ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Upendra Movie) ನಟನೆಯ “ಉಪೇಂದ್ರʼ ಸಿನಿಮಾದ ʻಕರಿಮಣಿ ಮಾಲೀಕʼ ನೀನಲ್ಲ ಜತೆಗೆ “ರಾವುಲ್ಲಾ.. ರಾವುಲ್ಲಾ” ಕೂಡ ಸಖತ್ ಟ್ರೆಂಡಿಂಗ್‌ನಲ್ಲಿಯೇ ಇದೆ. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್ (vickypedia) ಕಂಟೆಂಟ್ ಕ್ರಿಯೇಟರ್ ಈ ಮುಂಚೆ ರೀಲ್ಸ್ (Karimani Malika Ninalla) ಹಂಚಿಕೊಂಡು ಸಖತ್ ಸುದ್ದಿಯಾಗಿದ್ದರು. ಕರಿಮಣಿ ಜತೆ ʻರಾವುಲ್ಲಾʼ ಸಿಂಕ್ ಮಾಡಿ ನೋಡುಗರಿಗೆ ಸಖತ್ ಕಿಕ್ ಕೊಟ್ಟಿತ್ತು. ಆದರೀಗ ಮತ್ತೆ ಈ ʻನಂದಿನಿʼ ತಂಡದ ಕ್ರಿಯೇಟಿವಿಟಿ ನೆಕ್ಸ್ಟ್ ಲೆವೆಲ್‌ಗೆ ಹೋಗಿದೆ. ಹೌದು ನಿಜವಾದ ʻಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು ಹಾಗೂ ʻರಾವುಲ್ಲʼ ಜತೆಗೂಡಿ ರೀಲ್ಸ್ ಹಂಚಿಕೊಂಡಿದ್ದಾರೆ.
ಉಪೇಂದ್ರ’ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ ಅವರು. ಕನಕ ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್ ಮಾಡಿದ್ದರು. ಇದು ಸಖತ್ ವೈರಲ್ ಆಗಿತ್ತು. ಅಲ್ಲಿಂದ ಹಲವಾರು ಪ್ರತಿಭೆಗಳು ರೀಲ್ಸ್ ಹಂಚಿಕೊಂಡಿದೆ. ಅದರ ಜತೆಗೆ ಇನ್ನು ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಮಾಡಿದ ತಮ್ಮ ವಿಡಿಯೋಗಳಲ್ಲಿ “ರಾವುಲ್ಲಾ.. ರಾವುಲ್ಲಾ” ಎಂದು ಹೇಳಿರುವುದು ವೈರಲ್ ಆಗಿಬಿಟ್ಟಿದೆ. ಕೆಲವರು ಇದನ್ನು ಸಖತ್ ಟ್ರೋಲ್ ಸಹ ಮಾಡುತ್ತಿದ್ದಾರೆ. ಇದಾದ ಬಳಿಕ ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್ (vickypedia) ತಂಡ ಇನ್ನೂ ಮಜವಾಗಿ ರೀಲ್ಸ್ ಹಂಚಿಕೊಂಡಿತ್ತು. ಆದರೀಗ ಮತ್ತೆ ಇದೇ ಹಾಡಿಗೆ ನಿಜವಾದ ನಿಜವಾದ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಹಾಗೂ ರಾವುಲ್ಲ ಜತೆಗೂಡಿ ರೀಲ್ಸ್ ಹಂಚಿಕೊಂಡಿದೆ. ಇನ್ನು ಚಂದ್ರು ಕೂಡ ಸಖತ್ ಆಗಿಯೇ ಡೈಲಾಗ್ ಹೇಳಿದ್ದಾರೆ. ʻರಾವುಲ್ಲʼ ಕೂಡ ಕೈಯಲ್ಲಿ ಕಬಾಬ್ ಹಿಡಿದುಕೊಂಡು ರೀಲ್ಸ್‌ಗೆ ಸಾಥ್ ಕೊಟ್ಟಿದ್ದಾರೆ.
