ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಬಾರ್ಬಿಯದ್ದೇ ಹವಾ. ಹೆಣ್ಣು ಮಕ್ಕಳೆಲ್ಲರೂ ಗುಲಾಬಿ ಬಣ್ಣದ ಬಟ್ಟೆ ತೊಟ್ಟುಕೊಂಡು ಬಾರ್ಬಿ ಗರ್ಲ್ ಹಾಡಿಗೆ ರೀಲ್ಸ್ ಮಾಡಲಾರಂಭಿಸಿದ್ದಾರೆ. ಹಾಗೆಯೇ ನಮ್ಮ ಸಿನಿಮಾ ತಾರೆಗಳೂ ಬಾರ್ಬಿಗಳಾಗಿ ಕಾಣಿಸಿಕೊಂಡರೆ ಹೇಗೆ ಕಾಣುತ್ತಾರೆ ಎನ್ನುವ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಅದಕ್ಕೆ ಉತ್ತರವೆನ್ನುವಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಮಿಳಿನ ನಟಿಯರನ್ನು ಬಾರ್ಬಿಗಳಾಗಿ ಬದಲಾಯಿಸಿ ತೋರಿಸಿದೆ. ಆ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಜತುರ್ಸನ್ ಪಿರಬಾಕರನ್ ಎಂಬುವರು ಈ ರೀತಿ ನಟಿಯರನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಬಾರ್ಬಿಗಳಾಗಿ ಬದಲಾಯಿಸಿದ್ದಾರೆ. ನಟಿ ತಮನ್ನಾ ಭಾಟಿಯಾ, ಶ್ರುತಿ ಹಾಸನ್, ತೃಷಾ ಕೃಷ್ಣನ್, ಸಮಂತಾ ರುಥ್ ಪ್ರಭು, ಕಾಜಲ್ ಅಗರ್‌ವಾಲ್ ಮತ್ತು ನಯನತಾರಾರನ್ನು ಬಾರ್ಬಿಯನ್ನಾಗಿ ಬದಲಾಯಿಸಲಾಗಿದೆ. ಎಲ್ಲರಿಗೂ ಗುಲಾಬಿ ಬಣ್ಣದ ಬಟ್ಟೆ ತೊಡಿಸಿ, ಕೂದಲ ಬಣ್ಣವನ್ನೂ ಬದಲಾಯಿಸಿ, ಬಾರ್ಬಿ ವರ್ಲ್ಡ್‌ನಲ್ಲೇ ಅವರಿರುವಂತೆ ತೋರಿಸಲಾಗಿದೆ.
ಇದನ್ನೂ ಓದಿ: Viral Video: ಕಣ್ಣೀರು ಸುರಿಸಿದ ಅಲ್ಕರಾಜ್, ಜೆರ್ಸಿ ಹರಿದು ಸಂಭ್ರಮಿಸಿದ ಜೊಕೋವಿಕ್
ನಟಿಯರ ಬಾರ್ಬಿ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಜತುರ್ಸನ್ ಪಿರಬಾಕರನ್ ಅವರು “ಕಾಲಿವುಡ್ ಬಾರ್ಬು ಡ್ರೀಮ್‌ಹೌಸ್ ಅನ್ನು ಸೇರಿಕೊಳ್ಳುವುದನ್ನು ಊಹಿಸಿಕೊಳ್ಳಿ. ಕಾಲಿವುಡ್‌ನ ಬಾರ್ಬಿಗಳನ್ನು ಪರಿಚಯಿಸುತ್ತಿದ್ದೇನೆ. ನಿಮಗೆ ಯಾರು ಜಾಸ್ತಿ ಇಷ್ಟವಾದರು ಎನ್ನುವುದನ್ನು ಕಮೆಂಟ್ ಮಾಡಿ” ಎಂದು ಪೋಸ್ಟ್‌ಗೆ ಕ್ಯಾಪ್ಶನ್ ಮಾಡಿದ್ದಾರೆ.
ಈ ಪೋಸ್ಟ್ ಅನ್ನು ಆಗಸ್ಟ್ 12ರಂದು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ಈ ಪೋಸ್ಟ್ ಅನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. 45 ಸಾವಿರಕ್ಕೂ ಅಧಿಕ ಮಂದಿ ಪೋಸ್ಟ್‌ಗೆ ಲೈಕ್ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ಪೋಸ್ಟ್ ಅನ್ನು ತಮ್ಮ ಸ್ನೇಹಿತರೊಂದಿಗೆ, ಕುಟುಂಬಸ್ಥರೊಂದಿಗೆ ಹಂಚಿಕೊಂಡಿದ್ದಾರೆ. ನೂರಾರು ಮಂದಿ ಪೋಸ್ಟ್‌ಗೆ ತರೇವಾರು ಕಮೆಂಟ್‌ಗಳನ್ನು ಮಾಡಿದ್ದು, ಈ ಕಾಲಿವುಡ್ ಬಾರ್ಬಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಅನೇಕರು ಈ ಕಾಲಿವುಡ್ ಬಾರ್ಬಿಗಳಲ್ಲಿ ತಮಗೆ ಯಾವ ಬಾರ್ಬಿ ಇಷ್ಟವಾದರು ಎನ್ನುವುದನ್ನು ಕಾಮೆಂಟ್‌ಗಳಲ್ಲಿ ತಿಳಿಸಿದ್ದಾರೆ. ಹಾಗೆಯೇ ಈ ರೀತಿ ವಿಶೇಷ ಪ್ರಯತ್ನವನ್ನು ಮಾಡಿರುವ ಜತುರ್ಸನ್ ಪಿರಬಾಕರನ್ ಅವರ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅನೇಕರು ಬಿಟ್ಟು ಹೋದ ಇನ್ನೂ ಅನೇಕ ನಾಯಕ ನಟಿಯರ ಫೋಟೋಗಳನ್ನೂ ಈ ರೀತಿ ಬಾಬಿ ವರ್ಲ್ಡ್‌ಗೆ ಪರಿಚಯಿಸಿ ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral Video : ಕಾವಾಲಯ್ಯ ಹಾಡಿಗೆ ಮುಂಬೈ ಪೊಲೀಸ್ ಅಧಿಕಾರಿಯ ಸಖತ್ ಸ್ಟೆಪ್ಸ್!
ಇತ್ತೀಚೆಗೆ ಈ ರೀತಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್ ಆಗುತ್ತಿವೆ. ರಾಜಕಾರಣಿಗಳಿಂದ ಹಿಡಿದು ಪ್ರಸಿದ್ಧ ಕಂಪನಿಗಳ ಸಿಇಒಗಳವರೆಗೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಎಐ ತಂತ್ರಜ್ಞಾನದಲ್ಲಿ ಬದಲಾವಣೆ ಮಾಡಿ ತೋರಿಸಲಾಗುತ್ತಿದೆ.