Site icon Vistara News

Viral Video | ಸರಸರ ಬಂದು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಪೊದೆಯೊಳಗೆ ಸರಿದು ಹೋದ ಹಾವು!

snake crawling With chappal video viral

ಕೆಲವು ನಾಯಿಗಳಿಗೆ ಮನೆ ಹೊರಗೆ ಇಟ್ಟ ಚಪ್ಪಲಿಗಳನ್ನು ಎತ್ತಿಕೊಂಡು ಹೋಗುವ ಚಾಳಿ ಇರುತ್ತದೆ. ಅವು ಆ ಚಪ್ಪಲಿಗಳನ್ನು ಬಾಯಲ್ಲಿ ಕಚ್ಚಿ ಹರಿದು, ಬಳಿಕ ಎಲ್ಲೆಲ್ಲೋ ಬಿಸಾಕಿ ಹೋಗುತ್ತವೆ. ಆದರೆ ಹಾವುಗಳು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುವುದನ್ನು ಎಂದಾದರೂ ನೋಡಿದ್ದೀರಾ? ಅಷ್ಟಕ್ಕೂ ಹಾವುಗಳಿಗೆ ಯಾಕಾದರೂ ಬೇಕು ಈ ಚಪ್ಪಲಿ?

ಭಾರತೀಯ ಅರಣ್ಯ ಸೇವಾಧಿಕಾರಿ (IFS) ಪ್ರವೀಣ್​ ಕಾಸ್ವಾನ್​ ಅವರೊಂದು ವಿಡಿಯೊ ಶೇರ್​ ಮಾಡಿದ್ದಾರೆ. ಆ ವಿಡಿಯೊದಲ್ಲಿ ಮಾರುದ್ದ ಹಾವೊಂದು ಮನೆಯೊಂದರ ಬಳಿ ಬಂದು, ಅಲ್ಲಿಯೇ ಇದ್ದ ಒಂದು ಜೊತೆ ಚಪ್ಪಲಿಗಳಲ್ಲಿ ಒಂದು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಸರಸರನೇ ಪೊದೆಯೊಳಗೆ ಹರಿದು ಹೋಗುವ ದೃಶ್ಯವನ್ನು ನೋಡಬಹುದು. ಹಾವನ್ನು ನೋಡಿ ಒಂದಷ್ಟು ಜನ ಕೂಗುವುದು ವಿಡಿಯೊದಲ್ಲಿ ಕೇಳಿಸುತ್ತದೆ. ಅದ್ಯಾಕೆ ಆ ಗುಲಾಬಿ ಬಣ್ಣದ ಚಪ್ಪಲಿ ಎತ್ತಿಕೊಂಡಿತು ಹೋಯಿತೋ ಗೊತ್ತಿಲ್ಲ. ಆದರೆ ಹಾವು ಚಪ್ಪಲಿ ತೆಗೆದುಕೊಂಡು ಹೋಗುವುದನ್ನು ನೋಡಿದರೆ ನಗು ಬಾರದೆ ಇರದು. ಈ ವಿಡಿಯೊ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಇದು ಬಿಹಾರದ ಆರಾರ್​ ಎಂಬಲ್ಲಿ ನಡೆದ ಘಟನೆ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಅದರಾಚೆ ನೆಟ್ಟಿಗರಂತೂ ಫನ್ನಿಯಾದ ಕಮೆಂಟ್​​ಗಳನ್ನು ಬರೆದಿದ್ದಾರೆ. ‘ಚಪ್ಪಲಿ ಕಳ್ಳ’ ‘ಕಾಲಿಲ್ಲದ ಹಾವಿಗೇಕೆ ಚಪ್ಪಲಿ’ ಎಂದು ಒಂದಷ್ಟು ಜನ ಹೇಳಿದ್ದರೆ, ‘ಬಹುಶಃ ತನ್ನ ಮರಿಗಾಗಿ ತೆಗೆದುಕೊಂಡು ಹೋಗುತ್ತಿರಬೇಕು, ಈ ಹಾವು ಅಮ್ಮನಾಗಿರಬೇಕು’ ಎಂದೆಲ್ಲ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Matrimonial Ad | ವರ ಬೇಕಾಗಿದ್ದಾನೆ, ಆದರೆ ಎಂಜಿನಿಯರ್‌ ಬೇಡ, ಸಾಫ್ಟ್‌ವೇರ್‌ಗಳಿಗೆ ಇದು ಹಾರ್ಡ್‌ ನ್ಯೂಸ್‌!

Exit mobile version