ಪ್ರಾಣಿಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅದು ಪ್ರಾಣಿಗಳ ಬೇಟೆಯಾಗಲೀ ಅಥವಾ ಸಾಕು ಪ್ರಾಣಿಗಳ ಮುದ್ದಾದ ಆಟಗಳೇ ಆಗಲಿ. ಎಲ್ಲವೂ ಕೂಡ ಜನರಿಗೆ ನೋಡುವುದಕ್ಕೆ ಇಷ್ಟವಾಗುತ್ತವೆ. ಅದೇ ರೀತಿಯಲ್ಲಿ ಇದೀಗ ಮನೆಯಲ್ಲಿ ಸಾಕಿರುವ ಇಲಿಗಳು ಬಾಸ್ಕೆಟ್‌ಬಾಲ್ ಪಂದ್ಯಾವಳಿ ನಡೆಸಿಕೊಂಡು ಊಟ ಸಂಪಾದಿಸಿಕೊಳ್ಳುವ ವಿಶೇಷ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.
ಅವು ಬಟರ್ ಮತ್ತು ಬ್ಲೂಬೆರಿ ಹೆಸರಿನ ಇಲಿಗಳು. ಅವುಗಳನ್ನು ಮನೆಯಲ್ಲೇ ಸಾಕಲಾಗಿದೆ. ಈ ಇಲಿಗಳ ಮಾಲೀಕಳು ಅವುಗಳಿಗೆಂದೇ ಸಣ್ಣದೊಂದು ಬಾಸ್ಕೆಟ್‌ಬಾಲ್ ಮೈದಾನವನ್ನೂ ರಚಿಸಿದ್ದಾಳೆ. ಅದರಲ್ಲಿ ಎರಡೂ ಕಡೆ ಬಾಲ್ ಹಾಕುವುದಕ್ಕೆ ಬಾಸ್ಕೆಟ್‌ಗಳನ್ನು ಇರಿಸಲಾಗಿದೆ. ಒಂದು ಬಾಲ್ ಅನ್ನು ಇಲಿಗಳಿಗೆ ಕೊಡಲಾಗುತ್ತದೆ. ಈ ಬಟರ್ ಮತ್ತು ಬ್ಲೂಬೆರಿ ತಮಗೆ ನಿಗದಿಯಾಗಿರುವ ಬಾಸ್ಕೆಟ್‌ಗೆ ಬಾಲ್ ತಂದು ಹಾಕುತ್ತವೆ. ಆಗ ಮಾಲೀಕೆ ಬಾಸ್ಕೆಟ್ ಒಳಗೆ ಬಾಲ್ ಹಾಕಿದ ಇಲಿಗೆ ತಿಂಡಿ ಕೊಡುತ್ತಾಳೆ.
ಇದನ್ನೂ ಓದಿ: Video Viral : ರಾಯಚೂರು YTPS ಬಳಿ ಕಂಡ ಅನಕೊಂಡ ಮಾದರಿಯ ಹೆಬ್ಬಾವು!
ಆ ಇಲಿ ತಿಂಡಿ ತಿನ್ನುವಷ್ಟರಲ್ಲಿ ಮತ್ತೊಂದು ಇಲಿ ಬಾಲ್ ಅನ್ನು ಎತ್ತಿಕೊಂಡು ಹೋಗಿ ತನ್ನ ಬಾಸ್ಕೆಟ್ ಒಳಗೆ ಹಾಕುತ್ತದೆ. ಆಗ ಅದಕ್ಕೂ ತಿಂಡಿ ಸಿಗುತ್ತದೆ. ಹೀಗೆ ಎರಡೂ ಇಲಿಗಳು ಚೂರೂ ಸಮಯ ಬಿಡದೆ ಬಾಲ್ ಅನ್ನು ಬಾಸ್ಕೆಟ್ ಒಳಗೆ ಹಾಕಿ ತಿಂಡಿ ತಿನ್ನುವ ಕೆಲಸ ಮಾಡುತ್ತವೆ.
ಈ ಆಟದ ವಿಡಿಯೊವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಶ್ಯಾಡೋಥ್ರೆಟ್ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಆರು ದಿನಗಳ ಹಿಂದೆ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ ನೂರು ಮಂದಿಗೂ ಅಧಿಕ ಜನರಿಂದ ಲೈಕ್ ಪಡೆದುಕೊಂಡಿದೆ. ಕೆಲವರು ವಿಡಿಯೊ ಬಗ್ಗೆ ಕಾಮೆಂಟ್‌ಗಳನ್ನೂ ಮಾಡಿದ್ದಾರೆ ಕೂಡ.
Butter and Blueberry playing vs basketball!
by u/Shadowtherat in Shadowtherat
“ಬಟರ್ ಆಟದಲ್ಲಿ ಮೋಸ ಮಾಡಿದೆ. ಹಾಗಾಗಿ ಫೌಲ್ ಆಗಿದೆ. ಈಗ ಬ್ಲೂಬೆರಿಗೆ ಫ್ರೀ ಥ್ರೋ ಸಿಗಬೇಕು”, “ಇವರಿಬ್ಬರು ನಿಜಕ್ಕೂ ಗೋಲ್ ಟ್ರೆಂಡಿಂಗ್”, “ಅಬ್ಬಾ ಎಷ್ಟು ಸ್ಮಾರ್ಟ್ ಆಗಿವೆ ಈ ಇಲಿಗಳು. ನನಗೆ ಇವುಗಳ ಮೇಲೆ ಪ್ರೀತಿ ಹುಟ್ಟಿಬಿಟ್ಟಿತು”, “ವಾವ್, ತುಂಬಾ ಸ್ಮಾರ್ಟ್ ಇಲಿಗಳಿವು” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.