Site icon Vistara News

Marriage with toy | ಸೆಲ್ಫ್‌ ಮ್ಯಾರೇಜ್‌ ಆಯ್ತು, ಈಗ ಗೊಂಬೆ ಜೊತೆ ಮದುವೆ!

toy marriage

ಸಧ್ಯ ಎಲ್ಲೆಡೆ ಸೆಲ್ಫ್‌ ಲವ್‌ ಟ್ರೆಂಡ್‌ ಹೆಚ್ಚಾಗುತ್ತಿದ್ದು, ತಮ್ಮನ್ನು ತಾವೇ ಮದುವೆಯಾಗುವ ಹೊಸ ಸಂಸ್ಕೃತಿ ಹೆಚ್ಚಾಗುತ್ತಿದೆ. ನನಗೆ ನಾನೇ ಇಷ್ಟವಪ್ಪಾ ಎಂದುಕೊಂಡು ತನ್ನನ್ನೇ ತಾನು ಮದುವೆಯಾಗಿಬಿಟ್ರೆ ಜೀವನದಲ್ಲಿ ಬೇರೆ ಚಿಂತೆ ಇಲ್ಲ ಎಂಬುದೂ ಇದಕ್ಕೆ ಕಾರಣ ಇರಬಹುದು. ಆದರೆ ಇಲ್ಲೊಬ್ಬ ಒಂಟಿ ಒಂಟಿಯಾಗಿರುವುದು ಬೋರೋ ಬೋರು ಎಂದು ಹಾಡುತ್ತಾ, ತನಗೆ ಸದ್ಯಕ್ಕೆ ಲವ್ವಾಗಿರುವುದು ಈ ಗೊಂಬೆಯ ಮೇಲೆ ಎಂದು ಗೊಂಬೆ ನಟಾಲಿಯಾಳನ್ನೇ ಮದುವೆಯಾಗಲು ಪ್ಲಾನ್‌ ಮಾಡಿಕೊಳ್ಳುತ್ತಿದ್ದಾನೆ!

ತಮಾಷೆಯಲ್ಲ. ಇದು ಸತ್ಯ. ಇಲ್ಲೊಬ್ಬ ಟಿಕ್‌ಟಾಕರ್‌ ಒಬ್ಬನೇ ಇದ್ದು ಬೋರಾಗಿದೆ, ತನ್ನ ಜೊತೆಗಿರುವ ಗೊಂಬೆಯ ಜೊತೆಗೆ ಈಗಾಗಲೇ ಒಂದು ವರ್ಷ ಪೂರೈಸಿಕೊಂಡು ವಾರ್ಷಿಕೋತ್ಸವ ಆಚರಿಸುತ್ತಿದ್ದೇನೆ. ಹಾಗಾಗಿ, ನಮ್ಮಿಬ್ಬರ ಈ ಸಂಬಂಧವನ್ನು ಇನ್ನೂ ಮುಂದುವರಿಸುವ ಯೋಚನೆಯಿದೆ, ಯಾಕೆ ಅವಳನ್ನೇ ಮದುವೆಯಾಗಬಾರದು ಎಂದು ಯೋಚಿಸುತ್ತಿದ್ದೇನೆ. ನನ್ನ ಭವಿಷ್ಯವೇನಿದ್ದರೂ ಅವಳ ಜೊತೆಗೇ ಎಂದು ಟಿಕ್‌ಟಾಕ್‌ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ!

