Site icon Vistara News

Viral Video: ‘ಕ್ಯಾಂಡಿ’ ಮೇಲೆ ಧೋನಿಗೆ ‘ಕ್ರಷ್’‌, ಇವರು ಆಡುವ ಗೇಮ್‌ ‌ಮೂರೇ ಗಂಟೆಯಲ್ಲಿ 36 ಲಕ್ಷ ಡೌನ್‌ಲೋಡ್‌!

ms dhoni playing candy crush

#image_title

ಬೆಂಗಳೂರು: ಕ್ರಿಕೆಟ್‌ ಮೈದಾನದಲ್ಲಿ ಕ್ಯಾಪ್ಟನ್‌ ಕೂಲ್ ಎಂ.ಎಸ್‌.ಧೋನಿ ಅವರ ಆಟ ಮೆಚ್ಚದವರುಂಟೇ? ಬ್ಯಾಟಿಂಗ್‌ ಮತ್ತು ಕೀಪಿಂಗ್‌ನಿಂದಾಗಿ ಎಲ್ಲರ ಮನ ಗೆದ್ದಿರುವ ಧೋನಿ ತಮ್ಮ ಟ್ಯಾಬ್‌ನಲ್ಲೂ ಗೇಮ್‌ ಆಡುತ್ತಾರೆ. ಅದು ಯಾವ ಆಟ ಎಂದು ನಿಮಗೆ ತಿಳಿದಿದೆಯೇ? ಇತ್ತೀಚೆಗೆ ಧೋನಿ ಅವರ ಈ ಆಟದ ಬಗ್ಗೆ ವಿಚಾರ ಹೊರಗೆ (Viral Video) ಬಿದ್ದಿದ್ದು, ಅವರ ಅಭಿಮಾನಿಗಳೆಲ್ಲರೂ ಆ ಆಟವನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಹೌದು. ಧೋನಿ ಅವರು ಇತ್ತೀಚೆಗೆ ಪತ್ನಿ ಸಾಕ್ಷಿ ಅವರೊಂದಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಸೆಲೆಬ್ರಿಟಿ ಎನ್ನುವ ಹಂಗಿಲ್ಲದೆ ಸಾಮಾನ್ಯರಂತೆ ಎಕಾನಮಿ ಕ್ಲಾಸ್‌ನಲ್ಲೇ ಅವರು ಪ್ರಯಾಣ ಮಾಡಿದ್ದಾರೆ. ಈ ವೇಳೆ ಗಗನಸಖಿಯೊಬ್ಬರು ಧೋನಿ ಅವರಿಗೆ ಚಾಕೊಲೇಟ್‌ಗಳ ದೊಡ್ಡ ಟ್ರೇ ಒಂದನ್ನು ಅವರಿಗೆ ಕೊಟ್ಟಿದ್ದಾರೆ. ಅದರಲ್ಲಿ ಧೋನಿ ಅವರು ಒಂದು ಪ್ಯಾಕೇಟ್‌ ಅನ್ನು ಮಾತ್ರ ಎತ್ತಿಕೊಂಡು ಗಗನಸಖಿಯೊಂದಿಗೆ ನಗುತ್ತಾ ಮಾತನಾಡಿ ಕಳುಹಿಸಿದ್ದಾರೆ.

ಇದನ್ನೂ ಓದಿ: Viral Video: ಕಾರಲ್ಲ ಗುರು ಬೈಕ್ ಇದು;‌ 7 ಮಕ್ಕಳನ್ನು ಕೂರಿಸಿಕೊಂಡು ಸ್ಕೂಟಿ ಚಲಾಯಿಸಿದ ವ್ಯಕ್ತಿ
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ವೈರಲ್‌ ಆಗಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿರುವುದು ಧೋನಿ ಅವರು ತಮ್ಮ್‌ ಟ್ಯಾಬ್‌ನಲ್ಲಿ ಆಡುತ್ತಿದ್ದ ಆಟ. ಗಗನಸಖಿ ಅವರಿಗೆ ಚಾಕೊಲೇಟ್ ಕೊಡುವ ಸಮಯದಲ್ಲಿ ಧೋನಿ ಅವರು ಕ್ಯಾಂಡಿ ಕ್ರಷ್‌ ಸಾಗಾ ಆಟವನ್ನು ಆಡುತ್ತಿದ್ದರು. ಇದನ್ನು ಗಮನಿಸಿದ ಅವರ ಅಭಿಮಾನಿಗಳು ತಾವೂ ಕೂಡ ಮೊಬೈಲ್‌ನಲ್ಲಿ ಅದೇ ಆಟ ಆಡಲೆಂದು ಕ್ಯಾಂಡಿ ಕ್ರಷ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.


ಅಂದ ಹಾಗೆ ಈ ವಿಡಿಯೊ ಕಾಣಿಸಿಕೊಂಡ ನಂತರ ಮೂರೇ ಗಂಟೆಗಳಲ್ಲಿ ಬರೋಬ್ಬರಿ 36 ಲಕ್ಷ ಮಂದಿ ಕ್ಯಾಂಡಿ ಕ್ರಷ್‌ ಆಟವನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರಂತೆ. ಟ್ವಿಟರ್‌ನಲ್ಲಿ ಧೋನಿ ಟ್ರೆಂಡ್‌ ಆಗುವ ಜತೆಯಲ್ಲಿ ಕ್ಯಾಂಡಿ ಕ್ರಷ್‌ ಕೂಡ ಟ್ರೆಂಡ್‌ ಆಗಿಬಿಟ್ಟಿದೆ. ಈ ಬಗ್ಗೆ ಕ್ಯಾಂಡಿ ಕ್ರಷ್‌ನ ಅಧಿಕೃತವಲ್ಲದ ಟ್ವಿಟರ್‌ ಖಾತೆಯೊಂದರಲ್ಲಿ ಟ್ವೀಟ್‌ ಅನ್ನೂ ಹಂಚಿಕೊಳ್ಳಲಾಗಿದೆ.

Exit mobile version