Site icon Vistara News

Viral Video | ವಿಮಾನದಲ್ಲಿ ಪ್ರಯಾಣಿಕರ ಮಧ್ಯೆ ಹೊಡೆದಾಟ, ಜಗಳ ಬಿಡಿಸಲು ಗಗನಸಖಿ ಪರದಾಟ; ಇದು ಪ್ಲೈಟ್​​ ಫೈಟ್!​

scuffle between passengers In Flight Video Viral

ಕೋಲ್ಕತ್ತ: ಬ್ಯಾಂ​ಕಾಕ್​​ನಿಂದ ಕೋಲ್ಕತ್ತಕ್ಕೆ ಸಂಚರಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ಬಡಿದಾಡಿಕೊಂಡಿದ್ದಾರೆ. ಥಾಯ್​ ಏರ್​ವೇಸ್​​ಗೆ ಸೇರಿದ ವಿಮಾನದಲ್ಲಿ ಮಾರ್ಗಮಧ್ಯೆ ನಡೆದ ಹೊಡೆದಾಟದ ವಿಡಿಯೊ ಸೋಷಿಯಲ್​ ಮಿಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಗಗನಸಖಿಯೊಬ್ಬರು ಅವರನ್ನು ಬಿಡಿಸಲು ಮಾಡಿದ ಪ್ರಯತ್ನ ವ್ಯರ್ಥವಾಗಿದ್ದನ್ನು ವಿಡಿಯೊದಲ್ಲಿ ನೋಡಬಹುದು.

ಆ ವಿಮಾನದಲ್ಲಿ ಮೊದಲು ಪ್ರಯಾಣಿಕರಿಬ್ಬರು ಜಗಳ ಶುರು ಮಾಡಿದ್ದಾರೆ. ಅಲ್ಲಿಗೆ ಬಂದ ಗಗನಸಖಿ ಅವರನ್ನು ಸಮಾಧಾನಪಡಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಮಾತಿನ ತೀವ್ರತೆ ಮಿತಿಮೀರಿತು ಬಿಟ್ಟರೆ ಅವರು ಸುಮ್ಮನಾಗಲಿಲ್ಲ. ಆಗ ಅಲ್ಲಿಗೆ ಇನ್ನೂ ಎರಡು ಮೂರು ಜನ ಪ್ರಯಾಣಿಕರು ಬಂದರು. ನಂತರ ಎಲ್ಲರೂ ಸೇರಿ, ಆ ಒಬ್ಬ ಪ್ರಯಾಣಿಕನಿಗೆ ಥಳಿಸಿದ್ದಾರೆ. ತಿರುಗಿ ಆತನೂ ಹೊಡೆದಿದ್ದಾನೆ.

ಕಳೆದವಾರ ಇಸ್ತಾಂ​ಬುಲ್​​ನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಒಬ್ಬ ಪ್ರಯಾಣಿಕ ಮತ್ತು ಗಗನಸಖಿ ನಡುವೆ ಗಲಾಟೆ ನಡೆದಿತ್ತು. ​​ಈ ಜಗಳ ನಡೆದಿದ್ದು ಊಟದ ವಿಚಾರಕ್ಕೆ ಆಗಿತ್ತು. ನಂತರ ಹೇಳಿಕೆ ಬಿಡುಗಡೆ ಮಾಡಿದ್ದ ಇಂಡಿಗೋ, ‘ನಾವು ಈ ಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತೇವೆ. ಪ್ರಯಾಣಿಕರು ಆರಾಮಾಗಿ ಪ್ರಯಾಣಿಸುವಂತೆ ನೋಡಿಕೊಳ್ಳುವುದು ನಮ್ಮ ಮೊದಲ ಆದ್ಯತೆ’ ಎಂದು ಹೇಳಿತ್ತು.

ಇದನ್ನೂ ಓದಿ: Viral Video | ತಾಯಿಯ ಕೆನ್ನೆ ಹಿಡಿದು ಕೀಟಲೆ ಮಾಡಿದ ರಾಹುಲ್‌ ಗಾಂಧಿ, ಮಗನ ಚೇಷ್ಟೆಗೆ ನಕ್ಕ ಸೋನಿಯಾ, ಕ್ಯೂಟ್ ವಿಡಿಯೊ ನೋಡಿ

Exit mobile version