ನವದೆಹಲಿ: ಹಣೆಬರಹವೊಂದು ಸರಿ ಇದ್ದರೆ ಎಂತಹ ಅಪಾಯದಿಂದ ಬೇಕಾದರೂ ಪಾರಾಗಬಹುದು ಎಂಬ ಮಾತಿದೆ. ಇದಕ್ಕೆ ನಿದರ್ಶನ ಎಂಬಂತೆ, ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿ, ಆಸ್ಪತ್ರೆಯ ಲಿಫ್ಟ್‌ನಲ್ಲಿ ಅವಘಡ ಸಂಭವಿಸಿದೆ. ಆದರೆ, ಅದೃಷ್ಟವಶಾತ್ ಅವರು ಕೂದಲೆಳೆಯ ಅಂತರದಲ್ಲಿ ಬದುಕುಳಿದಿದ್ದಾರೆ. ಲಿಫ್ಟ್ ಅವಘಡದ ವಿಡಿಯೊ ಈಗ ವೈರಲ್ (Viral Video) ಆಗಿದೆ.
ರೋಗಿಯೊಬ್ಬರು ಸ್ಟ್ರೇಚರ್ ಮೇಲೆ ಮಲಗಿದ್ದು, ಅವರನ್ನು ವೈದ್ಯಕೀಯ ಸಿಬ್ಬಂದಿಯು ಲಿಫ್ಟ್‌ನಲ್ಲಿ ಕರೆದುಕೊಂಡು ಹೋಗಲು ಯತ್ನಿಸುತ್ತಾರೆ. ಆಗ ಲಿಫ್ಟ್ ಕುಸಿದು ಅವಘಡ ಸಂಭವಿಸಿದೆ. ಸಿಸಿಟಿವಿ ದೃಶ್ಯಗಳ ಪ್ರಕಾರ ಮೊದಲಿಗೆ ವ್ಯಕ್ತಿಗೆ ಇದರಿಂದ ಗಂಭೀರವಾಗಿ ಪರಿಣಾಮ ಬೀರಿದೆ ಎನಿಸುತ್ತದೆ. ಆದರೆ, ಮತ್ತೊಂದು ವಿಡಿಯೊ ಪ್ರಕಾರ ಅವರು ಸುರಕ್ಷಿತವಾಗಿದ್ದಾರೆ ಎಂಬುದು ತಿಳಿಯುತ್ತದೆ. ಇದು ಯಾವ ಆಸ್ಪತ್ರೆಯಲ್ಲಿ ನಡೆದ ಘಟನೆ ಎಂಬುದು ತಿಳಿದು ಬರದಿದ್ದರೂ, ರೋಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | Keerthi Suresh | ಮೈಚಳಿ ಬಿಟ್ಟು ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ಕೀರ್ತಿ ಸುರೇಶ್: ವಿಡಿಯೊ ವೈರಲ್!