ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತೀರಿ. ಆ ಕೆಲಸ ಬೋರ್ ಆಗಿದೆ ಅಥವಾ ಉತ್ತಮ ವೇತನ, ಹುದ್ದೆಗಾಗಿ ಮತ್ತೊಂದು ಸಂಸ್ಥೆಗೆ ಸೇರಬೇಕು ಎಂದಾದಾಗ ಈಗಿರುವ ಕಂಪನಿಯ ಮೇಲಧಿಕಾರಿ, ಮುಖ್ಯಸ್ಥನಿಗೆ ರಾಜೀನಾಮೆ ಪತ್ರ (Resignation Letter)ಸಲ್ಲಿಸಬೇಕು. ಅದನ್ನವರು ಅನುಮೋದಿಸಬೇಕು ಎಂಬುದು ಎಲ್ಲ ಕಡೆ ಜಾರಿಯಲ್ಲಿರುವ ನಿಯಮ. ಈ ರಾಜೀನಾಮೆ ಪತ್ರ ಬರೆಯಲೂ ಅದರದ್ದೇ ಆದ ಒಂದು ಪದ್ಧತಿಯಿದೆ, ಮಾದರಿಯಿದೆ. ಆದರೆ ಯಾವುದೋ ಕಂಪನಿಯ ಉದ್ಯೋಗಿಯೊಬ್ಬ ಅತ್ಯಂತ ಚಿಕ್ಕದಾಗಿ ಮತ್ತು ನೋಡಿದರೇ ನಗು ಬರುವಂಥ ರೀತಿಯಲ್ಲಿ ರಾಜೀನಾಮೆ ಪತ್ರ ಬರೆದಿದ್ದಾರೆ. ಇದರ ಫೋಟೋವನ್ನು ಕಾವೇರಿ ಎಂಬುವರು ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇವರು ಮೊದಲಿಗೆ ʼಡಿಯರ್ ಸರ್ʼ ಎಂದು ಬರೆದಿದ್ದಾರೆ. ಅದರ ಕೆಳಗೆ ದೊಡ್ಡದಾಗಿ RESIGNATION LETTER ಎಂದು ಕ್ಯಾಪಿಟಲ್ ಅಕ್ಷರಗಳಲ್ಲಿ ನಮೂದಿಸಿ, ನಂತರ ʼಬೈ ಬೈ ಸರ್ʼ ಎಂದು ಬರೆದು ಕೊನೆಯಲ್ಲಿ ತನ್ನ ಸಹಿ ಹಾಕಿದ್ದಾರೆ. ಅತ್ಯಂತ ಚಿಕ್ಕದಾದ ರಾಜೀನಾಮೆ ಪತ್ರವನ್ನು ನೋಡಿದ ಅನೇಕರು ಇದು ನಿಜಕ್ಕೂ ಮಾದರಿ ರೆಸಿಗ್ನೇಶನ್ ಲೆಟರ್ ಎಂದು ಹೇಳಿದ್ದಾರೆ. ʼನಾವು ನಮ್ಮ ಕಂಪನಿಗೆ ರಾಜೀನಾಮೆ ಕೊಡುವಾಗ ಹೀಗೇ ಮೂರು ಅಕ್ಷರದಲ್ಲೇ ಬರೆಯುತ್ತೇವೆʼ ಎಂದು ಹೇಳಿಕೊಂಡಿದ್ದಾರೆ. ನೀವೂ ನೋಡಿ, ವರ್ಕೌಟ್ ಆಗಬಹುದು !
ಇದನ್ನೂ ಓದಿ: ಉದ್ಯೋಗಿಯೊಬ್ಬ ರಜೆ ಕೇಳಿ ಬಾಸ್‌ಗೆ ಕಳಿಸಿದ ಇ-ಮೇಲ್ ವೈರಲ್; ಪ್ರಾಮಾಣಿಕತೆ ಮೆಚ್ಚುವಂಥದ್ದು !