Site icon Vistara News

ಎಲ್ಲಿ ಹೋದ್ರೂ ಹಿಂಬಾಲಿಸುತ್ತಾನೆ, ಶಿಶುಗಳಂತೆ ಅರಚುತ್ತಾನೆ ದೆವ್ವಗಂಡ; ಆತ್ಮದಿಂದ ವಿಚ್ಛೇದನ ಬೇಕು ಅಂತಿದ್ದಾಳೆ ಈ ಮಹಿಳೆ!

Rocker Brocarde want a divorce from her ghost Husband

#image_title

ದೆವ್ವ-ಪಿಶಾಚಿಗಳೆಂದರೆ ಭಯ ಪಡುವವರೇ ಹೆಚ್ಚು. ದೆವ್ವ ಎನ್ನುವುದು ವಾಸ್ತವವಾಗಿ ಇದೆಯೊ-ಇಲ್ಲವೋ ಎಂಬ ಪ್ರಶ್ನೆಗೆ ನಿಖರ ಉತ್ತರವೂ ದೊರೆತಿಲ್ಲ. ಆದರೂ ಸಿನಿಮಾಗಳಲ್ಲಿ, ಕತೆಗಳಲ್ಲಂತೂ ಈ ದೆವ್ವ-ಬೂತಗಳೆಲ್ಲ ಸದಾ ಜೀವಂತ. ಸಿನಿಮಾಗಳಲ್ಲಿ ದೆವ್ವವನ್ನು ಕಂಡರೂ ಹೌಹಾರುವ ಅನೇಕಾನೇಕ ಜನರ ಮಧ್ಯೆ ಲಂಡನ್​​ನಲ್ಲಿ ಗಾಯಕಿ ರಾಕರ್ ಬ್ರೋಕಾರ್ಡ್ ಎಂಬಾಕೆ 2022ರಲ್ಲಿ ಎಡ್ವಾರ್ಡ್​ ಎಂಬ ಹೆಸರಿನ ದೆವ್ವವನ್ನು ಮದುವೆಯಾಗಿದ್ದಳು. ಅದ್ಯಾವುದೋ ಒಂದು ಹಳೇ ಚರ್ಚ್​ನಲ್ಲಿ (ಬೂತಬಂಗಲೆಯಂತ ಚರ್ಚ್​)ನಲ್ಲಿ 2022ರ ಹ್ಯಾಲೋವೀನ್ ಆಚರಣೆ ವೇಳೆ ಆ ದೆವ್ವವನ್ನು ವರಿಸಿದ್ದಳು. ಆದರೆ ಈಗ ಬ್ರೋಕಾರ್ಡ್ ತನಗೆ ಆ ಪತಿದೆವ್ವದಿಂದ ವಿಚ್ಚೇದನ ಬೇಕು ಎನ್ನುತ್ತಿದ್ದಾಳೆ.

‘ನನ್ನ ಪತಿ ನನ್ನ ಜೀವನವನ್ನು ಜೀವಂತ ನರಕ ಮಾಡಿಬಿಟ್ಟ. ಎಡ್ವಾರ್ಡ್ (ದೆವ್ವ)ನನ್ನು ಭೇಟಿಯಾಗಿ ಐದು ತಿಂಗಳ ನಂತರ ಚರ್ಚ್​​ನಲ್ಲಿ ಮದುವೆಯಾದೆ. ನಾನು ಮದುವೆಯಾಗಿದ್ದು ಒಬ್ಬ ಶೂರ ಯೋಧನ ಆತ್ಮವನ್ನು ಎಂಬ ಖುಷಿಯಿತ್ತು. ಆದರೆ ಮದುವೆಯಾದ ಬಳಿಕ ಆ ದೆವ್ವ ಇಡೀ ದಿನ ನನ್ನನ್ನು ಹಿಂಬಾಲಿಸುತ್ತಿದೆ. ನನ್ನನ್ನೂ ಎಲ್ಲಿಗೂ ಹೋಗಲು ಬಿಡುತ್ತಿಲ್ಲ. ಅದೆಷ್ಟೋ ಸಲ ನನ್ನ ಪತಿ (ದೆವ್ವ)ಗೇ ಹೇಳಿದೆ. ನನಗೆ ಈ ಮದುವೆ ಬೇಡ, ಬಿಟ್ಟು ಹೋಗು ಎಂದು. ಆದರೆ ಅವನು ಕೇಳುತ್ತಲೇ ಇಲ್ಲ. ಸದ್ಯ ನಾನು ದೆವ್ವದಿಂದ ಬಿಡಿಸಿಕೊಳ್ಳಲು ಭೂತೋಚ್ಛಾಟಕನ ಮೊರೆ ಹೋಗಲು ನಿರ್ಧಾರ ಮಾಡಿದ್ದೇನೆ. ಇನ್ನು ಮಾತ್ರ ಆ ದೆವ್ವದ ಗಂಡನನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ದೆವ್ವವನ್ನು ಮದುವೆಯಾಗಿ ಬಾಳ್ವೆ ಮಾಡುವುದು ಸರಿಯಲ್ಲ. ಆದರೆ ಇದು ನನ್ನ ಸೋಲು ಎಂದುಕೊಳ್ಳುವುದಿಲ್ಲ’ ಎಂದು ಹೇಳಿಕೊಂಡಿದ್ದಾಳೆ.

