Site icon Vistara News

Viral Video | ಮಳೆಯಲ್ಲಿ ನಾಯಿಯ ಭರ್ಜರಿ ಡಾನ್ಸ್​; ಶ್ವಾನದ ಖುಷಿ ನೋಡಿ ಮೆಚ್ಚಿಕೊಂಡ ನೆಟ್ಟಿಗರು

Pet Dog Dance In Rain Viral Video

ಮಳೆ ಎಷ್ಟೇ ಕಷ್ಟ ತರಲಿ, ಹಾನಿ ಮಾಡಲಿ..ಇದು ಅನೇಕರ ಪಾಲಿಗೆ ಉಲ್ಲಾಸದ ಮೂಲ. ಮಳೆಯನ್ನು ರೊಮ್ಯಾಂಟಿಕ್​​ ಎಂದೂ ಭಾವಿಸುವವರು ಹಲವರಿದ್ದಾರೆ. ನೀವು ಸಿನಿಮಾಗಳನ್ನು ನೋಡಿ, ಅದೆಷ್ಟೋ ಪ್ರೇಮಗೀತೆಗಳನ್ನೆಲ್ಲ ಮಳೆಯಲ್ಲಿ ಚಿತ್ರೀಕರಿಸಲಾಗಿದೆ. ಅದು ಬಿಡಿ, ಇವತ್ತಿಗೂ ನಮ್ಮಲ್ಲಿ ಅನೇಕರು ಮಳೆ ಬಂದರೆ ಅದರಲ್ಲಿ ಮನಸೋ ಇಚ್ಛೆ ನೆನೆಯುತ್ತಾರೆ. ಡಾನ್ಸ್​ ಮಾಡಿ ಖುಷಿಪಡುತ್ತಾರೆ. ಮಸ್ತ್ ಮಜಾ ಮಾಡುತ್ತಾರೆ.

ಆದರೆ ಹೀಗೆ ಮಳೆಯನ್ನು ಇಷ್ಟಪಟ್ಟು, ನೃತ್ಯ ಮಾಡುವವರು ಕೇವಲ ನಾವು ಮನುಷ್ಯರು ಮಾತ್ರವಲ್ಲ ! ನಾಯಿಗಳಿಗೂ ಕ್ರೇಜ್​ ಇರುತ್ತದೆ ಎಂಬುದಕ್ಕೆ ಇದೀಗ ವೈರಲ್ ಆದ ಈ ವಿಡಿಯೋ ಸಾಕ್ಷಿ. ‘ಇಲ್ಲೊಂದು ಶ್ವಾನ ಮಳೆಯಲ್ಲಿ ಅದ್ಭುತವಾಗಿ ಕುಣಿದು ಕುಪ್ಪಳಿಸಿದೆ. ಬಾಲಿವುಡ್​​ನ ‘ಘನನ ಘನನ ಘಿರ್​ ಘಿರ್​ ಆಯೆ ಬದರಾ’ ಎಂಬ ಹಾಡಿಗೆ ಚೆಂದನೆಯ ನೃತ್ಯ ಮಾಡಿದೆ. ‘ಘನನ ಘನನ ..’ ಎಂಬುದು ಮಳೆಯನ್ನು ಸಂಭ್ರಮಿಸುವ ಹಾಡೇ ಆಗಿದ್ದು, ಶ್ವಾನವೂ ಅದನ್ನು ಅಷ್ಟೇ ಸಂಭ್ರಮಿಸಿದೆ.

whiskeyysyal ಎಂಬ ಇನ್​ಸ್ಟಾಗ್ರಾಂ ಅಕೌಂಟ್​​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ‘ಹೊರಗೆ ಮಳೆ ಸದ್ದು ಕೇಳುತ್ತಿದ್ದಂತೆ ಶ್ವಾನ ಅಲ್ಲಿಗೆ ಓಡಲು ಅವಸರ ಮಾಡುತ್ತದೆ. ಹೋಗಬೇಕು ಎಂಬ ಕಾತರವನ್ನು ನೋಡಬೇಕು ನೀವು…! ಟೆರೇಸ್ ಬಾಗಿಲನ್ನು ತೆಗೆಯುತ್ತಿದ್ದಂತೆ ಓಡಿ ಹೋಗಿ ಜಂಪ್​ ಮಾಡುತ್ತ, ಮಳೆ ನೀರನ್ನು ಬಾಯಿಗೆ ತೆಗೆದುಕೊಳ್ಳುತ್ತ ಸಖತ್​ ಆಗಿ ಡಾನ್ಸ್​ ಮಾಡುತ್ತದೆ’. ಈಗಾಗಲೇ ಮೂರು ಮಿಲಿಯನ್ಸ್​​ಗಳಷ್ಟು ವೀಕ್ಷಣೆ ಪಡೆದಿರುವ ವಿಡಿಯೋಕ್ಕೆ ನೆಟ್ಟಿಗರು ತುಂಬ ಖುಷಿಯಿಂದ ಕಮೆಂಟ್ ಮಾಡಿದ್ದಾರೆ. ನಾಯಿಯ ಉಲ್ಲಾಸವನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video | ಪರೀಕ್ಷೆ ಬರೆಯಲು ತುಂಬಿದ ನದಿಯಲ್ಲಿ ಈಜಿಕೊಂಡು ಹೋದ ಯುವತಿ; ಸೋದರರ ಕಾವಲು !

Exit mobile version