ನವದೆಹಲಿ: ಬಾಲಿವುಟ್ ನಟಿ ಪರಿಣಿತಿ ಚೋಪ್ರಾ (Parineeti Chopra) ಹಾಗೂ ಆಮ್ ಆದ್ಮಿ ಪಾರ್ಟಿಯ ನಾಯಕ ಹಾಗೂ ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ (Raghav Chadha) ಅವರ ಮದುವೆ ಆಮಂತ್ರಣ (Wedding Invitation Card) ಪತ್ರಿಕೆ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪರಿಣಿತಿ-ರಾಘವ್ ಅವರ ಮದುವೆಯ ಕರೆಯೊಲೆ ವೈರಲ್ ಆದ ಮೇಲಷ್ಟೇ, ಮದುವೆಯ ಕುರಿತಾದ ಮಾಹಿತಿಗಳು ಖಚಿತಗೊಂಡಿದ್ದು, ಸೆಪ್ಟೆಂಬರ್ 24ರಂದು ಇವರಿಬ್ಬರು ಸಪ್ತಪದಿ ತುಳಿಯಲಿದ್ದಾರೆ(Viral News).
ಮದುವೆ ಆಮಂತ್ರಣ ಪತ್ರಿಕೆಯ ಪ್ರಕಾರ, ತಾಜ್ ಸರೋವರದಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯುವ ರಾಘವ್ ಅವರ ಸೆಹ್ರಾಬಂದಿ ಮದುವೆಯ ಮೊದಲ ಕಾರ್ಯವಾಗಿದೆ. ತಾಜ್ ಸರೋವರದಿಂದ ಮಧ್ಯಾಹ್ನ 2 ಗಂಟೆಗೆ ಮತ್ತೊಂದು ಸಮಾರಂಭ (ಬಾರಾತ್) ನಡೆಯಲಿದೆ. ಜಯಮಾಲಾ ಕಾರ್ಯಕ್ರಮವು ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಸಂಜೆ 4 ಗಂಟೆಗೆ ಫೆರಾಸ್ ಮತ್ತು ಸಂಜೆ 6.30ಕ್ಕೆ ವಿದೈ ನಡೆಯಲಿದೆ. ಅಂದೇ ಸಂಜೆ ಕುಟುಂಬಗಳ ಸದಸ್ಯರು ಮತ್ತು ಸ್ನೇಹಿತರಿಗಾಗಿ ಆರತಕ್ಷತೆ ಕೂಡ ನಡೆಯಲಿದೆ, ಸಂಜೆಯ ಥೀಮ್ ‘ಎ ನೈಟ್ ಆಫ್ ಅಮೋರ್’ ಆಗಿರುತ್ತದೆ. ಮದುವೆಯ ಆರತಕ್ಷತೆ ಲೀಲಾ ಪ್ಯಾಲೇಸ್ ಅಂಗಳದಲ್ಲಿ ರಾತ್ರಿ 8.30ಕ್ಕೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಇದೇ ವರ್ಷದ ಮೇ ತಿಂಗಳಲ್ಲಿ ರಾಘವ್ ಚಡ್ಡಾ ಅವರು ಮತ್ತು ನಟಿ ಪರಿಣಿತಿ ಚೋಪ್ರಾ ಅವರು ತಮ್ಮ ಬಂಧುಗಳು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಎದುರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕಾರ್ಯಕ್ರಮವು ದಿಲ್ಲಿಯ ಕಪುರ್ತಲಾ ಹೌಸ್ನಲ್ಲಿ ನಡೆದಿತ್ತು. ಈಗ ವೈರಲ್ ಆಗಿರುವ ಮದುವೆ ಆಮಂತ್ರಣ ಪತ್ರಿಕೆಯ ಅಸಲಿಯತ್ತು ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂಬುದನ್ನು ಗಮನಿಸಬೇಕು. ಆದರೆ, ವೈರಲ್ ಆದು ಸುದ್ದಿಯನ್ನು ಅವರಿಬ್ಬರೂ ನಿರಾಕರಿಸಿಯೂ ಇಲ್ಲ.
7 ತಿಂಗಳ ಹಿಂದೆ ಕಿಯಾರಾ-ಸಿದ್ಧಾರ್ಥ ಮದುವೆ ಪತ್ರಿಕೆಯೂ ವೈರಲ್ ಆಗಿತ್ತು
7 ತಿಂಗಳ ಹಿಂದೆ ಬಾಲಿವುಡ್ ʻಶೇರ್ ಶಾʼ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Kiara Wedding) ಅಂತಿಮವಾಗಿ ರಾಜಸ್ಥಾನದ ಜೈಸಲ್ಮೇರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಅದಾದ ಬಳಿಕ ಇದೀಗ ಸಿದ್ ದಂಪತಿಯ ಮದುವೆ ಪತ್ರಿಕೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ: Viral news : ಪ್ಯಾಕೇಟ್ನಲ್ಲಿ ಒಂದು ಬಿಸ್ಕೆಟ್ ಕಡಿಮೆ ಕೊಟ್ಟ ಕಂಪನಿಗೆ ಬಿತ್ತು 1 ಲಕ್ಷ ರೂಪಾಯಿ ದಂಡ!
ʻʻಈಗ ನಮ್ಮ ಪರ್ಮನೆಂಟ್ ಬುಕ್ಕಿಂಗ್ ಆಗಿದೆ. ನಮ್ಮ ಪ್ರೀತಿ ಹಾಗೂ ಮುಂದಿನ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆʼಎಂದು ಕಿಯಾರಾ ಹಾಗೂ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಬೆನ್ನಲ್ಲೇ ಸಿದ್ ದಂಪತಿಯ ಮದುವೆ ಪತ್ರಿಕೆ ಹೇಗಿತ್ತು ಎಂಬುದು ಕೂಡ ರಿವೀಲ್ ಆಗಿದೆ. ಸಿದ್ಧಾರ್ಥ್ -ಕಿಯಾರಾ ಮದುವೆ ಪತ್ರಿಕೆ ಸರಳವಾಗಿ ಮೂಡಿ ಬಂದಿದೆ. ಪತ್ರಿಕೆ ಸುತ್ತ ಕಪ್ಪು ಮತ್ತು ಕಂದು ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ. ಮಧ್ಯಭಾಗದಲ್ಲಿ ಜೋಡಿಯ ಮೊದಲ ಅಕ್ಷರವನ್ನು ಕೆ ಮತ್ತು ಎಸ್ ಅನ್ನು ಹೈಲೈಟ್ ಮಾಡಲಾಗಿದೆ. ಫೆ.5ರಿಂದ 7ರವರೆಗೆ ಮದುವೆ ಸಂಭ್ರಮವಾಗಿದ್ದು, ಸೂರ್ಯಗಢ ಜೈಸಲ್ಮೇರ್ನಲ್ಲಿ ಮದುವೆ ಎಂಬುದನ್ನು ಬರೆಯಲಾಗಿತ್ತು.