ಇದೇನೂ ತಮಾಷೆಯಾಗಿ ಮಾಡಿದ ವಿಡಿಯೋವಲ್ಲ. ಈತ ತನ್ನ ಪ್ರೊಫೈಲು ತುಂಬಾ ಯಾವ ಜೋಡಿಗೂ ಕಡಿಮೆ ಇಲ್ಲದಂತೆ ಸಾಕಷ್ಟು ಈ ಗೊಂಬೆಯ ಜೊತೆಗಿನ ಫೋಟೋಗಳನ್ನೂ, ವಿಡಿಯೋಗಳನ್ನೂ ಹಂಚಿಕೊಂಡಿದ್ದಾನೆ! ಈತ ಎಲ್ಲ ಜೋಡಿಗಳಂತೆ ಈ ಗೊಂಬೆಯ ಜೊತೆಗೆ ಶಾಪಿಂಗ್‌ ಹೋಗಿದ್ದಾನೆ. ಹೋದಲ್ಲೆಲ್ಲ ಮರೆಯದೆ ಸೆಲ್ಫೀ ತೆಗೆದುಕೊಳ್ಳುತ್ತಾನೆ. ತನ್ನ ಕುಟುಂಬದ ಮಂದಿಯನ್ನೂ ಭೇಟಿ ಮಾಡಿಸಿದ್ದಾನೆ. ಅಷ್ಟೇ ಅಲ್ಲ, ಇವರಿಬ್ಬರಿಗೆ ಹಲವು ಮಕ್ಕಳೂ ಇವೆ. ಎಲ್ಲವೂ ಗೊಂಬೆ ಮಕ್ಕಳು. ಈ ಮಕ್ಕಳೆಲ್ಲ ಮನೆಯಲ್ಲಿ ಕೂತು ಹೋಂವರ್ಕ್‌ ಮಾಡ್ತವೆ, ಟಿವಿ ನೋಡ್ತವೆ!

ಇದನ್ನೂ ಓದಿ | Viral Video | ಕುತ್ತಿಗೆವರೆಗೆ ನೀರು ಬಂದರೂ ಪ್ರವಾಹದ ವರದಿ ಮಾಡಿದ ಪತ್ರಕರ್ತ, ಇಲ್ಲಿದೆ ವಿಡಿಯೊ

ಗೊಂಬೆ ಜೊತೆಗೆ ಈತ ಹೇಳಿಕೊಂಡಿರುವ ವಿಚಾರಗಳು, ಈತನ ವಿಡಿಯೋಗಳಿಂದ ಈತನ ಫಾಲೋವರ್‌ಗಳಿಗೆ ತಲೆಬಿಸಿಯಾಗಿದೆ. ತನ್ನ ಫಾಲೋವರ್‌ಗಳಿಂದ ಬಂದ ಯದ್ವಾತದ್ವಾ ಕಾಳಜಿ ವ್ಯಕ್ತಪಡಿಸುವ ಕಾಮೆಂಟುಗಳನ್ನು ಓದಿ ತನಗೆ ಯಾರ ಸಲಹೆ ಸೂಚನೆಯೂ ಬೇಡ ಆರಾಮವಾಗಿರಲು ಬಿಡಿ ಎಂಬಂತೆ, ಕಾಮೆಂಟುಗಳನ್ನು ಮಾಡದಿರುವಂತೆ ಡಿಸೇಬಲ್‌ ಮಾಡಿದ್ದಾನೆ.

ಆದರೆ, ತನ್ನ ಹಾಗೂ ನಟಾಲಿಯಾ ಗೊಂಬೆಯ ಪ್ರೇಮ ಎಂಥದ್ದು ಎಂಬುದು ನನಗಷ್ಟೇ ಗೊತ್ತು. ಯಾರೂ ಇಲ್ಲದೆ ಒಂಟಿಯಾಗಿ ಜೀವಿಸುವುದಕ್ಕಿಂತ ನನಗೊಬ್ಬ ಜೊತೆಯಿದ್ದಾಳೆ ಎಂದು ಆಕೆಯ ಜೊತೆ ಜೀವಿಸುವುದು ಎಷ್ಟು ಖುಷಿಯೆನಿಸುತ್ತದೆ ಗೊತ್ತಾ ಎಂದು ಆತ ಬರೆದುಕೊಂಡಿದ್ದಾನೆ.

