Site icon Vistara News

Viral Video : ಕಾವಾಲಯ್ಯ ಹಾಡಿಗೆ ಮುಂಬೈ ಪೊಲೀಸ್ ಅಧಿಕಾರಿಯ ಸಖತ್‌ ಸ್ಟೆಪ್ಸ್‌!

police dance to kaavaalaa

ಮುಂಬೈ: ರಜನಿಕಾಂತ್‌ ಅವರ ಜೈಲರ್‌ ಸಿನಿಮಾದ ʼಕಾವಾಲಯ್ಯʼ ಹಾಡು ಭಾರೀ ಫೇಮಸ್‌ ಆಗಿದೆ. ಅದರಲ್ಲಿ ತಮನ್ನಾ ಭಾಟಿಯಾ ಅವರ ಸ್ಟೆಪ್ಸ್‌ಗಳು ಎಲ್ಲರನ್ನೂ ಮೋಡಿ ಮಾಡಿದ್ದು, ಸಾಕಷ್ಟು ಮಂದಿ ಹಾಡಿಗೆ ಕುಣಿಯಲಾರಂಭಿಸಿದ್ದಾರೆ. ಯೂಟ್ಯೂಬ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸೇರಿ ಎಲ್ಲ ಕಡೆ ಈ ಹಾಡಿನ ನೃತ್ಯವೇ ವೈರಲ್‌ ಆಗುತ್ತಿವೆ. ಹೀಗಿರುವಾಗ ಮಹಾರಾಷ್ಟ್ರದ ಮುಂಬೈನ ಪೊಲೀಸ್‌ ಅಧಿಕಾರಿಯೊಬ್ಬರು ನೃತ್ಯ ಕಲಾವಿದೆಯೊಂದಿಗೆ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿರುವುದು ಗಮನ ಸೆಳೆದಿದೆ. ಅವರ ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ವೈರಲ್‌ (Viral Video) ಆಗಿದೆ.

ಮುಂಬೈನ ಡ್ಯಾನ್ಸಿಂಗ್‌ ಕಾಪ್‌ ಎಂದೇ ಪ್ರಸಿದ್ಧರಾಗಿರುವ ಅಮೋಲ್‌ ಕಾಂಬ್ಳೆ ಅವರು ನೃತ್ಯ ಕಲಾವಿದೆ ಶ್ರೇಯಾ ಸಿಂಗ್‌ ಅವರೊಂದಿಗೆ ಸೇರಿಕೊಂಡು ಕಾವಾಲಯ್ಯ ಹಾಡಿಗೆ ನೃತ್ಯ ಮಾಡಿದ್ದಾರೆ. ಡ್ಯಾನ್ಸ್‌ ಸ್ಟುಡಿಯೋದಲ್ಲೇ ಇಬ್ಬರೂ ನೃತ್ಯ ಮಾಡಿದ್ದಾರೆ. ಶ್ರೇಯಾ ಅವರು ಬಿಳಿ ಬಣ್ಣದ ಟಿ ಶರ್ಟ್‌ಗೆ ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದರೆ, ಅಮೋಲ್‌ ಅವರು ಕಪ್ಪು ಬಣ್ಣದ ಪ್ಯಾಂಟ್‌, ಬಿಳಿ ಬಣ್ಣದ ಟಿ ಶರ್ಟ್‌ ಹಾಗೂ ಅದರ ಮೇಲೆ ಬಿಳಿ ಮತ್ತು ಕಪ್ಪು ಬಣ್ಣವಿರುವ ಶರ್ಟ್‌ ಧರಿಸಿದ್ದಾರೆ.

ಇದನ್ನೂ ಓದಿ: Viral News: 25 ವರ್ಷದ ರೈತನನ್ನು ಒಂದೇ ಏಟಿಗೆ ನುಂಗಿದ್ದ 23 ಅಡಿ ಉದ್ದದ ಹೆಬ್ಬಾವು!
ಇಬ್ಬರೂ ಒಟ್ಟಾಗಿ ಒಂದೇ ರೀತಿಯಲ್ಲಿ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅಮೋಲ್‌ ಅವರು, “ಕಾವಾಲಾ ಬ್ಯಾಂಗರ್‌ ಆಗಿರಬೇಕು” ಎಂದು ಕ್ಯಾಪ್ಶನ್‌ ಬರೆದುಕೊಂಡಿದ್ದಾರೆ. ಹಾಗೆಯೇ ವಿಡಿಯೊವನ್ನು ಶ್ರೇಯಾ ಅವರೇ ಕೋರಿಯಾಗ್ರಫಿ ಮಾಡಿದ್ದು ಎನ್ನುವ ಮಾಹಿತಿಯನ್ನೂ ಅದರಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೊವನ್ನು ಅಮೋಲ್‌ ಅವರ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಜುಲೈ 21ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 2.7 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. 25,500 ಜನರಿಗೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ನೂರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ. ಹಲವಾರು ಮಂದಿ ವಿಡಿಯೊ ಬಗ್ಗೆ ಕಾಮೆಂಟ್‌ಗಳನ್ನು ಮಾಡಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಹಾಗೆಯೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video : ಮದುವೆ ಮನೆಯಲ್ಲಿ ಮಸ್ತ್‌ ಸ್ಟೆಪ್ಸ್‌ ಹಾಕಿದ ಫೋಟೋಗ್ರಾಫರ್‌!
“ವಾವ್‌. ಈ ವಿಡಿಯೊವನ್ನು ಲೂಪ್‌ನಲ್ಲಿ ನೋಡುತ್ತಿದ್ದೇನೆ”, “ವಾವ್‌ ಸರ್‌! ಎಷ್ಟು ಚೆನ್ನಾಗಿ ನೃತ್ಯ ಮಾಡಿದ್ದೀರಿ”, “ಅತ್ಯದ್ಭುತವಾಗಿದೆ ಅಮೋಲ್‌ ಕಾಂಬ್ಳೆ ಸರ್‌”, “ಅದ್ಭುತವಾದ ನೃತ್ಯ ಸಹೋದರ”, “ಬ್ಯೂಟಿಫುಲ್‌ ಡ್ಯಾನ್ಸ್‌”, “ವಾಟ್‌ ಎ ಮೂವ್‌!” ಎನ್ನುವಂತಹ ಕಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ ಅಮೋಲ್‌ ಅವರ ಜತೆ ನೃತ್ಯ ಮಾಡಿದ ಶ್ರೇಯಾ ಅವರ ಬಗ್ಗೆಯೂ ಮೆಚ್ಚುಗೆಯ ಕಾಮೆಂಟ್‌ಗಳು ಬಂದಿವೆ.

Exit mobile version