Site icon Vistara News

Viral News: ರಸ್ತೆ ಬದಿ ಕವರ್‌ನಲ್ಲಿದ್ದ ಶಿಶುವನ್ನು ಕಾಪಾಡಿದ ಬೀದಿ ನಾಯಿ!

stray dog saves newborn baby

ಲೆಬನಾನ್‌: ಎಷ್ಟೋ ಜನರು ನವಜಾತ ಶಿಶುಗಳನ್ನು ಬೇಡವೆಂದು ಆಸ್ಪತ್ರೆಯಲ್ಲೇ ಬಿಟ್ಟು ಹೋಗುವುದು ಅಥವಾ ರಸ್ತೆ ಬದಿಯಲ್ಲಿ ಎಸೆದು ಹೋಗುವುದನ್ನು ನಾವು ನೋಡಿದ್ದೇವೆ ಅಥವಾ ಅಂತಹ ಘಟನೆ ಬಗ್ಗೆ ಕೇಳಿದ್ದೇವೆ. ಇದೇ ರೀತಿಯ ಘಟನೆ ಇತ್ತೀಚೆಗೆ ಲೆಬನಾನ್‌ ದೇಶದಲ್ಲಿಯೂ ನಡೆದಿದೆ. ಆದರೆ ಬೀದಿ ನಾಯಿಯೊಂದರಿಂದಾಗಿ ಆ ಶಿಶು ಪ್ರಾಣ (Viral News) ರಕ್ಷಣೆಯಾಗಿದೆ.

ಲೆಬನಾನ್‌ನ ಸರ್ಕಾರಿ ಆಸ್ಪತ್ರೆಯೊಂದರ ಹೊರ ಭಾಗದಲ್ಲಿ ಯಾರೋ ಪೋಷಕರು ನವಜಾತ ಶಿಶುವನ್ನು ಪ್ಲಾಸ್ಟಿಕ್‌ ಕವರ್‌ ಒಂದರಲ್ಲಿ ಹಾಕಿ ಅದನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಅಲ್ಲೇ ಇದ್ದ ಬೀದಿ ನಾಯಿಯೊಂದು ಆ ಕವರ್‌ ಅನ್ನು ಬಾಯಿಯಲ್ಲಿ ಕಚ್ಚಿಕೊಂಡು ನಡೆದುಕೊಂಡು ಹೋಗಿದೆ. ಕವರ್‌ನಲ್ಲಿದ್ದ ಶಿಶು ಅಳುತ್ತಿದ್ದರಿಂದ ದಾರಿಹೋಕರು ನಾಯಿಯನ್ನು ಗಮನಿಸಿದ್ದಾರೆ. ನಾಯಿಯ ಬಾಯಿಯಿಂದ ಕವರ್‌ನ್ನು ತೆಗೆದುಕೊಂಡು ಅದರೊಳಗಿದ್ದ ಶಿಶುವನ್ನು ನೋಡಿದ್ದಾರೆ.

ಇದನ್ನೂ ಓದಿ: Viral Video: ಬಿಜೆಪಿ ‘ಭ್ರಷ್ಟಾಚಾರ’ ಪಟ್ಟಿ ಓದಲು ತಡಕಾಡಿದ ಪ್ರಿಯಾಂಕಾ ವಾದ್ರಾ; ಅಂಕಿ-ಅಂಶ ಹೇಳುವಾಗಲೂ ಎಡವಟ್ಟು

ತಕ್ಷಣವೇ ಆ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಆಗಿದ್ದ ಸಣ್ಣ ಪುಟ್ಟ ಗಾಯಗಳಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರವನ್ನು ಫರೀದ್‌ ಹೆಸರಿನವರು ಅರೇಬಿಕ್‌ ಭಾಷೆಯಲ್ಲಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ಆ ಮಗುವಿನ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ. “ಆದಷ್ಟು ಬೇಗ ಈ ಮಗುವನ್ನು ದತ್ತು ತೆಗೆದುಕೊಳ್ಳುವ ಕುಟುಂಬ ಸಿಗಲಿ” ಎಂದು ಅವರು ಟ್ವೀಟ್‌ನಲ್ಲಿ ಪ್ರಾರ್ಥಿಸಿದ್ದಾರೆ.

ಫರೀದ್‌ ಅವರ ಈ ಪೋಸ್ಟ್‌ ಎಲ್ಲೆಡೆ ಹರಿದಾಡಿದ್ದು, ಭಾರೀ ವೈರಲ್‌ ಆಗಿದೆ. ಫರೀದ್‌ ಅವರು ಜುಲೈ 19ರಂದು ಈ ಪೋಸ್ಟ್‌ ಮಾಡಿದ್ದು, ಪೋಸ್ಟ್‌ ಈಗಾಗಲೇ ಸಾವಿರಾರು ಜನರಿಂದ ವೀಕ್ಷಣೆಗೊಂಡಿದೆ. ನೂರಾರು ಮಂದಿ ಪೋಸ್ಟ್‌ಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಎಷ್ಟು ಕ್ರೂರ ತಂದೆ ತಾಯಿಯಾಗಿರಬೇಕು. ಆದಷ್ಟು ಬೇಗ ಈ ಮಗುವಿಗೆ ಒಳ್ಳೆಯ ಕುಟುಂಬ ಸಿಗಲಿ”, “ನಾನಾದರೂ ಈ ಮಗುವನ್ನು ದತ್ತು ಪಡೆದುಕೊಳ್ಳುತ್ತಿದ್ದೆ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ಮಗುವಿನ ಬಗ್ಗೆ ಬಂದಿವೆ. ಹಾಗೆಯೇ ಮಗುವನ್ನು ಕಾಪಾಡಿದ ಬೀದಿ ನಾಯಿಯ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Exit mobile version