ಗಾಯಕಿಯ ಮದುವೆ ದಿನ ವಿಡಿಯೊ

ಮದುವೆ ದಿನದ ಬಗ್ಗೆ ಮಾತನಾಡಿದ ಅವರು ‘ನನ್ನ ಮದುವೆಗೆ ಆಹ್ವಾನಿಸುವಂತೆ ಬದುಕಿದ್ದವರಿಗೆ, ಸತ್ತವರಿಗೆ ಎಲ್ಲರಿಗೂ ಆಹ್ವಾನ ನೀಡಲಾಗಿತ್ತು. ಈಗಾಗಲೇ ಮೃತಪಟ್ಟಿರುವ ಮರ್ಲಿನ್ ಮನ್ರೋ, ಎಲ್ವಿಸ್ ಮತ್ತು ಹೆನ್ರಿ VIII ಅವರು ನಮ್ಮ ಮದುವೆಗಾಗಿ ಪ್ರಾರ್ಥನಾ ಮಂದಿರಕ್ಕೆ ಆಗಮಿಸಿದ್ದರು. ಆಗ ನಮ್ಮ ಮದುವೆ ಎನ್ನುವುದನ್ನೂ ನೋಡದೆ ನನ್ನ ಪತಿಯಾಗಬೇಕಿದ್ದ ಎಡ್ವಾರ್ಡ್​, ಮರ್ಲಿನ್ ಮನ್ರೋರನ್ನು ನೋಡಿ ಕಮೆಂಟ್ ಮಾಡಿದ್ದ. ಅವರು ಎಷ್ಟು‘ಹಾಟ್​‘ ಎಂದು ಹೇಳಿದ್ದ. ಅಂದೇ ನನಗೆ ಮೂಡ್ ಆಫ್​ ಆಗಿತ್ತು. ಇನ್ನು ನಮ್ಮ ಹನಿಮೂನ್​ ಅಂತೂ ತುಂಬ ಕೆಟ್ಟದಾಗಿ ಇತ್ತು. ಆತ ಮರಳಿನಲ್ಲಿ ನನ್ನೊಂದಿಗೆ ಕುಸ್ತಿಯಾಡುತ್ತ, ನನ್ನನ್ನು ಎತ್ತಿ ಹಾಕುತ್ತಿದ್ದ. ಅವನ ಪ್ರಕಾರ ಆತ ತುಂಬ ರೊಮ್ಯಾಂಟಿಕ್​ ಆಗಿ ಮತ್ತು ಭಾವೋದ್ರೇಕದಿಂದ ಇದ್ದ. ಆದರೆ ನನಗೆ ಇರಿಟೇಟ್ ಆಗುತ್ತಿತ್ತು. ನಾನೊಂದು ಐಸ್​ಕ್ರೀಮ್​​ನ್ನು ಅವನೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೆ. ಆದರೆ ಅವನಾಡುತ್ತಿದ್ದ ರೀತಿಗೆ ಐಸ್​ಕ್ರೀಮ್​ ನನ್ನ ತಲೆಕೂದಲು, ಮುಖದ ಮೇಲೆಲ್ಲ ಚೆಲ್ಲಿತ್ತು. ನೋಡಿದವರಿಗೆ ನಾನೊಂದು ಕಡಲ ಪಕ್ಷಿಯೊಂದಿಗೆ ಕುಸ್ತಿಯಾಡುತ್ತಿದ್ದೆನೇನೋ ಅನ್ನಿಸುತ್ತಿತ್ತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video| ದೆವ್ವವಾಗಿ ಬಂದ ರೋಗಿಗೆ ವೈದ್ಯರ ಕೋಣೆ ತೋರಿಸಿದ ಆಸ್ಪತ್ರೆ ಸಿಬ್ಬಂದಿ; ಭಯ ಹುಟ್ಟಿಸುವ ವಿಡಿಯೊ ಇದು!

ನನ್ನ ಗಂಡ ನನ್ನನ್ನು ಪ್ರತಿದಿನ ಕಾಡುತ್ತಿದ್ದ. ಸಂಬಂಧವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಅವನಿಗೆ ಸಾಕಷ್ಟು ಸಲ ಹೇಳಿದೆ. ಆದರೆ ಕೇಳಲಿಲ್ಲ. ಇಡೀ ದಿನ ಹಿಂಬಾಲಿಸುವುದು, ಶಿಶುಗಳಂತೆ ಕಿರುಚುತ್ತ, ಅಳುತ್ತ ನನ್ನ ಹೆದರಿಸುವುದು ಮಾಡುತ್ತಿದ್ದ. ಅವನ ಈ ಕೂಗಾಟ ನನಗೆ ಸಿಕ್ಕಾಪಟೆ ಕಿರಿಕಿರಿ ಮಾಡುತ್ತಿತ್ತು. ಇದೆಲ್ಲ ಕಾರಣಗಳಿಂದಾಗಿ ಸಂಬಂಧ ಕಳೆದುಕೊಳ್ಳಲು ನಿರ್ಧರಿಸಿದೆ ಎಂದು ಗಾಯಕಿ ಹೇಳಿದ್ದಾಳೆ.

Exit mobile version