ಈ ಸಂಬಂಧದ ಬಗ್ಗೆ ಓದುವಾಗಲೇ ವಿಚಿತ್ರವೆನಿಸುತ್ತದೆ, ಜೊತೆಗೆ ಭಾವನೆಗಳನ್ನು ವ್ಯಕ್ತಪಡಿಸಲಾಗದ ನಿರ್ಜೀವ ವಸ್ತುವಿನ ಜೊತೆ ಹೀಗೆಲ್ಲ ಸಂಬಂಧ ಸಾಧ್ಯವೇ? ಇದೆಂಥ ಹುಚ್ಚಾಟ ಎಂದುಕೊಂಡರೆ, ಈತನೊಬ್ಬನೇ ಹೀಗೆ ಗೊಂಬೆಯ ಜೊತೆ ಮದುವೆ ಮಾಡಿಕೊಳ್ಳುತ್ತಿರುವ ವ್ಯಕ್ತಿಯಲ್ಲ. ಜಗತ್ತಿನಲ್ಲಿ ಹಲವರು ಒಂಟಿ ಜೀವನದಿಂದ ಬೇಸತ್ತು ಹೀಗೆ ಗೊಂಬೆಯನ್ನು ಅತಿಯಾಗಿ ಪ್ರೀತಿಸಿ ಮದುವೆ ಮಾಡಿಕೊಂಡಿರುವವರಿದ್ದಾರೆ. ತನ್ನ ತಾಯಿ ಮಾಡಿಕೊಟ್ಟ ಬೊಂಬೆಯೊಂದನ್ನು ರೋಚಾ ಮೋರೇಸ್‌ ಎಂಬಾಕೆ ಮದುವೆ ಮಾಡಿಕೊಂಡಿದ್ದಳು. ಜೊತೆಗೆ ತನ್ನ ಗಂಡ ಗೊಂಬೆ ಅದ್ಭುತ ವ್ಯಕ್ತಿ, ಆತ ನನ್ನ ಜೊತೆ ಜಗಳ ಮಾಡುವುದಿಲ್ಲ, ನನ್ನನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾನೆ. ಈತನೆಷ್ಟು ನಂಬಿಕಸ್ಥ, ವಿಧೇಯ ಗಂಡ ಎಂದರೆ, ಎಲ್ಲ ಮಹಿಳೆಯರಿಗೂ ಹೊಟ್ಟೆಕಿಚ್ಚಾಗಬೇಕು ಎಂದಿದ್ದಾಳೆ!

ನನ್ನ ತಾಯಿ ಬಟ್ಟೆಯಿಂದ ಈ ಗೊಂಬೆಯನ್ನು ಹೊಲಿದು ನನಗೆ ಕೊಟ್ಟಾಗಲೇ ನನಗೆ ಆತನ ಮೇಲೆ ಲವ್ವಾಗಿಬಿಟ್ಟಿತು. ಅದು ಲವ್‌ ಅಟ್‌ ಫಸ್ಟ್‌ ಸೈಟ್‌. ಆಗಲೇ ನಾನು ಮದುವೆಯಾದರೆ ಇವನ ಜೊತೆಗೇ ಎಂದು ನಿರ್ಧರಿಸಿಬಿಟ್ಟೆ. ಹಾಗೆ ಅವನನ್ನೇ ಮದುವೆಯಾದೆ ಕೂಡಾ. ನನ್ನ ಮದುವೆ ಒಂದು ಅದ್ಭುತ ದಿನ ಎಂದು ಆಕೆ ಹೇಳಿಕೊಂಡಿದ್ದಾಳೆ!

ಇದನ್ನೂ ಓದಿ| Elon Musk | ವಿಶ್ವದ ಸಿರಿವಂತ ಎಲಾನ್‌ ಮಸ್ಕ್‌ ಅವರ ತಾಯಿ ಗ್ಯಾರೇಜ್‌ನಲ್ಲಿ ಮಲಗಿದ್ದೇಕೆ?

Exit mobile version