ಇದೀಗ ಈ ವಿಡಿಯೊಗೆ ನೆಟ್ಟಿಗರು ಕಮೆಂಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ʻಬಪ್ಪರೆ!…ಈಗ ರಾವುಲ್‌ಗೆ ಬೆಲೆ ಬಂತು, ಬೆಳ್ಳುಳ್ಳಿಗೆ ಬೆಲೆ ಜಾಸ್ತಿ ಆಯ್ತುʼʼ ಎಂದು ಕಮೆಂಟ್ ಮಾಡಿದ್ದಾರೆ. ʻಈಗ ಈ ಹಾಡಿಗೆ ಒಂದು ಕಳೆ ಬಂತುʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ʻರಾವುಲ್ಲಾ ಹೊಡ್ದ್ಯಲ್ಲೊ ಚಾನ್ಸುʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ʻರಾವುಲನಾ ದರ್ಶನ ಆಯ್ತು, ಚಿಂದಿ ಗುರು ಚಿಂದಿ!ʼʼಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ವಿಕ್ಕಿಪೀಡಿಯಾದ ವಿಕಾಸ ಮತ್ತು ತಂಡದವರನ್ನು ನೆಟ್ಟಿಗರು ಮತ್ತೊಮ್ಮೆ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Karimani Malika Ninalla: ನಂದಿನಿಗೆ ʻಕರಿಮಣಿ ಮಾಲೀಕʼ ರಾಹುಲ್ಲಾ ಅಂತೆ: ನೀವೆ ನೋಡಿ ಈ ವಿಡಿಯೊ!
ಹೊಸ ರೀಲ್ಸ್ ಹಂಚಿಕೊಂಡ ವಿಕ್ಕಿಪೀಡಿಯಾ ತಂಡ
1999ರಲ್ಲಿ ʻಉಪೇಂದ್ರʼ ಸಿನಿಮಾ ಬಿಡುಗಡೆಯಾಗಿತ್ತು. 1999ರ ಅಕ್ಟೋಬರ್ 22ಕ್ಕೆ ಬಿಡುಗಡೆಯಾದ ಈ ಸಿನಿಮಾ ಹಿಟ್ ಆಗಿತ್ತು. ನಟಿ ಪ್ರೇಮಾ, ರವೀನಾ ಟಂಡನ್, ದಾಮಿನಿ ಮೂವರು ನಾಯಕಿಯರಾಗಿದ್ದರು. ಈ ಹಾಡು ಮಾತ್ರವಲ್ಲ ಸಿನಿಮಾದ ಇತರೆ ಹಾಡುಗಳು ಕೂಡ ಭಾರಿ ಸದ್ದು ಮಾಡಿದ್ದವು.
ಏನಿಲ್ಲ..ಏನಿಲ್ಲ ಪದ ಹುಟ್ಟಿದ್ದು ಹೇಗೆ?
ಆಗ ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ಇದೆ ಎನ್ನುವ ಗಾಸಿಪ್‌ಗಳು ಹುಟ್ಟಿಕೊಂಡಿದ್ದವು. ಹಾಗೇನೂ ಇಲ್ಲ ಎಂದು ಹೇಳಲು ʻಉಪೇಂದ್ರʼ ಸಿನಿಮಾದಲ್ಲಿ ಗುರು ಕಿರಣ್ ಈ ಹಾಡು ಮಾಡಲು ಪ್ಲಾನ್ ಮಾಡಿದ್ದರು. ಏನಿಲ್ಲ ಏನಿಲ್ಲ ಅಂತಲೇ ಶುರು ಮಾಡಿದ್ದರು. ಹಾಗೆ ಏನೀಲ್ಲ ಏನೀಲ್ಲ ನನ್ನ ನಿನ್ನ ನಡುವೆ ಏನಿಲ್ಲ… ಹೀಗೆ ಹಲವು ಪದಗಳು ಸೇರಿ ಒಂದು ಪಲ್ಲವಿ ಕೂಡ ಆಗಿತ್ತು. ಉಪ್ಪಿ ಹೆಸರಿನ ಸಿನಿಮಾಕ್ಕೂ ಗುರುಕಿರಣ್ ಸಂಗೀತ ಕೊಟ್ಟಿದ್ದರು.