Site icon Vistara News

Viral News : ನೀರಿನಲ್ಲಿ ಮುಳುಗಿದ ಸಚಿವ! ಎರಡನೇ ಬಾರಿಗೆ ಎದುರಾಯ್ತು ನೀರಿನ ಗಂಡಾಂತರ

Telangana minister Gangula Kamalakar rescued

#image_title

ಹೈದರಾಬಾದ್‌: ನೀರಿನ ಗಂಡಾಂತರ ಎನ್ನುವ ವಿಚಾರವನ್ನು ನೀವು ಕೇಳಿರುತ್ತೀರಿ. ಅದೆಲ್ಲ ಸುಳ್ಳೆಂದುಕೊಂಡು ಸುಮ್ಮನಾಗಿರುತ್ತೀರಿ. ಆದರೆ ತೆಲಂಗಾಣದ ಈ ಸಚಿವರ ಕಥೆ ಕೇಳಿದರೆ ನಿಜಕ್ಕೂ ನೀರಿನ ಗಂಡಾಂತರವೆನ್ನುವುದು ಇದೆಯೇ ಎನ್ನುವ ಯೋಚನೆ ಬಂದುಬಿಡುತ್ತದೆ. ಅವರು ಎರಡನೇ ಬಾರಿಗೆ ನೀರಿನಿಂದ ಬಚಾವಾಗಿದ್ದು, ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗುತ್ತಿದೆ.

ತೆಲಂಗಾಣದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಗಂಗುಲಾ ಕಮಲಾಕರ್ ಗುರುವಾರ ಕೊತ್ತಪಲ್ಲಿ ಮಂಡಲದ ಆಸಿಫ್‌ನಗರದಲ್ಲಿ ತೆಲಂಗಾಣ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚೆರುವುಲ ಪಾಂಡುಗದಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರು ಅಲ್ಲಿನ ಕೆರೆಯಲ್ಲಿ ದೋಣಿಯಲ್ಲಿ ಸಂಚಾರ ಮಾಡಲು ಮುಂದಾಗಿದ್ದಾರೆ. ಅವರು ದೋಣಿ ಹತ್ತಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ದೋಣಿ ಮುಳುಗಿದ್ದು, ಸಚಿವರು ನೀರಿನೊಳಗೆ ಬಿದ್ದಿದ್ದಾರೆ.

ತಕ್ಷಣ ಅಲ್ಲಿದ್ದ ಪೊಲೀಸ್‌ ಅಧಿಕಾರಿಗಳು ಸಚಿವರ ಸಹಾಯಕ್ಕೆ ಬಂದಿದ್ದು, ಸಚಿವರನ್ನು ನೀರಿನಿಂದ ಮೇಲಕ್ಕೆ ಎತ್ತಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ಅವರನ್ನು ನೀರಿನಿಂದ ಮೇಲಕ್ಕೆ ಕರೆದುಕೊಂಡು ಬರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ಸದ್ದು ಮಾಡುತ್ತಿದೆ. ಜನರು ಸಚಿವರ ಬಗ್ಗೆ ಹಲವಾರು ರೀತಿಯ ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.


ಅಂದ ಹಾಗೆ ಗಂಗುಲಾ ಕಮಲಾಕರ್ ಅವರು ಈ ರೀತಿ ನೀರಿನೊಳಗೆ ಮುಳುಗಿದ್ದು ಇದೇ ಮೊದಲೇನಲ್ಲ. ಕೆಲವು ವರ್ಷಗಳ ಹಿಂದೆ ಕಮಲಾಕರ್ ಅವರು ಕರೀಂನಗರ ಪಟ್ಟಣದ ಹೊರವಲಯದಲ್ಲಿರುವ ಲೋವರ್ ಮನೇರ್ ಅಣೆಕಟ್ಟಿನಲ್ಲಿ ಸ್ಪೀಡ್ ಬೋಟ್ ಸೇವೆಯನ್ನು ಉದ್ಘಾಟಿಸಿ, ಅದರ ಮೇಲೆ ಸವಾರಿ ಮಾಡಲು ಹೊರಟಾಗ ಇದೇ ರೀತಿಯಲ್ಲಿ ನೀರಿಗೆ ಬಿದ್ದಿದ್ದರು.

Exit mobile version