Site icon Vistara News

Shocking Video: ಮಗುವನ್ನು ಎತ್ತಿಕೊಂಡು ಹೋಗಲು ಕೋತಿಯ ಶತಪ್ರಯತ್ನ; ಮುಂದೇನಾಯ್ತು?

Shocking Video

ಮಕ್ಕಳು (Kids) ಆಟವಾಡುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಯಾಕೆಂದರೆ ಅಪಾಯ (danger) ಎಲ್ಲಿಂದ, ಹೇಗೆ ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ಒಂದು ಕ್ಷಣ ಎಂತವರನ್ನೂ ಭಯ ಬೀಳಿಸದೆ (Shocking Video) ಇರಲಾರದು. ಆಟವಾಡುತ್ತಿದ್ದ ಮಗುವಿನ ಮೇಲೆ ಕೋತಿಯೊಂದು ನಿರಂತರ ದಾಳಿಗೆ ಮುಂದಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೋತಿಯೊಂದು ಇತರ ಮಕ್ಕಳೊಂದಿಗೆ ಹೊರಗೆ ಆಡುತ್ತಿರುವ ಮಗುವಿನ ಮೇಲೆ ದಾಳಿ ಮಾಡಿದೆ. ಮಗು ಮನೆಯ ಹೊರಗೆ ಮರದ ಮೆಟ್ಟಿಲುಗಳ ಮೇಲೆ ಇದ್ದಾಗ ಮಂಗ ಇದ್ದಕ್ಕಿದ್ದಂತೆ ಹಾರಿ ಬಂದು ಮಗುವನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿದೆ.

ಇತರ ಮಕ್ಕಳು ಭಯದಿಂದ ಓಡಿಹೋಗುತ್ತಾರೆ. ಕೂಡಲೇ ಮಗುವಿನ ಬೊಬ್ಬೆ ಕೇಳಿ ಓಡಿ ಬಂದ ತಾಯಿ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಆದರೂ ಮಗ ಆಕೆಯ ಕೈಯಿಂದ ಮಗುವನ್ನು ಹಿಡಿದುಕೊಂಡು ಹೋಗಲು ಪ್ರಯತ್ನಿಸುತ್ತದೆ. ಕೂಡಲೇ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಕೋತಿಯನ್ನು ಹೆದರಿಸಲು ಪ್ರಯತ್ನಿಸುತ್ತಾರೆ. ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೋತಿಯೂ ಮಗುವನ್ನು ಕೊಂಡೊಯ್ಯಲು ಬಿಡದ ಪ್ರಯತ್ನ ನಡೆಸಿದೆ.


ಮಗುವಿನ ತಾಯಿ ಮಗುವನ್ನು ಕೋತಿಯ ಹಿಡಿತದಿಂದ ಕಿತ್ತು ತನ್ನ ಮಡಿಲಲ್ಲಿ ಹಿಡಿದಿಡುತ್ತಾಳೆ. ಆದರೆ, ಪಟ್ಟುಬಿಡದ ಕೋತಿ ತನ್ನ ದಾಳಿಯನ್ನು ಮುಂದುವರೆಸಿದೆ. ತಾಯಿಯ ತೋಳುಗಳಿಂದಲೂ ಮಗುವನ್ನು ಎಳೆಯಲು ಪ್ರಯತ್ನಿಸುತ್ತಿದೆ.

ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಸುಮಾರು 7 ಮಿಲಿಯನ್ ಮಂದಿ ಇದನ್ನು ವೀಕ್ಷಿಸಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು ಎಲ್ಲರ ಅಸಹಾಯಕತೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ವಿಡಿಯೋ ಜೊತೆಗೆ ನೆಟ್ಟಿಗರೊಬ್ಬರು ಮತ್ತೊಂದು ಕೋತಿ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇತರ ಮಕ್ಕಳೊಂದಿಗೆ ಆಡುತ್ತಿದ್ದ ಪುಟ್ಟ ಮಗುವನ್ನು ಕೋತಿಯೊಂದು ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ.


ಮನೆಯ ಹೊರಗೆ ಇತರ ಮಕ್ಕಳೊಂದಿಗೆ ಪುಟ್ಟ ಮಗು ಆಟವಾಡುತ್ತಿತ್ತು. ಅಲ್ಲಿಗೆ ಬಂದ ಕೋತಿಯೊಂದು ಮಗುವನ್ನು ಅಂಗಳದಲ್ಲಿ ಸಾಕಷ್ಟು ದೂರದವರೆಗೆ ಎಳೆದುಕೊಂಡು ಹೋಗಿದೆ. ಆದರೆ ಮಗುವನ್ನು ಎತ್ತಿಕೊಂಡು ಹೋಗಲು ಆಗಲಿಲ್ಲ. ಅಲ್ಲಿಯೇ ಇದ್ದ ಜನರನ್ನು ಕಂಡು ಹೆದರಿ ಅದು ಮಗುವನ್ನು ಬಿಟ್ಟು ಹೋಯಿತು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದ್ದು, ಸುಮಾರು 52 ಸಾವಿರ ಮಂದಿ ಇದನ್ನು ವೀಕ್ಷಿಸಿದ್ದಾರೆ.

Exit mobile version