Site icon Vistara News

Viral News: ಹೆತ್ತ ಮಕ್ಕಳನ್ನೇ ಕೊಂದು ವರ್ಷಗಟ್ಟಲೆ ಫ್ರಿಜ್‌ನಲ್ಲಿ ಇಟ್ಟ ಮಹಾತಾಯಿ!

mother kills children

#image_title

ಬೆಂಗಳೂರು: ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಮಾತೇ ಸುಳ್ಳಾಗಿ, ತಾಯಿಯೇ ಮಕ್ಕಳನ್ನು ಕೊಲ್ಲುವ ಕೊಲೆಗಟುಕಿಯಾಗಿಬಿಟ್ಟರೆ? ದಕ್ಷಿಣ ಕೋರಿಯಾದಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಅದು ಈಗ ಎಲ್ಲೆಡೆ (Viral News) ಸುದ್ದಿಯಲ್ಲಿದೆ.

ದಕ್ಷಿಣ ಕೋರಿಯಾದ ಸುವೋನ್‌ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು 2018 ಮತ್ತು 2019ರಲ್ಲಿ ತಾನು ಹೆತ್ತ ಮಕ್ಕಳನ್ನು ಹೆರಿಗೆಯಾದ ಒಂದೆರೆಡು ದಿನಗಳಲ್ಲೇ ಕೊಲೆ ಮಾಡಿದ್ದಾಳೆ. ಆ ಮಕ್ಕಳ ಶವವನ್ನು ಮನೆಯಲ್ಲಿದ್ದ ಫ್ರಿಜ್‌ನಲ್ಲಿ ವರ್ಷಗಳ ಕಾಲ ಇಟ್ಟಿದ್ದಳಂತೆ. ಇದೀಗ ಈ ಘಟನೆ ಹೊರಬಿದ್ದಿದ್ದು, ಆಕೆಯನ್ನು ಬಂಧಿಸುವುದಕ್ಕೆ ವಾರೆಂಟ್‌ ಕೊಡಲು ಕೋರ್ಟ್‌ನ ಮೊರೆ ಹೋಗಿದ್ದಾರೆ ಪೊಲೀಸರು.

ಇದನ್ನೂ ಓದಿ: Viral News: ಗಂಡನನ್ನು ವೇಶ್ಯೆಯರ ಮನೆಯಲ್ಲಿ ನೋಡಿದ್ದರಂತೆ ಮಾಡೆಲ್‌ ಖ್ಲೋ ಕಾರ್ಡಶಿಯಾನ್‌
ಅಂದ ಹಾಗೆ ಈ ರೀತಿ ಕೊಲೆ ಮಾಡಿರುವ ಮಹಿಳೆಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಆಕೆಗ ಹುಟ್ಟಿದ ನಾಲ್ಕು ಮತ್ತು ಐದನೇ ಮಗುವನ್ನು ಕೊಲೆ ಮಾಡಿದ್ದಾಗಿ ಆಕೆಯೇ ಒಪ್ಪಿಕೊಂಡಿದ್ದಾಳೆ. ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಇರುವ ಹಿನ್ನೆಲೆಯಲ್ಲಿ ಈ ರೀತಿ ಕೃತ್ಯ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.

ಈ ಕೊಲೆಗಳ ಬಗ್ಗೆ ಆಕೆಯ ಪತಿ, ಅಂದರೆ ಕೊಲೆಯಾದ ಮಕ್ಕಳ ತಂದೆಗೇ ವಿಷಯ ಗೊತ್ತಿರಲಿಲ್ಲವಂತೆ. ಮಹಿಳೆ ತಾನು ಗರ್ಭ ತೆಗೆಸಿಕೊಂಡಿದ್ದಾಗಿ ಸುಳ್ಳು ಹೇಳಿದ್ದಾಳೆ ಎಂದು ಆತ ಹೇಳಿದ್ದಾನೆ. ಈ ಹಿಂದೆಯೂ ಕೂಡ ದಕ್ಷಿಣ ಕೋರಿಯಾದಲ್ಲಿ ಇಂತದ್ದೇ ಒಂದು ಘಟನೆ ನಡೆದಿತ್ತು. ಗಂಡ ಹೆಂಡತಿ ಇಬ್ಬರೂ ಸೇರಿಕೊಂಡು ತಮ್ಮದೇ ಮಗುವನ್ನು ಕೊಂದು ಮನೆಯ ಬಾಕ್ಸ್‌ ಒಂದರಲ್ಲಿ ಮೂರು ವರ್ಷಗಳ ಕಾಲ ಇಟ್ಟುಕೊಂಡಿದ್ದು ವರದಿಯಾಗಿತ್ತು.

Exit mobile version