ಇಟಲಿ: ನೀವು ಕೆಲಸ ಮಾಡುವ ಕಚೇರಿಯಿಂದ ಹೆಚ್ಚೆಂದರೆ ಎಷ್ಟು ದಿನಗಳ ರಜೆ ಪಡೆದುಕೊಳ್ಳಬಹುದು. ಒಂದು ವಾರ, ಎರಡು ವಾರ ಅಥವಾ ಹೆಚ್ಚೆಂದರೆ ಒಂದು ತಿಂಗಳು. ಆದರೆ ಇಟಲಿಯಲ್ಲಿ ಶಿಕ್ಷಕಿಯೊಬ್ಬಳು ತಾನು ಕೆಲಸ ಮಾಡುವ ಶಾಲೆಯಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ರಜೆ ತೆಗೆದುಕೊಂಡಿದ್ದಾಳೆ. ಮನೆಯಲ್ಲಿದ್ದುಕೊಂಡೇ ಸಂಬಳ(Viral News) ಪಡೆದುಕೊಂಡಿದ್ದಾಳೆ!
ಹೌದು. ಇಂತದ್ದೊಂದು ವಿಚಾರ ಇಟಲಿಯ ಶಾಲೆಯೊಂದರಲ್ಲಿ ಕೆಲಸ ಮಾಡುವ ಸಿಂಜಿಯೊ ಪಾವೊಲಿನಾ ಡಿ ಲಿಯೊ(56) ಹೆಸರಿನ ಶಿಕ್ಷಕಿ ಕಳೆದ 24 ವರ್ಷಗಳಿಂದ ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆದರೆ ಈ 24ವರ್ಷಗಳಲ್ಲಿ ಆಕೆ ಶಾಲೆಗೆ ಹೋಗಿರುವುದು ಕೇವಲ ನಾಲ್ಕು ವರ್ಷ ಮಾತ್ರ. ಉಳಿದ ಇಪ್ಪತ್ತು ವರ್ಷಗಳ ಕಾಲ ಆಕೆ ಬೇರೆ ಬೇರೆ ಕಾರಣಗಳನ್ನು ಕೊಟ್ಟು ಶಾಲೆಗೆ ರಜೆ ಹಾಕಿದ್ದಾಳೆ. ಆದರೆ ತಿಂಗಳಿಗೆ ಸರಿಯೆನ್ನುವಂತೆ ಸಂಬಳ ಪಡೆದುಕೊಂಡಿದ್ದಾಳೆ.
ಇದನ್ನೂ ಓದಿ: Viral Video: ಮೈದಾನಕ್ಕೆ ನುಗ್ಗಿದ ಪ್ರೇಕ್ಷಕರನ್ನು ಹೊತ್ತೊಯ್ದ ಇಂಗ್ಲೆಂಡ್ ಆಟಗಾರರು; ವಿಡಿಯೊ ವೈರಲ್
ಶಿಕ್ಷಕಿಯು ಮಾಧ್ಯಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಬೋಧಿಸುತ್ತಿದ್ದಳು. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಆಕೆಗೆ ಸಂದೇಶ ಕಳಿಸಿ, ಪಾಠ ಮಾಡಿ ಎಂದು ಕೇಳಿಕೊಂಡರೂ ಆಕೆ ಶಾಲೆಗೆ ಬಂದಿಲ್ಲ. ವಿದ್ಯಾರ್ಥಿಗಳಿಗೆ ತನಗಿಷ್ಟ ಬಂದಂತೆ ಗ್ರೇಡ್‌ಗಳನ್ನು ಕೊಟ್ಟಿದ್ದಾಳೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಆ ಶಿಕ್ಷಕಿ ಶಾಲೆಗೆ 67 ಅನಾರೋಗ್ಯ ರಜೆ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದಾಳೆ. ಕೆಲಸದ ವೇಳೆ ಅಪಘಾತವಾಗಿದೆ ಎಂದು ಹೇಳಿ ಎರಡು ಗೈರು ಹಾಜರಿ ನಮೂದಿಸಿದ್ದಾಳೆ. ಅನಾರೋಗ್ಯ, ಮಗುವನ್ನು ನೋಡಿಕೊಳ್ಳುವ ಕಾರಣಗಳನ್ನೂ ಕೊಟ್ಟಿದ್ದಾಳೆ. ಹಾಗೆಯೇ ಅಂಗವೈಕಲ್ಯವಿರುವ ಸಂಬಂಧಿಕರಿಗೆ ಸಹಾಯ ಮಾಡುವುದಕ್ಕೆ, ವಿವಿಧ ತರಬೇತಿ ಕೋರ್ಸ್‌ಗಳಿಗಾಗಿ ಎಂದು ಸಾಲು ಸಾಲು ರಜೆಗಳನ್ನು ಹಾಕಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Viral Video : ಹಳೆಯ ಹಾಡಿಗೆ ಹುಡುಗಿಯರ ಡ್ಯಾನ್ಸ್; 5 ಕೋಟಿಗೂ ಅಧಿಕ ಜನರಿಂದ ವೀಕ್ಷಣೆ!
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಜೂನ್ 22ರಂದು ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಈ ವಿಚಾರವನ್ನು ಪ್ರಶ್ನಿಸಿ ಶಿಕ್ಷಕಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಆಕೆಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ತೀರಪು ಬದಲಿಸಿರುವ ಸರ್ವೋಚ್ಛ ನ್ಯಾಯಾಲಯ ಶಿಕ್ಷಕಿಯನ್ನು ಶಿಕ್ಷಣ ಹೇಳಿಕೊಡುವುದಕ್ಕೆ ಸಮರ್ಥರಲ್ಲ ಎಂದು ಘೋಷಿಸಿದೆ.