮನೆ ಕುಳಿತುಕೊಂಡು ತನ್ನ ಒಡತಿಯನ್ನೇ ನೋಡುತ್ತಿರುತ್ತದೆ. ಆ ವೇಳೆ ಇನ್ನೊಂದು ನಾಯಿ ಬಂದು ಅದನ್ನು ಮಾತನಾಡಿಸಿಕೊಂಡು ಹೋಗುತ್ತದೆ ಕೂಡ.


ಇಂತಹ ಹಲವಾರು ವಿಡಿಯೊಗಳನ್ನು ಅಬ್ಬೀ ಕು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಮುದ್ದಾದ ನಾಯಿಗಳಿಂದಾಗಿಯೇ ಅವರಿಗೆ 1.18 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ ಕೂಡ. ಅದಲ್ಲದೆ ಅವರ ಹಲವಾರು ವಿಡಿಯೊಗಳು ಲಕ್ಷಾಂತರ ಜನರಿಂದ ವೀಕ್ಷಣೆ ಪಡೆದುಕೊಂಡಿವೆ.


“ಅಯ್ಯೋ ದೇವರೇ… ಆ ನಾಯಿಯ ನಗುವನ್ನು ನಾನು ಪ್ರೀತಿಸಲಾರಂಭಿಸಿಬಿಟ್ಟೆ”, “ಸೋ ಕ್ಯೂಟ್‌”, “ಆ ನಾಯಿ ಮರಿಗಳ ಕಣ್ಣುಗಳು ಅದೆಷ್ಟು ಚೆನ್ನಾಗಿವೆ. ಐ ಲವ್‌ ದಟ್‌”, “ಅಬ್ಬಾ ಇನ್ನೂ ಈ ಕ್ಯೂಟ್‌ನೆಸ್‌ ಅನ್ನು ಹ್ಯಾಂಡಲ್‌ ಮಾಡಲು ಆಗುವುದಿಲ್ಲ”, “ನಿಜಕ್ಕೂ ಈ ನಾಯಿಗಳು ನಗುತ್ತಲೇ ಇರುವಂತೆ ಕಾಣುತ್ತವೆ. ಇವು ಯಾವ ಬ್ರೀಡ್‌ನ ನಾಯಿಗಳು?” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.

Exit mobile version