Site icon Vistara News

Viral News : ಅಮ್ಮ ಪರೀಕ್ಷೆ ಹಾಲ್‌ನಲ್ಲಿ, ಶಿಶು ಪೊಲೀಸರ ಕೈಯಲ್ಲಿ!

police taking care of kid

ಗಾಂಧಿನಗರ : ಕನಸುಗಳನ್ನು ಯಾವಾಗ ಬೇಕಾದರೂ ಕಾಣಬಹುದು. ಹಾಗೆಯೇ ಮದುವೆಯಾಗಿ ಮಕ್ಕಳಿರುವ ಹೆಣ್ಣು ಮಕ್ಕಳು ಕೂಡ ವೃತ್ತಿಪರರಾಗಿ ಬದುಕು ಕಟ್ಟಿಕೊಳ್ಳುವ ಬಗ್ಗೆ ಕನಸನ್ನು ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ. ಆ ರೀತಿಯಲ್ಲಿ ಕನಸಿನ ಹಾದಿಯಲ್ಲಿ ನಡೆಯಲಾರಂಭಿಸಿದ ತಾಯಿಯೊಬ್ಬಳ ಶಿಶುವನ್ನು ಪರೀಕ್ಷಾ ಕೇಂದ್ರದ ಕಾವಲಿಗಿದ್ದ ಪೊಲೀಸ್‌ ಅಧಿಕಾರಿಯೇ ಪಾಲಿಸಿರುವ ವಿಶೇಷ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ಶಿಶುವಿನ ತಾಯಿಯೊಬ್ಬಳು ಗುಜರಾತ್‌ನ ಹೈಕೋರ್ಟ್‌ ಪ್ಯೂನ್‌ ಹುದ್ದೆಗೆಂದು ಅರ್ಜಿ ಸಲ್ಲಿಸಿದ್ದಳು. ಅದರ ಪ್ರವೇಶ ಪರೀಕ್ಷೆ ಇತ್ತೀಚೆಗೆ ನಡೆದಿದ್ದು, ಆಕೆ ಕೂಡ ಪರೀಕ್ಷೆ ಬರೆದಿದ್ದಾರೆ. ಆದರೆ ಪರೀಕ್ಷೆ ಸಮಯದಲ್ಲಿ ಅವರು ತಮ್ಮ ಮಗುವನ್ನು ಹೊರಗೆ ಸಂಬಂಧಿಯೊಬ್ಬರೊಂದಿಗೆ ಬಿಟ್ಟಿದ್ದರಂತೆ. ಆಗ ಮಗು ಅಳುವುದಕ್ಕೆ ಆರಂಭಿಸಿದೆ.

ಇದನ್ನೂ ಓದಿ: Video Viral : ಕುದಾಪುರದಲ್ಲಿ ಓಡಾಡ್ತು ಚಿರತೆ! ವಿಡಿಯೊ ನಕಲಿ ಎಂದ ಡಿಆರ್‌ಡಿಒ
ಮಗು ಅಳುವುದನ್ನು ಕಂಡು ಆ ಪರೀಕ್ಷಾ ಕೇಂದ್ರದ ಕಾವಲಿಗೆಂದು ನಿಯೋಜನೆ ಮಾಡಲಾಗಿದ್ದ ಮಹಿಳಾ ಪೊಲೀಸ್‌ ಅಧಿಕಾರಿಯೇ ಮಗುವನ್ನು ಕೈಗೆ ಎತ್ತಿಕೊಂಡಿದ್ದಾರೆ. ಪರೀಕ್ಷೆ ಮುಗಿಯುವವರೆಗೆ ತಮ್ಮ ಕೆಲಸದೊಂದಿಗೆ ಆ ಮಗುವನ್ನು ಎತ್ತಿಕೊಂಡು ಪಾಲನೆ ಮಾಡಿದ್ದಾರೆ.

ಈ ರೀತಿ ಮಹಿಳಾ ಪೊಲೀಸ್‌ ಅಧಿಕಾರಿ ತಾಯಿಯೊಬ್ಬಳಿಗೆ ಸಹಾಯ ಮಾಡಿದ ಫೋಟೋವನ್ನು ಅಹಮದಾಬಾದ್‌ ಪೊಲೀಸರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋ ಸಾಮಾಜಿಕ ಜಾಲತಾಣಗಳ ತುಂಬಾ ಹರಿದಾಡಿದ್ದು, ಭಾರೀ ವೈರಲ್‌ ಆಗಿದೆ. ಜನರು ಮಹಿಳಾ ಪೊಲೀಸ್‌ ಅಧಿಕಾರಿ ಬಗ್ಗೆ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. “ಪೊಲೀಸರೆಂದರೆ ಭಯ ಪಡುವಂತಿರಬಾರದು. ಈ ರೀತಿಯಲ್ಲಿ ಸ್ನೇಹದಿಂದ ಕರ್ತವ್ಯ ನಿರ್ವಹಿಸುವವರಾಗಿರಬೇಕು” ಎಂದು ಕಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.

Exit mobile version