ಬೆಂಗಳೂರು: ಮದುವೆ ಎಂದರೆ ಸಂಭ್ರಮ. ಪ್ರತಿ ಮದುವೆ ಮನೆಯಲ್ಲೂ ಹಾಡು, ನೃತ್ಯ ಇದ್ದೇ ಇರುತ್ತದೆ. ಆ ಅದ್ಭುತ ಕ್ಷಣಗಳನ್ನು ನೆನಪುಗಳಾಗಿ ಹಿಡಿದಿಟ್ಟುಕೊಳ್ಳಲೆಂದೇ ಫೋಟೋಗ್ರಾಫರ್ ಮತ್ತು ವಿಡಿಯೊಗ್ರಾಫರ್ ಅನ್ನು ಕರೆಸಿಕೊಳ್ಳಲಾಗಿರುತ್ತದೆ. ಹಾಗೆ ಕೆಲಸದ ಮೇಲೆ ಬಂದ ಫೋಟೋಗ್ರಾಫರ್ ಅಥವಾ ವಿಡಿಯೊಗ್ರಾಫರ್ ನಿಮ್ಮ ಮದುವೆಯನ್ನು ಅವರದ್ದೇ ಮದುವೆ ಎನ್ನುವಷ್ಟು ಎಂಜಾಯ್ ಮಾಡಿಬಿಟ್ಟರೆ? ಹೌದು ವಿಡಿಯೊಗ್ರಾಫರ್ ಒಬ್ಬರು ಪಂಜಾಬಿ ಮದುವೆಯನ್ನು ತಮ್ಮದೇ ಮದುವೆಯೆನ್ನುವಷ್ಟು ಸಂತಸದಿಂದ ಎಂಜಾಯ್ ಮಾಡಿರುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral Video) ಆಗಿದೆ.
ಅದು ಅದ್ಧೂರಿ ಪಂಜಾಬಿ ಮದುವೆ. ಅಲ್ಲಿ ಎಲ್ಲರೂ ಪಂಜಾಬಿ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರು. ಅದನ್ನು ವಿಡಿಯೊ ರೆಕಾರ್ಡ್ ಮಾಡುತ್ತಿದ್ದ ವಿಡಿಯೊಗ್ರಾಫರ್ ವಿಡಿಯೊ ಮಾಡುತ್ತಾ ಮುಂದೆ ಬರುತ್ತಾನೆ. ಭರ್ಜರಿಯಾಗಿ ಕುಣಿಯುತ್ತಿದ್ದವಬರೊಬ್ಬರ ಜತೆ ಸೇರಿ ತಾನೇ ಕುಣಿಯಲಾರಂಭಿಸುತ್ತಾನೆ. ಅಲ್ಲಿ ಇದ್ದವರೆಲ್ಲರೂ ಜೋರಾಗಿ ಕೂಗಿ ಇಬ್ಬರಿಗೂ ಹುರಿದುಂಬಿಸುತ್ತಾರೆ.
ಇದನ್ನೂ ಓದಿ: Viral Video: ಏಷ್ಯಾಕಪ್ಗೆ ಬಾಂಗ್ಲಾ ಸಜ್ಜು, ಕೆಂಡ ತುಳಿದು ಅಭ್ಯಾಸ; ಇದರ ರಹಸ್ಯವೇನು
ಯಾವುದೋ ನೃತ್ಯ ಸ್ಪರ್ಧೆಯ ಜುಗಲ್‌ಬಂದಿ ನಡೆಯುತ್ತಿದೆಯೇನೋ ಎನ್ನುವಂತೆ ಇಬ್ಬರು ಕುಣಿಯುತ್ತಾರೆ. ಅದರಲ್ಲೂ ವಿಡಿಯೊಗ್ರಾಫರ್ ಒಂದು ಪಟ್ಟು ಚೆನ್ನಾಗಿಯೇ ಹೆಜ್ಜೆ ಹಾಕುತ್ತಾನೆ. ಕೈನಲ್ಲಿ ಕ್ಯಾಮೆರಾ ಹಿಡಿದುಕೊಂಡು ಬರೀ ಕಾಲುಗಳಲ್ಲೇ ಒಳ್ಳೆಯ ನೃತ್ಯವನ್ನು ಮಾಡಿ ತೋರಿಸುತ್ತಾನೆ.
if your wedding camera man ain’t doing this …..ask for refund pic.twitter.com/UGOwDdedi5
— Punjabi Touch (@PunjabiTouch) August 14, 2023
ಈ ವಿಡಿಯೊವನ್ನು ಪಂಜಾಬಿ ಟಚ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 9 ಸೆಕೆಂಡುಗಳ ಕಾಲ ಇರುವ ಈ ವಿಡಿಯೊವನ್ನು ಆಗಸ್ಟ್ 14ರಂದು ಹಂಚಿಕೊಳ್ಳಲಾಗಿದೆ. “ಒಂದು ವೇಳೆ ನಿಮ್ಮ ಮದುವೆಯ ಫೋಟೋಗ್ರಾಫರ್ ಹೀಗೆ ಕುಣಿಯಲಿಲ್ಲ ಎಂದರೆ ಹಣವನ್ನು ವಾಪಸು ಕೇಳಿ” ಎಂದು ವಿಡಿಯೊಗೆ ಕ್ಯಾಪ್ಶನ್ ಕೊಡಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 1.68 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. 390 ಜನಕ್ಕೂ ಅಧಿಕ ಮಂದಿ ವಿಡಿಯೊವನ್ನು ತಮ್ಮ ವಾಲ್‌ಗಳಿಗೆ ರಿಟ್ವೀಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಇದೆಂಥ ಕ್ರೂರ ಮನಸ್ಥಿತಿ; ಪಕ್ಕದ ಮನೆಯವರ ನಾಯಿ ಮೇಲೆ ಆ್ಯಸಿಡ್ ಎರಚಿದ ಮಹಿಳೆ!
ವಿಡಿಯೊವನ್ನು ನೋಡಿರುವ ಜನರು ತರೇವಾರು ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಕ್ಯಾಮೆರಾಮೆನ್ ಎಲ್ಲ ಮಾನದಂಡಗಳನ್ನು ಪೂರ್ಣಗೊಳಿಸಿದ್ದಾರೆ. ಈಗ ಅವರಿಗೆ ಆಧಾರ್ ಕಾರ್ಡ್ ಕೊಡಬಹುದು”, “ಆ ವಿಡಿಯೊಗ್ರಾಫರ್ ಮಾಡಿರುವ ವಿಡಿಯೊ ನೋಡಿದ ಮೇಲೆ ನೀವು ಗ್ಯಾರಂಟಿ ಹಣ ವಾಪಸು ಕೊಡುವುದಕ್ಕೆ ಕೇಳುತ್ತೀರಿ”, “ಆ ವಿಡಿಯೊ ಯಾವ ರೀತಿಯಲ್ಲಿ ಬಂದಿದೆ ಎನ್ನುವುದನ್ನು ನಾನು ನೋಡಬೇಕು” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.