Site icon Vistara News

Viral Video: ರೈಲು ನಿಲ್ದಾಣದಲ್ಲಿ ಮಲಗಿದ್ದವರ ಮೇಲೆ ನೀರು ಸುರಿದ ಪೊಲೀಸ್‌! ನೆಟ್ಟಿಗರಿಂದ ಫುಲ್‌ ಕ್ಲಾಸ್

train station police

ಬೆಂಗಳೂರು: ರೈಲ್ವೆ ನಿಲ್ದಾಣಗಳಿಗೆ ರಾತ್ರಿ ವೇಳೆ ಹೋದರೆ ಅಲ್ಲಿನ ಪ್ಲಾಟ್‌ಫಾರಂಗಳಲ್ಲಿ ಜನರು ಮಲಗಿರುವುದನ್ನು ಕಾಣಬಹುದು. ಅದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆದರೆ ಆ ರೀತಿ ಮಲಗಿದ್ದವರ ಮೇಲೆ ಪೊಲೀಸ್‌ ಅಧಿಕಾರಿ ನೀರು ಸುರಿದು ಅಮಾನವೀಯತೆ ತೋರಿಸಿರುವ ಘಟನೆ ಪುಣೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಮಹಾರಾಷ್ಟ್ರದ ಪುಣೆಯ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಮಲಗಿದ್ದವರ ಮೇಲೆ ರೈಲ್ವೆ ಪೊಲೀಸ್‌ ಅಧಿಕಾರಿಯೊಬ್ಬರು ಬಾಟಲಿನ ನೀರನ್ನು ಹಾಕುತ್ತಾರೆ. ಅದರಿಂದ ಜನರು ಎಚ್ಚರಗೊಳ್ಳುತ್ತಾರೆ. ಈ ದೃಶ್ಯವಿರುವ ವಿಡಿಯೊವನ್ನು ರೂಪೇನ್‌ ಚೌಧರಿ ಹೆಸರಿನವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ “RIP ಮಾನವೀಯತೆ” ಎಂದು ಅವರು ಕ್ಯಾಪ್ಶನ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Viral Video: ಕಣ್ಣು ಮಿಟುಕಿಸದೆ ನೋಡುವ ಡ್ಯಾನ್ಸ್‌ ಇದು! ಅಬ್ಬಬ್ಬಾ ಏನ್‌ ಸ್ಟೆಪ್ಸ್‌ ಗುರೂ…
ಈ ವಿಡಿಯೊ ಟ್ವಿಟರ್‌ನಾದ್ಯಂತ ಭಾರೀ ವೈರಲ್‌ ಆಗಿದೆ. ಲಕ್ಷಗಟ್ಟಲೆ ಜನರು ಈ ವಿಡಿಯೊವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾರಂಭಿಸಿದ್ದಾರೆ. ಈ ರೀತಿಯಲ್ಲಿ ಪೊಲೀಸರು ಅಮಾನವೀಯತೆ ತೋರಿಸಿದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ರೈಲ್ವೆ ನಿಲ್ದಾಣಗಳಲ್ಲಿ ಜನರಿಗೆ ಮಲಗುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಅದರ ಬದಲಾಗಿ ಈ ರೀತಿಯಲ್ಲಿ ಜನರೊಂದಿಗೆ ಆಟವಾಡಬಾರದು ಎಂದು ಅನೇಕರು ಹೇಳಲಾರಂಭಿಸಿದ್ದಾರೆ.


ಈ ವಿಡಿಯೊ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳವರೆಗೂ ತಲುಪಿದೆ. ಈ ಬಗ್ಗೆ ಪುಣೆ ವಿಭಾಗೀಯ ರೈಲ್ವೆ ಮ್ಯಾನೇಜರ್‌ ಇಂದು ದುಬೆ ಅವರು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. “ಪ್ಲಾಟ್‌ಫಾರಂಗಳಲ್ಲಿ ಜನರು ಈ ರೀತಿ ಮಲಗುವುದರಿಂದ ಪ್ರಯಾಣಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತದೆ. ಹಾಗೆಂದು ಈ ರೀತಿಯಲ್ಲಿ ಅವರೊಂದಿಗೆ ಅಮಾನವೀಯವಾಗಿ ವರ್ತಿಸುವುದು ತರವಲ್ಲ. ಇದು ನಮಗೂ ನೋವುಂಟು ಮಾಡಿದೆ. ಸಂಬಂಧಿಸಿದ ಅಧಿಕಾರಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

Exit mobile version